»   » 1000 ವಾರ ಕಂಡ 19ರ ಹರೆಯ ಶಾರುಖ್- ಕಾಜೋಲ್

1000 ವಾರ ಕಂಡ 19ರ ಹರೆಯ ಶಾರುಖ್- ಕಾಜೋಲ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಹಾಗೂ ಮೋಹಕ ಕಂಗಳ ಚೆಲುವೆ ಕಾಜೋಲ್ ಯಶಸ್ವಿ ಜೋಡಿಯ 'ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಒಂದೇ ಚಿತ್ರಮಂದಿರದಲ್ಲಿ 19ನೇ ವರ್ಷದ ಸಂಭ್ರಮಾಚರಣೆ ಮೂಡ್ ನಲ್ಲಿದೆ. ಅಕ್ಟೋಬರ್ 20ಕ್ಕೆ ಮುಂಬೈನ ಮರಾಠಾ ಮಂದಿರ್ ಚಿತ್ರಮಂದಿರದಲ್ಲಿ ಈ ಪ್ರೇಮಕಾವ್ಯ 19ನೇ ಶಿಶಿರಕ್ಕೆ ಕಾಲಿಟ್ಟಿದೆ.

20 ಅಕ್ಟೋಬರ್ 1995 ರಲ್ಲಿ ಬಿಡುಗಡೆಗೊಂಡ ಈ ಚಿತ್ರ ಭಾರತದಲ್ಲಿ 580 ಮಿಲಿಯನ್ ಹಾಗೂ ಸಾಗರೋತ್ತರ ದೇಶಗಳಲ್ಲಿ 175 ಮಿಲಿಯನ್ ಹಣ ದೋಚಿತ್ತು. 2010ರಲ್ಲಿ ಸತತವಾಗಿ 750ನೇ ವಾರಗಳ ಕಾಲ ಪ್ರದರ್ಶನಗೊಂಡ ದಾಖಲೆ ಬರೆಯಿತು.ಶೋಲೆ ಚಿತ್ರ ಸತತ ಏಳು ವರ್ಷ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಈ ದಾಖಲೆಯನ್ನೂ ಆದಿತ್ಯಾ ಛೋಪ್ರಾ ನಿರ್ದೇಶನದ ಡಿಡಿಎಲ್ ಜೆ ಮುರಿದು ಹಾಕಿದೆ. [ಶಾರುಖ್ 'ಡಿಡಿಎಲ್ ಜೆ' ಅನಿಮೇಷನ್ ಟ್ರೇಲರ್ ನೋಡಿ]

Watch Shahrukh Khan-Kajol's Iconic Romance In DDLJ New Trailer

ಮರಾಠಾ ಮಂದಿರ್ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಬೇರೆ ಚಿತ್ರಗಳು ಬಂದು ಹೋದರೂ ಮ್ಯಾಟ್ನಿ ಮಾತ್ರ ಡಿಡಿಎಲ್ ಜೆಗೆ ಮೀಸಲು. ಬೆಳಗ್ಗೆ 11.30ಕ್ಕೆ ಶುರುವಾಗುವ ಚಿತ್ರ ನೋಡಲು ಜನ ತಪ್ಪದೇ ಬರುತ್ತಿದ್ದಾರೆ. ಶಾರುಖ್ -ಕಾಜೋಲ್ ನೋಡುವುದಕ್ಕೆ ಜನ ಮತ್ತೆ ಮತ್ತೆ ಬರುತ್ತಾರೆ. ಜೊತೆ ಚಿತ್ರದ ಮ್ಯೂಸಿಕೆ ಪ್ಲಸ್ ಪಾಯಿಂಟ್, ಅದಿತ್ಯಾ ಛೋಪ್ರಾ ಹಾಗೂ ನಾನು ನಮಗೆ ಬೇಕೆನಿಸುವಷ್ಟು ವಾರ ಚಿತ್ರವನ್ನು ಪ್ರದರ್ಶಿಸುತ್ತೇವೆ ಎಂದು ದೇಸಾಯಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. [ಶಾರುಖ್ -ಕಾಜೋಲ್ ಜೋಡಿಗೆ 19 ವರ್ಷ]

ಮರಾಠಾ ಮಂದಿರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ದೇಸಾಯಿ ಅವರು ಈಗ 1000 ವಾರ ಪ್ರದರ್ಶನ ಕಂಡಿರುವ ಡಿಡಿಎಲ್ ಜೆ ಸಂಭ್ರಮವನ್ನು ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದಿತ್ಯ ಛೋಪ್ರಾ ಅವರು ಚಿತ್ರದ ಉತ್ತಮ ಸನ್ನಿವೇಶಗಳನ್ನು ಆಯ್ದು ಹೊಚ್ಚ ಹೊಸ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

English summary
While, Shahrukh Khan and Kajol's iconic Dilwale Dulhania Le Jayenge is going to complete 1000 weeks, makers of the movie have released a brand new trailer of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada