»   » ಏಷ್ಯಾದ ನಂಬರ್ ಒನ್ ಕಾಮಪುರುಷ ಶಾರುಖ್ ಖಾನ್!

ಏಷ್ಯಾದ ನಂಬರ್ ಒನ್ ಕಾಮಪುರುಷ ಶಾರುಖ್ ಖಾನ್!

Subscribe to Filmibeat Kannada

ಲಂಡನ್, ನ.24 : ಏಷ್ಯಾದ ನಂಬರ್ ಒನ್ ಕಾಮ ಪುರುಷ ಎಂಬ ಬಿರುದಿಗೆ ಬಾಲಿವುಡ್ ನಟ ಶಾರುಖ್ ಖಾನ್ ಪಾತ್ರರಾಗಿದ್ದಾರೆ. ಬ್ರಿಟನ್ನಿನ ಈಸ್ಟರ್ನ್ ಐ ವಾರಪತ್ರಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತಿ ಹೆಚ್ಚಿನ ಮತಗಳು ಶಾರುಖ್ ಪಾಲಾಗಿವೆ. ಕಳೆದ ವರ್ಷ ಅಭಿಷೇಕ್ ಬಚ್ಚನ್ ಈ ಸ್ಥಾನ ಪಡೆದಿದ್ದರು.

ಸಾರ್ವಜನಿಕರು ಮತ ಹಾಕಿ ಕಾಮ ಪುರುಷರ ಆಯ್ಕೆ ಮಾಡಲಾಗುತ್ತದೆ. ಪತ್ರಿಕೆ ನೂರು ಕಾಮಪುರುಷರ ಪಟ್ಟಿ ಪ್ರಕಟಿಸಿದ್ದು, ಶಾರುಖ್ ಅಗ್ರ ಸ್ಥಾನದಲ್ಲಿದ್ದಾರೆ. ಓಂ ಶಾಂತಿ ಓಂ ಚಿತ್ರದ ಪ್ರಭಾವವೂ ಶಾರುಖ್ ಆಯ್ಕೆಗೆ ಪರಿಣಾಮ ಬೀರಿರಬಹುದು ಎನ್ನಲಾಗಿದೆ. ಒಳ್ಳೆ ನಟ, ನೃತ್ಯಪಟು ಎರಡೂ ಆಗಿರುವ ಶಾರುಖ್, ಬಾಲಿವುಡ್ ನ ಮೋಡಿಗಾರ. 

ನೂರು ಕಾಮಪುರುಷರ ಪಟ್ಟಿಯಲ್ಲಿರುವ ಇತರೇ ಭಾರತೀಯರ ವಿವರ ; ಹೃತಿಕ್ ರೋಷನ್, ಜಾನ್ ಅಬ್ರಾಹಾಂ, ಅಭಿಷೇಕ್ ಬಚ್ಚನ್, ಅಮೀರ್ ಖಾನ್, ಸಲ್ಮಾನ್ ಖಾನ್, ಆಲಿ ಜಫರ್, ಸೈಫ್ ಆಲಿ ಖಾನ್.  ಮೂರುವರ್ಷಗಳ ಹಿಂದಿನಿಂದ ಏಷ್ಯಾದ ಕಾಮಪುರುಷರ ಆಯ್ಕೆ ಮಾಡುವ ಕೆಲಸವನ್ನು ಈಸ್ಟರ್ನ್ ಐ ಆರಂಭಿಸಿದೆ. ಆಗ ಜಾನ್ ಅಬ್ರಹಾಂ ಆಯ್ಕೆಯಾಗಿದ್ದರು. ಏಷ್ಯಾದ ನಂಬರ್ ಒನ್ ಕಾಮಕನ್ಯೆಯಾಗಿ ಈ ಸಾಲಿನಲ್ಲಿ ಬಿಪಾಶಾ ಆಯ್ಕೆಯಾಗಿದ್ದಾರೆ.

(ಏಜನ್ಸೀಸ್)

ಇನ್ನಷ್ಟು ಬಾಲಿವುಡ್ ಸಮಾಚಾರ :
ಬಿಪಾಷಾ ನಂಬರ್ ಒನ್ ಕಾಮಕನ್ನಿಕೆ

ಕನ್ನಡಿಗರಿಗೆ ಹೇಳಿಕೊಳ್ಳಲು ನಾಚಿಕೆಯೇಕೆ?
ಆರ್ತಿ ಈಗ ಬಾಲಿವುಡ್ ರಸಿಕರ ರಾಣಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada