For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಕಡೆ ಸರಿದ ಶಾರುಖ್ ಆಪ್ತಮಿತ್ರ!

  |

  ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಹೆಸರು ಬಾಲಿವುಡ್ ನಲ್ಲಿ ಚಿರಪರಿಚಿತ. ಅವರಿಬ್ಬರೂ ಕೇವಲ ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿಗಳು ಮಾತ್ರವಲ್ಲದೇ ಆತ್ಮೀಯ ಮಿತ್ರರೂ ಕೂಡ. ಅವರಿಬ್ಬರ ಗೆಳೆತನದ ಬಗ್ಗೆ 'ನಂಬಿದರೆ ನಂಬಿ, ಬಿಟ್ರೆ ಬಿಡಿ' ಎಂಬಂತಹ ಕಥೆಗಳೂ ಬಾಲಿವುಡ್ ಅಂಗಳದಲ್ಲಿ ಬೇಕಾದಷ್ಟಿವೆ. ಇಂಥ ಗೆಳೆಯರ ಮಧ್ಯೆ ಈಗ ಬಿರುಕು ಮೂಡಿದೆಯೇ? ಹಾಗೆಂಬ ಸುದ್ದಿಯೇನಿಲ್ಲ.

  ಆದರೆ ಶಾರುಖ್ ಜೀವದ ಗೆಳೆಯ ಕರಣ್ ಜೋಹರ್, ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ಸಲ್ಮಾನ್ ಖಾನ್ ಅವರ ಯಶಸ್ಸಿಗೆ ಬೆಕ್ಕಸ ಬೆರಗಾಗಿದ್ದಾರೆ. ಶಾರುಖ್ ಖಾನ್ ಅವರ ಬಗ್ಗೆ ಯಾವುದೇ ಅಪಸ್ವರ ಕರಣ್ ಬಾಯಿಂದ ಹೊರಬರುತ್ತಿಲ್ಲವಾದರೂ ಪದೇ ಪದೇ ಶಾರುಖ್ ಬದಲು ಸಲ್ಮಾನ್ ಖಾನ್ ಖಾನ್ ಹೆಸರನ್ನು ಅವರು ಪದೇಪದೇ ಜಪಿಸುತ್ತಿದ್ದಾರೆ. ಶಾರುಖ್ ಹಾಗೂ ಸಲ್ಮಾನ್ ಮಧ್ಯೆ ಸಂಬಂಧ ಅಷ್ಟಕಷ್ಟೇ, ಅವರಿಬ್ಬರು ಶತ್ರುಗಳ ಸಮಾನ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸತ್ಯ.

  ಹೀಗಿರುವಾಗ ಸಲ್ಲೂ ಹಿಂದೆ ಕರಣ್ ಜೋಹರ್ ಬಿದ್ದಿರುವುದು ಬಾಲಿವುಡ್ ನಲ್ಲಿ ಹಲವರ ನಿದ್ದೆ (ಶಾರುಖ್ ನಿದ್ದೆ ಕೆಟ್ಟ ಬಗ್ಗೆ ಸುದ್ದಿಯಿಲ್ಲ!) ಕೆಡಿಸಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ "ನಾನು ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಲು ಬಯಸುತ್ತಿದ್ದೇನೆ. ನನ್ನ ಮೊದಲ ಚಿತ್ರದಲ್ಲಿ ಅವರೊಟ್ಟಿಗೆ ನಾನು ಕೆಲಸ ಮಾಡಿದ್ದೇನೆ. ಆ ಚಿತ್ರವನ್ನು ಅವರು ನನ್ನ ತಂದೆಯವರಿಗಾಗಿ ಮಾಡಿದ್ದರೂ ನಾನೂ ಅದರಲ್ಲಿ ಭಾಗಿಯಾಗಿದ್ದೆ. ಹೀಗಾಗಿ ನಾನು ಸಲ್ಲೂ ಬಗ್ಗೆ ಚೆನ್ನಾಗಿ ಬಲ್ಲೆ.

  ಈಗ ಬಾಲಿವುಡ್ ನ ಅತ್ಯಂತ ಬೇಡಿಕೆ ನಟ ಹಾಗೂ ಸೂಪರ್ ಸ್ಟಾರ್ ಆಗಿರುವ ಸಲ್ಲೂ ಜೊತೆ ಎಲ್ಲರೂ ಕೆಲಸ ಮಾಡಲು ಇಷ್ಟಪಡುವುದು ಸಹಜ. ನಾನೂ ಕೂಡ ಅದಕ್ಕೆ ಹೊರತಲ್ಲ" ಎಂದಿದ್ದಾರೆ ಕರಣ್ ಜೋಹರ್. ಒಟ್ಟಿನಲ್ಲಿ ಎಲ್ಲರೂ ಸಲ್ಲೂ ಹಿಂದೆ ಬಿದ್ದಿರುವಾಗ ತಾನೊಬ್ಬ ಬೇರೆ ದಾರಿ ಹಿಡಿದಂತಾಗಬಾರದು ಎಂಬುದು ಕರಣ ಲೆಕ್ಕಾಚಾರವೋ ಅಥವಾ ನಿಜವಾಗಿಯೂ ಶಾರುಖ್ ಸಹವಾಸ ಸಾಕು ಎಂದು ನಿರ್ದರಿಸಿದ್ದಾರೋ ಎಂಬ ಸತ್ಯ ತಿಳಿಯುವ ತನಕ ಕಾಯಲೇಬೇಕು. (ಏಜೆನ್ಸೀಸ್)

  English summary
  Shahrukh Khan best friend Karan Johar says that he will feel honored if he will get the opportunity to work with superstar Salman Khan.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X