»   » ಶಾರುಖ್ ಖಾನ್ ಬಕ್ರೀದ್ ಹಬ್ಬಕ್ಕೆ ಬೆಂಗಳೂರು ಆಡು

ಶಾರುಖ್ ಖಾನ್ ಬಕ್ರೀದ್ ಹಬ್ಬಕ್ಕೆ ಬೆಂಗಳೂರು ಆಡು

Posted By:
Subscribe to Filmibeat Kannada
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಆಚರಿಸುವ ಬಕ್ರೀದ್ ಹಬ್ಬಕ್ಕೂ ಬೆಂಗಳೂರಿಗೂ ಭಾರಿ ನಂಟಿದೆ. ಈ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇದೀಗ ಬಕ್ರೀದ್ ಹಬ್ಬ ಸಮೀಪಿಸುತ್ತಿರುವುದರಿಂದ ಶಾರುಖ್ ಖಾನ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ ಬೆಂಗಳೂರಿನ ಆಡು ಮಾರಾಟಗಾರ ಮೊಹಮ್ಮದ್ ಎಂಡಿ ಇಬ್ರಾಹಿಂ. ಇವರು ಕಳೆದ 2 ವರ್ಷಗಳಿಂದ ಬಕ್ರೀದ್ ಹಬ್ಬಕ್ಕಾಗಿ ಶಾರುಖ್ ಅವರಿಗೆ ಆಡುಗಳನ್ನು 'ಸಪ್ಲೈ' ಮಾಡುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶಾರುಖ್ ಅವರಿಗಾಗಿ ಆಡುಗಳನ್ನು ಬೆಂಗಳೂರಿನಿಂದ ಕಳುಹಿಸುತ್ತಿರುವ ಮೊಹಮ್ಮದ್ ಎಂಡಿ ಇಬ್ರಾಹಿಂ "ನಾನು ಕಳೆದ ವರ್ಷ ಶಾರುಖ್ ಅವರಿಗಾಗಿ ರು. 5 ಲಕ್ಷ ಬೆಲೆಬಾಳುವ ಆಡುಗಳನ್ನು ಕಳಿಸಿದ್ದೆ. ಈ ಬಾರಿ ಕೂಡ ಅವರ ಬಕ್ರೀದ್ ಆರಣೆಗಾಗಿ ಆಡುಗಳನ್ನು ಕಳುಹಿಸಲಿದ್ದೇನೆ. ಈ ಬಾರಿ 22 ಆಡುಗಳನ್ನು ಕಳುಹಿಸುವ ಯೋಜನೆಯಿದ್ದು ಇದರ ಬೆಲೆ ಸುಮಾರು 7 ಲಕ್ಷ ರು. ಆಗಲಿದೆ" ಎಂದಿದ್ದಾರೆ.

ಮೊಹಮ್ಮದ್ ಎಂಡಿ ಇಬ್ರಾಹಿಂ ಬೆಳೆಸುವ ಆಡುಗಳು ತುಂಬಾ ವಿಶೇಷವಾಗಿರುತ್ತವೆಯಂತೆ. ಕಾರಣ, ಅವರು ಆಡುಗಳಿಗೆ ಕಾಶ್ಯು, ಬಾದಾಮಿ ಹಾಗೂ ಪಿಸ್ಟಾಗಳನ್ನು ತಿನ್ನಿಸಿ ಬೆಳೆಸುತ್ತಾರಂತೆ. ಅಷ್ಟೇ ಅಲ್ಲ, ದಿನವೂ ಆ ಆಡುಗಳಿಗೆ ಆಹಾರವಾಗಿ 2 ಮೊಟ್ಟೆ ಹಾಗೂ 2 ಲೀಟರ್ ಹಾಲನ್ನೂ ಕೂಡ ಅವರು ಬಳಸುತ್ತಾರಂತೆ. ಅವರು ಮಾಡುವ ಭಾರೀ ಆರೈಕೆಯಿಂದ ಕೊಬ್ಬಿರುವ ಅವುಗಳು ಮಿಕ್ಕ ಆಡುಗಳಿಗಿಂತ ಗಾತ್ರ ಹಾಗೂ ತೂಕದಲ್ಲಿ ಗಮನಾರ್ಹವಾಗಿ ಹೆಚ್ಚಾಗಿರುತ್ತವೆಯಂತೆ. (ಬಕ್ರೀದ್ ಆಚರಣೆ ಹೇಗೆ?: ಓದಿ...)

ಒಟ್ಟಿನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಬೆಂಗಳೂರಿನ ಆಡುಗಳ ಮೇಲೆ ಕಣ್ಣು ಬಿದ್ದಿದೆ ಅಂದ ಹಾಗಾಯಿತು. ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಈ ವ್ಯವಹಾರ ಇದೀಗ 3 ನೇ ವರ್ಷಕ್ಕೆ ಕಾಲಿಟ್ಟಿದೆ. ಬೆಂಗಳೂರು ಏಜೆಂಟ್ ಮೊಹಮ್ಮದ್ ಎಂಡಿ ಇಬ್ರಾಹಿಂ ಈಗ ಶಾರುಖ್ ಅವರಿಗೆ ಕಳುಹಿಸುವ ಆಡುಗಳ ಆರೈಕೆಯಲ್ಲಿ ಭಾರಿ ಬಿಜಿಯಾಗಿದ್ದಾರೆ. ಬೆಂಗಳೂರಿನಿಂದ ಬರಲಿರುವ ಆಡುಗಳಿಗಾಗಿ ಅಲ್ಲಿ ಮುಂಬೈನಲ್ಲಿ ಶಾರುಖ್ ಕಾಯುತ್ತಿದ್ದಾರೆ, ಹೇಗಿದೆ ನೋಡಿ ಶಾರುಖ್ ಬಕ್ರೀದ್ ಸಮಾಚಾರ್...(ಏಜೆನ್ಸೀಸ್)

English summary
As Bakrid approaches, Mohammad MD Ibrahim, the Bangalorian claims that a small portion of the sacrificed goat does go to Khan. He added that he had been sending goats and sheep to Mumbai for the past 2 years and he had sent a goat to Mumbai for the actor at a cost of Rs. 5 lakhs.
 
Please Wait while comments are loading...