ಧನುಶ್ ಚಿತ್ರದ ರೀಮೇಕ್ನಲ್ಲಿ ಶಾರೂಖ್: ನಿರ್ದೇಶಕ ಹೇಳಿದ್ದೇನು?

ಜೀರೋ ಸಿನಿಮಾದ ಸೋಲಿನ ಬಳಿಕ ಶಾರೂಖ್ ಖಾನ್ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ಸದ್ಯಕ್ಕೆ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ ಎಂದು ಸ್ವತಃ ಶಾರೂಖ್ ಸ್ಪಷ್ಟನೆ ನೀಡಿದ್ದಾರೆ. ಬಾದ್ ಶಾ ಮುಂದಿನ ಸಿನಿಮಾ ಯಾವುದು ಎಂದು ಕಿಂಗ್ ಖಾನ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಸೌತ್ ಇಂಡಸ್ಟ್ರಿಯ ಚಿತ್ರಗಳ ರೀಮೇಕ್ನಲ್ಲಿ ಶಾರೂಖ್ ನಟಿಸುತ್ತಾರೆ ಎಂಬ ಸುದ್ದಿಗಳು ಇತ್ತೀಚಿಗೆ ಸದ್ದು ಮಾಡ್ತಿದೆ. ತಮಿಳಿನ ಸಿನಿಮಾದಲ್ಲಿ ವಿಲನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಅದ್ಯಾವುದು ಪಕ್ಕಾ ಆಗಿರಲಿಲ್ಲ.

ಇದೀಗ, ಧನುಶ್ ಅಭಿನಯದ 'ಅಸುರನ್' ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗ್ತಿದೆ, ಅದರಲ್ಲಿ ಶಾರೂಖ್ ಕಾಣಿಸಿಕೊಳ್ಳುವ ಸಾಧ್ಯತೆ ಎನ್ನಲಾಗಿದೆ. ಈ ಸುದ್ದಿಯನ್ನ ಬಾಲಿವುಡ್ ಮಂದಿ ನಿರಾಕರಿಸಿದ್ದಾರೆ.

Shahrukh Khan Not Part In Asuran Remake

ಈ ಬಗ್ಗೆ ನಿರ್ದೇಶಕ ವೆಟ್ರಿಮಾರನ್ ಕೂಡ ಪ್ರತಿಕ್ರಿಯಿಸಿದ್ದು, ''ಅಸುರನ್ ರೀಮೇಕ್ನಲ್ಲಿ ಶಾರೂಖ್ ನಟಿಸುವುದು ನಿಜವಲ್ಲ. ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ'' ಎಂದಿದ್ದಾರೆ.

ಮತ್ತೊಂದೆಡೆ ಅಮೀರ್ ಖಾನ್ ನಟನೆಯ 'ಲಾಲ್ ಚಡ್ಡಾ ಸಿಂಗ್' ಸಿನಿಮಾದಲ್ಲಿ ಶಾರೂಖ್ ವಿಶೇಷ ಪಾತ್ರವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದು ಕೂಡ ಸುಳ್ಳು ಎನ್ನಲಾಗಿದೆ. ಈ ಕಡೆ 'ಬಿಗಿಲ್' ನಿರ್ದೇಶಕ ಅಟ್ಲಿ ಸಿನಿಮಾದಲ್ಲೂ ಕಾಣಿಸಿಕೊಳ್ಳಬಹುದು ಎಂಬ ಮಾತು ಚರ್ಚೆಯಾಗ್ತಿದೆ.

ಅಂತಿಮವಾಗಿ ಶಾರೂಖ್ ಖಾನ್ ಅವರ ಮುಂದಿನ ಸಿನಿಮಾ ಯಾವುದು ಎಂದು ಯಾರಿಗೂ ಗೊತ್ತಿಲ್ಲ. ಇದನ್ನ ಖುದ್ದು ಕಿಂಗ್ ಖಾನ್ ಸ್ವತಃ ಅಧಿಕೃತವಾಗಿ ಹೇಳಬೇಕಿದೆ.

More from Filmibeat

English summary
Bollywood actor Shahrukh Khan is not part in Dhanush starrer asuran remake in hindi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X