»   » ಬಾತುಕೋಳಿಯಂತಾದ ಕಿಂಗ್ ಖಾನ್ ಶಾರುಖ್ ಖಾನ್

ಬಾತುಕೋಳಿಯಂತಾದ ಕಿಂಗ್ ಖಾನ್ ಶಾರುಖ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನಾಯಕನಟನಾಗಿ ರೂಪಗೊಳ್ಳುತ್ತಿರುವ ಚಿತ್ರ 'ಫ್ಯಾನ್'. ಈ ಚಿತ್ರದ ಶೂಟಿಂಗ್ ಕಳೆದ ಕೆಲದಿನಗಳಿಂದ ಕ್ರೊಯೇಷಿಯಾದಲ್ಲಿ ಭರದಿಂದ ಸಾಗುತ್ತಿದೆ. ಸಾಹಸ ಚಿತ್ರೀಕರಣದ ಸಂದರ್ಭದಲ್ಲಿ ಶಾರುಖ್ ಖಾನ್ ಕಾಲು ಉಳುಕಿದೆ.

ದ್ವಿಚಕ್ರವಾಹನದಲ್ಲಿ ಶಾರುಖ್ ರನ್ನು ಬೆನ್ನತ್ತುವ ಸನ್ನಿವೇಶವದು. ಶಾರುಖ್ ಅವರನ್ನು ಹಿಡಿಯುವ ಸನ್ನಿವೇಶದಲ್ಲಿ ಅವರು ಗಾಯಗೊಂಡಿದ್ದಾರೆ. ಆದರೂ ಚಿತ್ರೀಕರಣಕ್ಕೆ ತೊಂದರೆಯಾಗದಂತೆ ಅವರು ಸಹಕರಿಸಿದ್ದಾರೆ. ಈ ಮೂಲಕ ನಿರ್ಮಾಪಕರು ನಿಟ್ಟುಸಿರುಬಿಡುವಂತಾಗಿದೆ.

Shahrukh Khan injured on the sets of Fan

ಈ ಬಗ್ಗೆ ಮಾತನಾಡಿರುವ ಶಾರುಖ್, "ಓಡುತ್ತಿರಬೇಕಾದರೆ ಕಾಲು ಹಿಡ್ಕೊಂಡ್ ಬಿಡ್ತು. ದೊಡ್ಡ ಸಮಸ್ಯೆಯೇನು ಆಗಲಿಲ್ಲ. ಇಂಜೆಕ್ಷನ್ ಮೂಲಕ ನೋವನ್ನು ಕಡಿಮೆ ಮಾಡಿಕೊಂಡಿದ್ದೇನೆ. ಆದರೂ ಬಾತುಕೋಳಿ ತರಹ ನಡೆಯಬೇಕಾಗಿದೆ. ನನಗೆ ಬಾತುಕೋಳಿ ಎಂದರೆ ಆಗಲ್ಲ...ಆದರೂ ವಿಧಿಯಿಲ್ಲ" ಎಂದಿದ್ದಾರೆ.

ಈ ಚಿತ್ರದಲ್ಲಿ ಶಾರುಖ್ ಖಾನ್ ಗೆ ಜೊತೆಯಾಗಿ ವಾಣಿ ಕಪೂರ್ ಅಭಿನಯಿಸುತ್ತಿದ್ದಾರೆ. ಇನ್ನೂ ಬಾಕ್ಸ್ ಆಫೀಸಲ್ಲಿ ಓಡುತ್ತಿರುವ ಕುದುರೆ ಶಾರುಖ್ ಖಾನ್. ಅವರ ಹ್ಯಾಪಿ ನ್ಯೂ ಈಯರ್ ಚಿತ್ರ ಬಾಕ್ಸ್ ಆಫೀದಲ್ಲಿ ರು.300 ಕೋಟಿ ಕಲೆಕ್ಷನ್ ಮಾಡಿ ಬಾಲಿವುಡ್ ನಿಬ್ಬೆರಗಾಗುವಂತೆ ಮಾಡಿತ್ತು.

ಇದಿಷ್ಟೇ ಅಲ್ಲದ ಅವರ ದಿಲ್ ವಾಲೆ ದುಲ್ಹನಿಯಾ ಲೇಜಾಯೇಂಗೆ ಚಿತ್ರ ಇದೇ ಶುಕ್ರವಾರಕ್ಕೆ ಸಾವಿರ ಪ್ರದರ್ಶನಗಳನ್ನು ಪೂರ್ಣಗೊಳಿಸಿದೆ. ಸದ್ಯಕ್ಕೆ ಬ್ಯಾಂಡ್ ಬಾಜಾ ಭಾರತ್, ಶುದ್ಧ್ ದೇಶಿ ರೊಮಾನ್ಸ್ ಚಿತ್ರಗಳನ್ನು ನಿರ್ದೇಶಿರುವ ಮನೀಷ್ ತಿವಾರಿ ಅವರ ಚಿತ್ರದಲ್ಲಿ ಶಾರುಖ್ ಅಭಿನಯಿಸುತ್ತಿದ್ದಾರೆ.

ಇನ್ನು ಫ್ಯಾನ್ ಚಿತ್ರದ ವಿಚಾರಕ್ಕೆ ಬಂದರೆ, ಇಲ್ಲಿ ಶಾರುಖ್ ತನಗೆ ತಾನೇ ಅಭಿಮಾನಿಯಾಗಿ ಕಾಣಿಸಲಿದ್ದಾರೆ. ಕೊಂಚ ಕುತೂಹಲ, ಕೊಂಚ ಭಿನ್ನವಾಗಿರುವ
ಕಾರಣ ಶಾರುಖ್ ಈ ಚಿತ್ರವನ್ನು ಕೂಡಲೆ ಒಪ್ಪಿಕೊಂಡರು ಎಂಬುದು ಬಾಲಿವುಡ್ ವಲಯದಲ್ಲಿ ಕೇಳಿಬರುತ್ತಿರುವ ಮಾತು. (ಏಜೆನ್ಸೀಸ್)

English summary
Bollywood Superstar Shahrukh Khan suffered an injury while shooting for his upcoming flick 'Fan'. "Serious Ouch time! Hamstring shaken fortunately not stirred. Injections galore, running like a duck. Not that I don't like ducks but it sucks!," he reacts.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada