For Quick Alerts
  ALLOW NOTIFICATIONS  
  For Daily Alerts

  ಪದೇ ಪದೇ 'ಕಿಸ್' ಬಗ್ಗೆ ಪ್ರಶ್ನೆ ಕೇಳಿದ ರಿಪೋರ್ಟರ್ : ಶಾಹಿದ್ ಅಸಮಾಧಾನ

  |
  ಪ್ರೆಸ್ ಮೀಟ್ ನಲ್ಲಿ ಬರೀ ಕಿಸ್ ನದ್ದೇ ಮಾತು..? | FILMIBEAT KANNADA

  'ಅರ್ಜುನ್ ರೆಡ್ಡಿ' ಸಿನಿಮಾ ಎಂದ ತಕ್ಷಣ ನೆನಪಾಗುವುದು ಅದರ ಕಿಸ್ಸಿಂಗ್ ದೃಶ್ಯಗಳು. ಈಗ ಅದೇ ಸಿನಿಮಾ 'ಕಬೀರ್ ಸಿಂಗ್' ಆಗಿ ಬಾಲಿವುಡ್ ನಲ್ಲಿ ಬರುತ್ತಿದೆ. ಈ ಸಿನಿಮಾದಲ್ಲಿ ನಟ ಶಾಹಿದ್ ಕಪೂರ್ ನಟಿಸಿದ್ದಾರೆ.

  ರಿಮೇಕ್ ಎಂದ ಮೇಲೆ 'ಕಬೀರ್ ಸಿಂಗ್' ಚಿತ್ರದಲ್ಲಿಯೂ ಆ ಕಿಸ್ಸಿಂಗ್ ದೃಶ್ಯಗಳು ಪುನರಾವರ್ತನೆಯಾಗಿವೆ. ಶಾಹಿದ್ ಕಪೂರ್ ಹಾಗೂ ನಟಿ ಕಿಯಾರಾ ಅಡ್ವಾಣಿ ನಡುವೆ ಅನೇಕ ಲಿಪ್ ಲಾಕ್ ದೃಶ್ಯಗಳು ಇದೆ. ಇನ್ನು ಇದರ ಬಗ್ಗೆ ಬಂದ ಪ್ರಶ್ನೆಗೆ ನಟ ಶಾಹಿದ್ ಕಪೂರ್ ಉತ್ತರ ನೀಡಿದ್ದಾರೆ.

  'ಕಬೀರ್ ಸಿಂಗ್' ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸಿನಿಮಾ ರಿಪೋರ್ಟರ್ ಒಬ್ಬರು ಪದೇ ಪದೇ ಕಿಸ್ ಬಗ್ಗೆಯೇ ಪ್ರಶ್ನೆ ಕೇಳುತ್ತಿದ್ದರು. ಇದರಿಂದ ಶಾಹಿದ್ ಅಸಮಾಧಾನಗೊಂಡರು.

  ಶಾಹೀದ್ ಕಪೂರ್ ಫ್ಯಾನ್ಸ್ ವಿರುದ್ಧ ದೇವರಕೊಂಡ ಫ್ಯಾನ್ಸ್ ಕೆಂಡಾಮಂಡಲ

  ''ನಿಮಗೆ ಗರ್ಲ್ ಫ್ರೆಂಡ್ ಇಲ್ವಾ..?, ಕಿಸ್ಸಿಂಗ್ ದೃಶ್ಯ ಬಿಟ್ಟು ಸಿನಿಮಾದಲ್ಲಿ ನಾವು ನಟನೆ ಕೂಡ ಮಾಡಿದ್ದೇನೆ ಅದರ ಬಗ್ಗೆ ಮಾತನಾಡಿ'' ಎಂದು ಶಾಹಿದ್ ಉತ್ತರ ನೀಡಿದರು. ಕಾರ್ಯಕ್ರಮದಲ್ಲಿ ಪದೇ ಪದೇ ಕಿಸ್ ಬಗ್ಗೆ ಪ್ರಶ್ನೆ ಬರುತ್ತಿದ್ದು, ಈ ರೀತಿಯ ಪ್ರತಿಕ್ರಿಯೆ ಮೂಲಕ ಅದನ್ನು ತಡೆದಿದ್ದಾರೆ.

  ಅಂದಹಾಗೆ, 'ಕಬೀರ್ ಸಿಂಗ್' ಸಿನಿಮಾ ಪಕ್ಕಾ ಕಲ್ಟ್ ಸ್ಟೈಲ್ ಸಿನಿಮಾವಾಗಿದೆ. ಒಬ್ಬ ಕಾಲೇಜು ಹುಡುಗನ ರಾ ಕಥೆ ಸಿನಿಮಾದಲ್ಲಿದೆ. ಸಂದೀಪ್ ರೆಡ್ಡಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಜೂನ್ 21 ರಂದು ಸಿನಿಮಾ ಬಿಡುಗಡೆಯಾಗಲಿದೆ.

  English summary
  Acor Shahid Kapoor reaction about kissing screen in Kabir Singh movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X