For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ವಿರುದ್ಧ ಶಾರುಖ್ ಖಾನ್ ಫ್ಯಾನ್ಸ್ ಗರಂ

  |

  ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಹವಾ ಜೋರಾಗಿದೆ. ಸೈಲೆಂಟ್ ಆಗಿ ಸಿನಿಮಾ ಮಾಡುತ್ತಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಅಕ್ಷಯ್ ಕುಮಾರ್ ಬಿ ಟೌನ್ ನಲ್ಲಿ ಸ್ಟಾರ್ ಆಗಿ ಮೆರೆಯುತ್ತಿದ್ದು, ಕೆಲವು ನಟರ ಸ್ಟಾರ್ ಡಮ್ ಕಮ್ಮಿ ಆಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಈ ಮಾತುಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಖ್ಯಾತ ನಿರ್ಮಾಪಕ ಕರಣ್ ಜೋಹರ್, ಅಕ್ಷಯ್ ಕುಮಾರ್ ಸ್ಟಾರ್ ಡಮ್ ಮುಂದೆ ಶಾರುಖ್ ಖಾನ್ ಸ್ಟಾರ್ ಡಮ್ ಕಮ್ಮಿ ಆಗಿದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

  ಕಲೆಕ್ಷನ್ ನಲ್ಲಿ 'ಕೆಜಿಎಫ್' ಎದುರು ಮಂಡಿಯೂರಿದ 'ಜೀರೋ'.!

  ಅಕ್ಷಯ್ ಕುಮಾರ್ ಕೇಸರಿ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹಾಗಾಗಿ ಅಕ್ಷಯ್ ಅಭಿಮಾನಿಗಳು ಶಾರುಖ್ ಖಾನ್ ಅವರನ್ನು ಕಾಲೆಯುತ್ತಿದ್ದಾರೆ. ಶಾರುಖ್ ಅಭಿನಯದ 'ಜೀರೋ' ಸಿನಿಮಾದ ಒಂದು ವಾರದ ಕಲೆಕ್ಷನ್ ಗಿಂತ ಕೇಸರಿ ಸಿನಿಮಾದ ಅರ್ಧ ದಿನದ ಕಲೆಕ್ಷನ್ ಜಾಸ್ತಿ ಇದೆ. ಶಾರುಖ್ ಸ್ಟಾರ್ ಡಮ್ ಕಮ್ಮಿ ಆಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಕರಣ್ ಜೋಹರ್ ಲೈಕ್ ಮಾಡಿ ರೀ ಟ್ವೀಟ್ ಮಾಡಿದ್ದಾರೆ.

  ಕರಣ್ ಮತ್ತು ಶಾರುಖ್ ಇಬ್ಬರು ಬಾಲಿವುಡ್ ನ ಉತ್ತಮ ಗೆಳೆಯರು. ಹೀಗಿದ್ದರೂ ಕರಣ್ ಯಾಕೆ ಹೀಗೆ ಮಾಡಿದ್ದಾರೆ ಅಂತ ಶಾರುಖ್ ಅಭಿಮಾನಿಗಳು ಕರಣ್ ಅವರನ್ನು ಟ್ವಿಟ್ಟರ್ ನಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೆಯಲ್ಲಾ 'ಶೇಮ್ ಆನ್ ಕರಣ್ ಜೋಹರ್' ಅಂತ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಮಾಡುತ್ತಿದ್ದಾರೆ. ಈ ಅಭಿಯಾನ ಟ್ವಿಟ್ಟರ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ.

  'ಝೀರೋ' ಟ್ವಿಟ್ಟರ್ ವಿಮರ್ಶೆ: ನಿರೀಕ್ಷೆ ಹುಸಿಗೊಳಿಸುವ ಸಿನಿಮಾ.!

  ತಾರಕಕ್ಕೇರಿದ ಅಭಿಮಾನಿಗಳ ಗಲಾಟೆ ನೋಡಿದ ಕರಣ್ ತಕ್ಷಣ, 'ಟ್ವಿಟ್ಟರ್ ಖಾತೆಯಲ್ಲಿ ತಾಂತ್ರಿಕ ಸಮಸ್ಯೆ ಆಗಿದೆ. ಹಾಗಾಗಿ ಲೈಕ್ ಆಗಿದೆ. ಏನು ಬರೆದಿದ್ದಾರೆ ಎನ್ನುವುದನ್ನೇ ನಾನು ಓದಿಲ್ಲ. ದಯವಿಟ್ಟು ಕ್ಷಮಿಸಿ' ಎಂದು ಟ್ವೀಟ್ ಮಾಡಿದ್ದಾರೆ.

  ಇದಕ್ಕೆ ಪ್ರತಿಯಾಗಿ ಶಾರುಖ್ ಖಾನ್ ಕೂಡ ಟ್ವೀಟ್ ಮಾಡಿದ್ದಾರೆ. 'ಕರಣ್ ಜೋಹರ್ ಸ್ಪಷ್ಟನೆ ನೀಡಿರುವುದು ಇಷ್ಟವಾಗಲಿಲ್ಲ. ಟ್ವಿಟ್ಟರ್ ನಲ್ಲಿ ತೊಂದರೆ ಆಗುವುದು ಸಹಜ. ಇದರಿಂದ ಯುದ್ಧ ಮಾಡುವ ಅವಶ್ಯಕತೆ ಇಲ್ಲ. ಪ್ರೀತಿ ಮಾಡಿ ಇದು ಇನ್ನೂ ಖುಷಿ ಕೊಡುತ್ತೆ' ಅಂತ ಹೇಳಿದ್ದಾರೆ.

  ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಸ್ಟಾರ್ ಡಮ್ ಹೆಚ್ಚಿಕೊಳ್ಳುತ್ತಿರುವ ಅಕ್ಷಯ್ ಕಮಾರ್ ಮತ್ತು ಇತ್ತೀಚಿನ ದಿನಗಳಲ್ಲಿ ಫ್ಲಾಪ್ ಸಿನಿಮಾಗಳನ್ನು ನೀಡುತ್ತಿರುವ ಶಾರುಖ್ ಅಭಿಮಾನಿಗಳ ನಡುವಿನ ವಾರ್ ಎಲ್ಲಿವರೆಗೂ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಅಂದ್ರೆ, ಕರಣ್ ಜೋಹರ್ ಬ್ಯಾನರ್ ನಲ್ಲಿ ಕೇಸರಿ ನಿರ್ಮಾಣವಾಗಿದೆ.

  English summary
  Karan Johar is receiving much hate from Shah Rukh Khan fans on Twitter after he accidentally liked a tweet that abused SRK and compared his stardom to that of Akshay Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X