For Quick Alerts
  ALLOW NOTIFICATIONS  
  For Daily Alerts

  ಮಗನ ನೋಡಲು ಜೈಲಿಗೆ ಹೋದ ಶಾರುಖ್ ಖಾನ್

  |

  ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿರುವ ಮಗ ಆರ್ಯನ್ ಖಾನ್ ಅನ್ನು ನೋಡಲು ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಜೈಲಿಗೆ ಹಾಜರಿ ಹಾಗಿದ್ದಾರೆ.

  ಅಕ್ಟೋಬರ್ 03ರಂದು ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದರು. ಅಂದಿನಿಂದ ಇಂದಿನವರೆಗೆ ಶಾರುಖ್ ಖಾನ್ ಮಗನ ಮುಖ ನೋಡಿರಲಿಲ್ಲ. ನ್ಯಾಯಾಲಯದ ವಿಚಾರಣೆಗಳಿಗೂ ಶಾರುಖ್ ಖಾನ್ ಬಂದಿರಲಿಲ್ಲ.

  ಇದೇ ಮೊದಲ ಬಾರಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಕಾಣಲು ಮುಂಬೈನ ಆರ್ಥರ್ ರಸ್ತೆಯ ಜೈಲಿಗೆ ಬಂದಿದ್ದಾರೆ. ಶಾರುಖ್ ಇಂದು ಬೆಳಿಗ್ಗೆ ಆರ್ಥರ್ ರಸ್ತೆಯ ಜೈಲಿಗೆ ಬಂದಿದ್ದು ಮಗನೊಟ್ಟಿಗೆ ಕೆಲ ಕಾಲ ಮಾತುಕತೆಯಾಡಿದ್ದಾರೆ. ಶಾರುಖ್ ಖಾನ್ ಜೈಲಿನ ಒಳಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.

  ಆರ್ಯನ್ ಖಾನ್ ಬಂಧನವಾದ ಮೊದಲ ದಿನದಿಂದಲೂ ಶಾರುಖ್ ಖಾನ್‌ರ ವ್ಯವಸ್ಥಾಪಕಿ ಪೂಜಾ ದದ್ಲಾನಿ ಅವರೇ ಆರ್ಯನ್ ಖಾನ್‌ರ ಬಟ್ಟೆ-ಊಟ ಇನ್ನಿತರೆ ವಿಷಯಗಳನ್ನು ನೋಡಿಕೊಳ್ಳುತ್ತಿದ್ದರು. ಆರ್ಯನ್, ಎನ್‌ಸಿಬಿ ವಶದಲ್ಲಿದ್ದಾಗ ಹಾಗೂ ಆರ್ಥರ್ ಜೈಲಿಗೆ ಸೇರಿಕೊಂಡಾಗ ಪೂಜಾ ದದ್ಲಾನಿ ಬಹುತೇಕ ಪ್ರತಿದಿನ ಆರ್ಯನ್ ಅನ್ನು ಭೇಟಿ ಮಾಡುತ್ತಿದ್ದರು. ಆರ್ಯನ್ ಅನ್ನು ಮೊದಲ ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯದ ಬಳಿ ಗೌರಿ ಖಾನ್ ಕಾಣಿಸಿಕೊಂಡಿದ್ದು ಬಿಟ್ಟರೆ ಆರ್ಯನ್ ಪೋಷಕರು ನ್ಯಾಯಾಲಯಕ್ಕಾಗಲಿ, ಜೈಲಿಗಾಗಲಿ ಬಂದಿರಲಿಲ್ಲ.

  ಅಕ್ಟೋಬರ್ 02ರಂದು ಕ್ರೂಸ್ ಶಿಪ್‌ ಪಾರ್ಟಿಯಲ್ಲಿ ಭಾಗವಹಿಸಲು ತೆರಳಿದ್ದ ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದರು ಅದರ ನಂತರದ ದಿನ ಅಂದರೆ ಅಕ್ಟೋಬರ್ 03ರಂದು ಆರ್ಯನ್ ಖಾನ್, ಅವರ ಗೆಳೆಯ ಅರ್ಬಾಜ್ ಸೇಠ್ ಮರ್ಚೆಂಟ್ ಹಾಗೂ ಮುನ್‌ಮುನ್ ಧಮೇಚಾ ಅವರುಗಳನ್ನು ಎನ್‌ಸಿಬಿ ಬಂಧಿಸಿತು. ಎನ್‌ಸಿಬಿಯು ಆರ್ಯನ್ ಖಾನ್ ಅನ್ನು ಬಂಧಿಸಿದಾಗ ಆರ್ಯನ್ ಬಳಿ ಯಾವುದೇ ಮಾದಕ ವಸ್ತು ಇರಲಿಲ್ಲ. ಆದರೆ ಅರ್ಬಾಜ್ ಮರ್ಚೆಂಟ್‌ ಬಳಿ ಸ್ವಲ್ಪ ಪ್ರಮಾಣದ ಚರಸ್ ದೊರೆತಿತ್ತು

  English summary
  Shah Rukh Khan visited Arthur road jail to meet son Aryan Khan. Shah Rukh Khan's son arrested in drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X