»   » ಅಭಿಮಾನಿಯ ಕೈಚಳಕ ನೋಡಿ ಜಾಬ್ ಆಫರ್ ಮಾಡಿದ ಶಾರುಖ್

ಅಭಿಮಾನಿಯ ಕೈಚಳಕ ನೋಡಿ ಜಾಬ್ ಆಫರ್ ಮಾಡಿದ ಶಾರುಖ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ 'ಫ್ಯಾನ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ.

ಅಂದಹಾಗೆ ಶಾರುಖ್ ಖಾನ್ ಅವರಿಗೆ ಇಡೀ ಭಾರತದಾದ್ಯಂತ ಬಹಳ ಅಭಿಮಾನಿಗಳಿದ್ದಾರೆ. ಜೊತೆಗೆ ಅಭಿಮಾನಿಗಳು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರನ್ನು ಬಹಳ ಇಷ್ಟಪಡಲು ಕಾರಣ ಏನಪ್ಪಾ ಅಂದ್ರೆ ಅವರ ಸರಳತೆ.[ಮಹಿಳೆಯೊಬ್ಬರು ಶಾರುಖ್ ಕೆನ್ನೆಗೆ ರಪ್ ಅಂತ ಬಾರಿಸಿದ್ರು]

Shahrukh Khan Just Offered His Fan A Job In Red Chillies Studio

ಅಭಿಮಾನಿಯೊಬ್ಬರ ಕಥೆ ಹೇಳುವ ಶಾರುಖ್ ಖಾನ್ ಅವರ 'ಫ್ಯಾನ್' ಚಿತ್ರದ ಟ್ರೈಲರ್ ಅನ್ನು ಮರು ಸೃಷ್ಟಿಸಿದ ಅಭಿಮಾನಿಯನ್ನು ಕರೆದು ಆತನಿಗೆ ಜಾಬ್ ಆಫರ್ ಮಾಡುವಷ್ಟರ ಮಟ್ಟಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ.

ಶಾರುಖ್ ಅವರ 'ಫ್ಯಾನ್' ಟ್ರೈಲರ್ ನಲ್ಲಿ ಗೌರವ್ ಚನ್ನಾ ಎಂಬ ಪಾತ್ರವನ್ನು ಬದಲಿಸಿರುವ ಅಭಿಮಾನಿ 'ಶಿವಂ ಜೆಮಿನಿ' ಎಂದು ವಿ.ಎಫ್.ಎಕ್ಸ್ ನಲ್ಲಿ ಜೀವ ತುಂಬಿದ್ದಾನೆ.[ಚಿತ್ರಗಳು: 'ಅಸಹಿಷ್ಣುತೆ' ಎಫೆಕ್ಟ್ ಶಾರುಖ್ ಚಿತ್ರಕ್ಕೆ ಭಾರಿ ಕಂಟಕ]

Shahrukh Khan Just Offered His Fan A Job In Red Chillies Studio

ಅಭಿಮಾನಿ ಸ್ವತಃ ತಯಾರಿಸಿದ ಈ ಟ್ರೈಲರ್ ನೋಡಿ ಫುಲ್ ಖುಷ್ ಆದ ಕಿಂಗ್ ಖಾನ್ ಶಾರುಖ್ ಅವರು ತಮ್ಮ ಹೋಮ್ ಪ್ರೊಡಕ್ಷನ್ಸ್ 'ರೆಡ್ ಚಿಲ್ಲಿಸ್' ವಿ.ಎಫ್.ಎಕ್ಸ್ ಸ್ಟುಡಿಯೋದಲ್ಲಿ ಕೆಲಸ ಮಾಡಲು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಆಫರ್ ಮಾಡಿದ್ದಾರೆ.

ಖುದ್ದು ಶಾರುಖ್ ಅವರೇ ಟ್ವೀಟ್ ಮಾಡಿ ಜಾಬ್ ಆಫರ್ ಮಾಡಿರುವುದಕ್ಕೆ ಸ್ವರ್ಗ ಕಂಡಷ್ಟೇ ಖುಷಿ ಆಗಿರುವ ಅಭಿಮಾನಿ ಶಿವಂ ಜೆಮಿನಿ ಅವರು ಸದ್ಯದಲ್ಲಿಯೇ ಶಾರುಖ್ ಮತ್ತು ಗೌರಿ ಖಾನ್ ಅವರ 'ರೆಡ್ ಚಿಲ್ಲಿಸಿ' ಕಂಪೆನಿ ಅಡಿಯಲ್ಲಿ ಕೆಲಸ ಮಾಡಲು ಉತ್ಸಾಹ ತೋರಿದ್ದಾರೆ.

English summary
Shahrukh Khan's Fan movie trailer released, it has been a topic of discussion on all social media platforms. One such ardent fan of Shahrukh Khan took to Twitter to upload a revamped version of Fan trailer with himself playing the role of a Fan. Using VFX, he has morphed himself into every scene of the trailer where the character Gaurav appears.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada