»   » ಬಾಲಿವುಡ್ಡಿನ ಅತಿ ಶ್ರೀಮಂತ ನಟ ಕಿಂಗ್ ಖಾನ್

ಬಾಲಿವುಡ್ಡಿನ ಅತಿ ಶ್ರೀಮಂತ ನಟ ಕಿಂಗ್ ಖಾನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಚೆನ್ನೈ ಎಕ್ಸ್ ಪ್ರೆಸ್ ಏರಿದ್ದೇ ತಡ ಕಿಂಗ್ ಖಾನ್ ಶಾರುಖ್ ಲಕ್ ತಿರುಗಿ ಬಿಟ್ಟಿದೆ. ಇತ್ತೀಚೆಗೆ Hurun India ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶಾರುಖ್ ಖಾನ್ ಅವರು ಬಾಲಿವುಡ್ಡಿನ ಅತ್ಯಂತ ಶ್ರೀಮಂತ ನಟ ಎನಿಸಿದ್ದಾರೆ. ಜತೆಗೆ ಶಾರುಖ್ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ 114ನೇ ಸ್ಥಾನ ಪಡೆದಿದ್ದು ಸುಮಾರು 400 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಎಂದಿನಂತೆ ಶ್ರೀಮಂತರರ ಪಟ್ಟಿಯಲ್ಲಿ ರಿಲಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ ಅವರು 18.9 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಲಂಡನ್ನಿನಲ್ಲಿರುವ ಭಾರತದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರು ಎರಡನೇ ಸ್ಥಾನದಲ್ಲಿದ್ದು 15 ಬಿಲಿಯನ್ ಯುಎಸ್ ಡಾಲರ್ ಗಳಿಸಿದ್ದಾರೆ.

ಭಾರತೀಯ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಶಾರುಖ್ ಖಾನ್ ಅವರು ಹೊಸ ಸಾಧನೆ ಮಾಡಿದ್ದಾರೆ. ಬಾಲಿವುಡ್ಡಿನ ಬೇರೆ ಯಾವುದೇ ನಟ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಸಂಸ್ಥೆಯ ಸಹ ಮಾಲೀಕರಾಗಿರುವ ಶಾರುಖ್ ಖಾನ್ ಅವರು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡು ಯಶಸ್ಸಿನ ಹಾದಿಯಲ್ಲಿದ್ದಾರೆ.

Shahrukh Khan Enters Richest Indian List

47 ವರ್ಷದ ಶಾರುಖ್ ಖಾನ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿದ್ದಾರೆ. 1999ರಿಂದ ಜಾಹೀರಾತು ಲೋಕದಲ್ಲಿ ಶಾರುಖ್ ಸದ್ದು ಮಾಡುತ್ತಲೇ ಇದ್ದಾರೆ. ನೋಕಿಯಾ, ಟಾಟಾ ಟೀ, ಲಕ್ಸ್, ಫ್ರೂಟಿ, ಇಮಾಮಿ ಸೌಂದರ್ಯ ವರ್ಧಕ ಕ್ರೀಮ್, ಪೆಪ್ಸಿಡೆಂಟ್, ಹ್ಯುಂಡೈ ಕಾರು, ನವರತ್ನ ಆಯಿಲ್, ಏರ್ ಟೆಲ್, ಟ್ಯಾಗ್ ಹ್ಯೂವರ್ ವಾಚ್, ವಿಡಿಯೋಕಾನ್, ನೆರೋಲ್ಯಾಕ್ ಪೈಂಟ್ಸ್, ಲಿಂಕ್ ಪೆನ್ಸ್, ಕಾಂಪಾಕ್ ಡಿ ಡಿಕೋರ್, ಪೆಪ್ಸಿ, ಸ್ಪೈಟ್, ಡಿಶ್ ಟಿವಿ, ಸನ್ ಫೀಸ್ಟ್, ಬೆಲ್ ಮೊಂಟೆ, ಸೇರಿದಂತೆ ಹತ್ತು ಹಲವು ಪ್ರಮುಖ ಕಂಪನಿಗಳು ಶಾರುಖ್ ಅವರ ಜೇಬು ತುಂಬಿಸಿವೆ.

ಇದಲ್ಲದೆ ಖ್ಯಾತ ಉದ್ಯಮಿಗಳು, ಸಿನಿತಾರೆಯರ ಮದುವೆ, ಶುಭ ಸಮಾರಂಭಗಳಲ್ಲಿ ಹಾಡಿ ಕುಣಿಯಲು ಶಾರುಖ್ ಅವರು ಭಾರಿ ಮೊತ್ತ ಬೇಡುತ್ತಾರೆ. ಇತ್ತೀಚೆಗೆ ಹ್ಯಾಪಿ ನ್ಯೂ ಇಯರ್ ಚಿತ್ರದ ಚಿತ್ರೀಕರಣದ ಜತೆಗೆ ದುಬೈನಲ್ಲಿ ಮದುವೆ ಸಮಾರಂಭವೊಂದರಲ್ಲಿ ಕೆಲಕಾಲ ಕಾಣಿಸಿಕೊಂಡು ಕುಣಿದು ಕುಪ್ಪಳಿಸಿದ್ದಕ್ಕೆ ಬರೋಬ್ಬರಿ 8 ಕೋಟಿ ರು ಗಳಿಸಿದ್ದಾರೆ.

ಕಿಂಗ್ ಖಾನ್ ಶಾರುಖ್ ಪಾಲ್ ಜುಮೆರಾದಲ್ಲಿ ಅದ್ಭುತ ಮನೆಗಳನ್ನು ಹೊಂದಿದ್ದಾರೆ. ಬ್ರಾಡ್ ಪಿಟ್, ಏಂಜಲೀನಾ ಜೋಲಿ, ಬಿಲ್ ಕ್ಲಿಂಟನ್ ಇವರ ಮನೆಗೆ ನೆರೆ ಮನೆಯವರಾಗಿದ್ದಾರೆ.

hurun ಇಂಡಿಯಾ ಸಮೀಕ್ಷೆ ಪ್ರಕಾರ ಭಾರತದಲ್ಲಿರುವ 141 ಮಂದಿಯ ನಿವ್ವಳ ಗಳಿಕೆ 300 ಮಿಲಿಯನ್ ಡಾಲರ್ ಗೂ ಅಧಿಕವಿದೆ. ಟಾಪ್ 100ರಲ್ಲಿರುವ ವ್ಯಕ್ತಿಗಳ ಗಳಿಕೆ ಮೌಲ್ಯ 221 ಬಿಲಿಯನ್ ಡಾಲರ್ ನಿಂದ 250 ಬಿಲಿಯನ್ ಡಾಲರ್ ತೂಗುತ್ತದೆ ಎನ್ನಲಾಗಿದೆ.

English summary
In a recent poll conducted by the Hurun India, Shahrukh has been named as the 114th richest person in India with anet worth of $400 million. The list has been topped by the owner of Reliance Private Ltd. With a personal wealth of $18.9 billion while the second person on the list was London based entrepreneur Lakshmi Mittal, whose net worth is $15 billion.
Please Wait while comments are loading...