»   » ವಿಶ್ವದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ನಟರಿವರು

ವಿಶ್ವದಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರುವ ನಟರಿವರು

Posted By: Sonu Gowda
Subscribe to Filmibeat Kannada

ಬಾಲಿವುಡ್ ನ ಭಾಯ್ ಜಾನ್ ಸಲ್ಮಾನ್ ಖಾನ್ ಅವರ 'ಸುಲ್ತಾನ್' ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬರೀ ಒಂದೇ ವಾರದಲ್ಲಿ ಭರ್ತಿ 175 ಕೋಟಿ ರೂಪಾಯಿ ಕಮಾಯಿಸಿದೆ. ಈ ಮೂಲಕ ಮತ್ತೆ ಸಲ್ಮಾನ್ ಖಾನ್ ಅವರು ಬಾಕ್ಸಾಫೀಸ್ ಸುಲ್ತಾನ ಅಂತ ಪ್ರೂವ್ ಆಗಿದೆ.

ಇದೀಗ ಒಂದು ಚಿತ್ರದ ಮೂಲಕ ಇಷ್ಟೆಲ್ಲಾ ಕಲೆಕ್ಷನ್ ಮಾಡಿ ಗಳಿಕೆಯಲ್ಲಿ ಅತೀ ಹೆಚ್ಚು ಗಳಿಕೆ ಮಾಡಿ ನಂ.1 ಸ್ಥಾನದಲ್ಲಿರುವ ಸಲ್ಮಾನ್ ಖಾನ್ ಅವರು ಮಾತ್ರ ಫೋರ್ಬ್ಸ್ ಪಟ್ಟಿಯಿಂದ ಹೊರಗುಳಿದಿದ್ದಾರೆ.[100 ಕೋಟಿ ಕ್ಲಬ್ ಸೇರುವ ತವಕದಲ್ಲಿ 'ಸುಲ್ತಾನ್']

Shahrukh and Akshay In Forbes List Of World’s 100 Highest-Paid Stars

ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ ಸೆಲೆಬ್ರಿಟಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಪ್ರತೀವರ್ಷದಂತೆ ಈ ವರ್ಷ ಕೂಡ ಬಿಡುಗಡೆ ಮಾಡಿದ್ದು, ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಸ್ಥಾನ ಗಿಟ್ಟಿಸಿಕೊಂಡಿಲ್ಲ ಎಂಬುದು ಅಚ್ಚರಿಯ ಸಂಗತಿ.

2016 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ವಿಶ್ವದ 100 ಟಾಪ್ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಆಗಿದ್ದು, ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಹೆಸರಿದೆ.[ಗೆಲುವಿನ ಕುದುರೆ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆ ಎಷ್ಟು?]

Shahrukh and Akshay In Forbes List Of World’s 100 Highest-Paid Stars

ಸುಮಾರು 221 ಕೋಟಿ ರೂಪಾಯಿ ಆದಾಯದೊಂದಿಗೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು 86ನೇ ಸ್ಥಾನದಲ್ಲಿದ್ದರೆ, 211 ಕೋಟಿ ರೂಪಾಯಿ ಆದಾಯ ಹೊಂದಿರುವ ನಟ ಅಕ್ಷಯ್ ಕುಮಾರ್ ಅವರು 94 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ವಿಶೇಷವಾಗಿ ಅಮೆರಿಕದ ಗಾಯಕ ಟೇಲರ್ ಸ್ವಿಫ್ಟ್ 1141 ಕೋಟಿ ರೂಪಾಯಿ ಆದಾಯ ಹೊಂದಿರುವ ಪರಿಣಾಮ ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.[24 ವರ್ಷದ ಹಿಂದಿನ ಲವ್ ಸ್ಟೋರಿ ಫಜೀತಿ ಬಿಚ್ಚಿಟ್ಟ ಶಾರುಖ್ ಖಾನ್]

Shahrukh and Akshay In Forbes List Of World’s 100 Highest-Paid Stars

ರಿಯಾಲ್ ಮ್ಯಾಡ್ರಿಡ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಭರ್ಜರಿ 4ನೇ ಸ್ಥಾನದಲ್ಲಿದ್ದು, ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ 11ನೇ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಹಾಗೂ ಗಾಯಕಿ ಮಡೊನ್ನಾ ಅವರು 12ನೇ ಸ್ಥಾನದಲ್ಲಿದ್ದಾರೆ.

English summary
Two Bollywood Superstars are among the world's highest-paid celebrities of 2016, according to an annual list by Forbes. Actor Shah Rukh khan's ranks 86th on the list with earnings of $33 million, while Actor Akshay comes in on the 94th spot with $31.5 million earnings.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada