For Quick Alerts
  ALLOW NOTIFICATIONS  
  For Daily Alerts

  ಮೈಸೂರಿನಲ್ಲಿ 'ಜಬ್ ತಕ್ ಹೇ ಜಾನ್' ಗ್ರಾಂಡ್ ಓಪನಿಂಗ್

  |

  ಜಾಗತಿಕ ಮಟ್ಟದಲ್ಲಿ ಬಹುನಿರೀಕ್ಷೆ ಮೂಡಿಸಿ ನಿನ್ನೆ (13 ನವೆಂಬರ್ 2012) ಬಿಡುಗಡೆಯಾಗಿರುವ ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ ಜೋಡಿಯ 'ಜಬ್ ತಕ್ ಹೇ ಜಾನ್' ಚಿತ್ರವು ಭಾರತದಾದ್ಯಂತ ಅತ್ಯದ್ಭುತ ಓಪನಿಂಗ್ ಪಡೆದಿದೆ. ಈ ಚಿತ್ರವು ಇತ್ತೀಚಿಗೆ ವಿಧಿವಶರಾದ ಖ್ಯಾತ ಬಾಲಿವುಡ್ ನಿರ್ದೇಶಕ ಯಶ್ ಚೋಪ್ರಾ ನಿರ್ದೇಶನದ ಕೊನೆಯ ಚಿತ್ರವಾಗಿದೆ. ಯಶ್ ರಾಜ್ ಬ್ಯಾನರಿನ ಈ ಚಿತ್ರ, ಭಾರತದಲ್ಲಿ ಒಟ್ಟೂ 1500 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ.

  ಚಿತ್ರಕ್ಕೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅದರಲ್ಲೂ ವಿಶೇಷವಾಗಿ ಮೈಸೂರು, ಪಶ್ಚಿಮ ಬಂಗಾಳ ಹಾಗೂ ನೋಯ್ಡಾದಲ್ಲಿ ಚಿತ್ರಕ್ಕೆ ಅಭೂತಪೂರ್ವ ಸ್ವಾಗತ ದೊರಕಿದೆ. ಮೈಸೂರಿನಲ್ಲಿ ಇದೇ ಮೊದಲಬಾರಿಗೆ ಬಾಲಿವುಡ್ ಚಿತ್ರವೊಂದು ಈ ಮಟ್ಟಿಗೆ ಗ್ರಾಂಡ್ ಓಪನಿಂಗ್ ಪಡೆದಿದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಗಳಿಕೆ ಮೊತ್ತ ಎಷ್ಟೆಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

  ಭಾರತದಲ್ಲಿ ಒಟ್ಟೂ 1500 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಮಲ್ಟಿಫ್ಲೆಕ್ಸ್ ಸೇರಿದಂತೆ ಎಲ್ಲಾ ಕಡೆ ಚಿತ್ರಮಂದಿರಗಳು ಶೇ. 100 ರಷ್ಟು ಭರ್ತಿಯಾಗಿವೆ. ಬಹಳಷ್ಟು ಮಲ್ಟಿಫ್ಲೆಕ್ಸ್ ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ ಟಿಕೆಟ್ ಖಾಲಿಯಾಗಿವೆ. ದಿವಂಗತ್ ಯಶ್ ಚೋಪ್ರಾ ಹಾಗೂ ಶಾರುಖ್ ಖಾನ್ ಸಂಗಮದ ಈ 'ಜಬ್ ತಕ್ ಹೇ ಜಾನ್' ಚಿತ್ರವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

  ನಿನ್ನೆಯೇ ಬಿಡುಗಡೆ ಕಂಡಿರುವ ಅಜಯ್ ದೇವಗನ್ ನಾಯಕತ್ವದ 'ಸನ್ ಆಫ್ ಸರ್ದಾರ್' ಚಿತ್ರವು ಶಾರುಖ್ ಖಾನ್ ನಾಯಕತ್ವ ಹಾಗೂ ಯಶ್ ರಾಜ್ ಬ್ಯಾನರಿನ ಈ 'ಜಬ್ ತಕ್ ಹೇ ಜಾನ್' ಚಿತ್ರಕ್ಕೆ ಭಾರೀ ಪೈಪೋಟಿ ನೀಡುತ್ತಿದೆ. ಈ ಎರಡು ಚಿತ್ರಗಳಲ್ಲಿ ಗೆಲ್ಲುವುದು ಯಾವುದು ಎಂಬುದು ಇನ್ನು ಸ್ವಲ್ಪ ದಿನಗಳಲಲ್ಲೇ ಪಕ್ಕಾ ಆಗಲಿದೆ. ಸದ್ಯಕ್ಕಂತೂ ಶಾರುಖ್ ಖಾನ್ ಹಾಗೂ ಕತ್ರಿನಾ ಜೋಡಿಯ 'ಜಬ್ ತಕ್ ಹೇ ಜಾನ್' ಚಿತ್ರವು ಅತ್ಯದ್ಭುತ ಗಳಿಕೆ ದಾಖಲಿಸುತ್ತಿದೆ.

  ಬಾಕ್ಸ್ ಆಫೀಸ್ ನಲ್ಲಿ ಈ ಎರಡು ಚಿತ್ರಗಳಲ್ಲಿ ಯಾವುದು 'ದಿ ಬೆಸ್ಟ್ ಕಲೆಕ್ಷನ್' ದಾಖಲಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಮೈಸೂರಿನಲ್ಲಿ 'ಜಬ್ ತಕ್ ಹೇ ಜಾನ್' ಚಿತ್ರದ್ದು ಭಾರಿ ಮಿಂಚಿಂಗ್. ದೇಶಾದ್ಯಂತ ಎರಡೂ ಚಿತ್ರಗಳ ಹವಾ ಜೋರಾಗಿಯೆ ಇದೆ, ಮುಂದೇನೋ...! (ಏಜೆನ್ಸೀಸ್)

  English summary
  Shahrukh Khan-Katrina movie Jab Tak Hai Jaan(JTHJ) has got grand opening response at Indian Box Office. It will break first day collection record of Son of Sardar. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X