»   » ಜಬ್ ತಕ್ ಹೇ ಜಾನ್ ಪ್ರೀಮಿಯರ್ ನಲ್ಲಿ ನಡೆದಿದ್ದೇನು?

ಜಬ್ ತಕ್ ಹೇ ಜಾನ್ ಪ್ರೀಮಿಯರ್ ನಲ್ಲಿ ನಡೆದಿದ್ದೇನು?

Posted By:
Subscribe to Filmibeat Kannada
<ul id="pagination-digg"><li class="next"><a href="/bollywood/jab-tak-hai-jaan-shahrukh-khan-katrina-kaif-salman-khan-069556.html">Next »</a></li></ul>

ನಿನ್ನೆ (13 ನವೆಂಬರ್ 2012) ಜಗತ್ತಿನಾದ್ಯಂತ ಬಿಡುಗಡೆಯಾಗಿ ಭಾರಿ ಹವಾ ಸೃಷ್ಟಿಸಿರುವ ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ 'ಜಬ್ ತಕ್ ಹೇ ಜಾನ್' ಚಿತ್ರದ ಪ್ರೀಮಿಯರ್ ಶೊದಲ್ಲಿ ನಡೆದ ಘಟನೆಯೊಂದು ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಆ ಶೊಗೆ ಶಾರುಖ್ ಖಾನ್ ಬದ್ಧ ವೈರಿ ಎಂದೇ ಹೇಳಲಾಗುತ್ತಿರುವ ಸಲ್ಮಾನ್ ಖಾನ್ ಬಂದಿದ್ದರು. ಅಷ್ಟೇ ಅಲ್ಲ, ಸಲ್ಲೂ ಎದುರಿಗೇ ಶಾರುಖ್ ಕತ್ರಿನಾ ಪರವಾಗಿ ಮಾತನಾಡಿರುವ ಘಟನೆ ನಡೆದಿದೆ.

ತುಂಬಾ ಕುತೂಹಲ ಕೆರಳಿಸಿರುವ ಈ ಘಟನೆಯ ವಿವರ ಇಲ್ಲಿದೆ ಓದಿ... ಶಾರುಖ್ ಖಾನ್ ಹಾಗೂ ಕತ್ರಿನಾ ಜೋಡಿಯ ಈ ಚಿತ್ರದ 'ಪ್ರೀಮಿಯರ್ ಶೋ' ಗೆ ಸಲ್ಮಾನ್ ಖಾನ್ ಹೋಗಿದ್ದೇ ಒಂದು ದೊಡ್ಡ ಪವಾಡ ಹಾಗೂ 'ಶಾಕ್' ನ್ಯೂಸ್. ಆದರೆ ಅದಕ್ಕೊಂದು ಬಲವಾದ ಕಾರಣವಿದೆ. ಅದು, ಇತ್ತೀಚಿಗಷ್ಟೇ ಸೂಪರ್ ಹಿಟ್ ದಾಖಲಿಸಿರುವ ಸಲ್ಮಾನ್ 'ಏಕ್ ಥಾ ಟೈಗರ್' ಚಿತ್ರವು ಇದೇ ಯಶ್ ರಾಜ್ ಫಿಲಂ ಬ್ಯಾನರ್ ನಿರ್ಮಾಣದ್ದು. ಹೀಗಾಗಿ ಸಹಜವಾಗಿಯೇ ಯಶ್ ಬ್ಯಾನರ್ ಕಡೆಯಿಂದ ಸಲ್ಲೂಗೆ ಆಮಂತ್ರಣ ಹೋಗಿದೆ.

ಆಮಂತ್ರಣಕ್ಕೆ ಪ್ರತಿಯಾಗಿ ನಿರಾಸೆ ಮಾಡಲು ಇಷ್ಟಪಡದ ಸಲ್ಲೂ ಆ ಪ್ರೀಮಿಯರ್ ಶೋಗೆ ಹೋಗಿದ್ದಾರೆ. ಇದರ ಜೊತೆ ಇರುವ ಇನ್ನೊಂದು ಕಾರಣ, 'ಜಬ್ ತಕ್ ಹೇ ಜಾನ್' ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ನಟಿಸಿರುವುದು ಸಲ್ಮಾನ್ ಖಾನ್ ಅವರ ಆಪ್ತ ಗೆಳತಿ ಕತ್ರಿನಾ ಕೈಫ್. ಅಷ್ಟೇ ಅಲ್ಲ, ಈ ಚಿತ್ರವು ಇತ್ತೀಚಿಗಷ್ಟೇ ವಿಧಿವಶರಾದ ಯಶ್ ಚೋಪ್ರಾ ಅವರ ನಿರ್ಮಾಣದ ಕೊನೆಯ ಚಿತ್ರ. ಸಲ್ಲೂ ಹೋಗಿರುವುದರ ಹಿಂದೆ ಇಷ್ಟೊಂದು ಕಾರಣಗಳಿವೆ.

ಹೀಗಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಶಾರುಖ್ ಖಾನ್ ಚಿತ್ರದ ಪ್ರೀಮಿಯರ್ ಶೋಗೆ ಸಲ್ಮಾನ್ ಖಾನ್ ಹಾಜರಿ ಹಾಕಿದ್ದರು. ಚಿತ್ರವನ್ನು ವೀಕ್ಷಿಸಿದ ಸಲ್ಲೂ ಚಿತ್ರದ ಬಗ್ಗೆ ಏನೆಂದರು ಎಂಬ ಮಾಹಿತಿ ಸದ್ಯಕ್ಕೆ ಇಲ್ಲವಾದರೂ ಅದಕ್ಕಿಂತ ವಿಶೇಷ ಎನ್ನಬಹುದಾದ, ಅಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಆ ವೇಳೆ ಸಲ್ಮಾನ್ ಖಾನ್ ಕೂಡ ಉಪಸ್ಥಿತರಿದ್ದರು ಎಂಬುದು ನಿಮ್ಮ ಗಮನದಲ್ಲಿರಲಿ. ಮುಂದಿನ ಪುಟ ನೋಡಿ... 

<ul id="pagination-digg"><li class="next"><a href="/bollywood/jab-tak-hai-jaan-shahrukh-khan-katrina-kaif-salman-khan-069556.html">Next »</a></li></ul>
English summary
Shahrukh Khan defended Jab Tak Hai Jaan leading lady Katrina Kaif in the premiere, in presence of Salman Khan.&#13; &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada