»   » ಮತ್ತೆ ಒಟ್ಟಿಗೆ ಸ್ಟೇಜ್ ಮೇಲೆ ಶಾರುಖ್, ಪ್ರಿಯಾಂಕಾ

ಮತ್ತೆ ಒಟ್ಟಿಗೆ ಸ್ಟೇಜ್ ಮೇಲೆ ಶಾರುಖ್, ಪ್ರಿಯಾಂಕಾ

Posted By:
Subscribe to Filmibeat Kannada

ಪ್ರಿಯಾಂಕಾ ಚೋಪ್ರಾ ಮತ್ತು ಶಾರುಖ್ ಖಾನ್ ಈ ಇಬ್ಬರ ಹೆಸರನ್ನೂ ಕೇಳಿದರೆ ಸಾಕು ಈಗ ಬಾಲಿವುಡ್ ಬೆಚ್ಚಿಬೀಳುತ್ತದೆ. ಅದರಲ್ಲೂ ಬಾಲಿವುಡ್ ನಾಯಕರ ಪತ್ನಿಯರಂತೂ ಪ್ರಿಯಾಂಕಾ ಎಂದರೆ ಸಾಕು, ಉರಿದುಬೀಳುತ್ತಾರೆ.

ಕಾರಣ, ಶಾರುಖ್ ಹಾಗೂ ಪ್ರಿಯಾಂಕಾ ಚೋಪ್ರಾ ನಡುವೆ ಇದೆ ಎನ್ನಲಾಗುತ್ತಿರುವ ಅನೈತಿಕ ಗೆಳೆತನ. ಆ ಕುರಿತು ಈಗಾಗಲೇ ಸಾಕಷ್ಟು ಸುದ್ದಿಗಳು ಬಂದಿವೆ. ಆದರೆ ಅದಕ್ಕೆ ಈ ಇಬ್ಬರೂ ಕ್ಯಾರೇ ಅನ್ನುತ್ತಿಲ್ಲ.

ಸ್ವಲ್ಪ ದಿನಗಳ ಹಿಂದಷ್ಟೇ ಈ ಜೋಡಿ ಹೊರಗಡೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ, ಸಂಬಂಧಕ್ಕೆ ಕಲ್ಲು ಬಿದ್ದಿದೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಆದರೆ ಅದು ಸುಳ್ಳು ಎಂದು ಈಗ ಸುದ್ದಿಯಾಗಿದೆ. ಅದಕ್ಕೆ ಸಾಕ್ಷಿ ಇತ್ತೀಚಿಗೆ ಅವರಿಬ್ಬರೂ ಸ್ಟೇಜ್ ಮೇಲೆ ಹಾಡೊಂದಕ್ಕೆ ಒಟ್ಟಿಗೆ ಹೆಜ್ಜೆಹಾಕಿದ್ದಾರೆ.

ಒಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವೇಳೆ ಚಮಕ್ ಚಲ್ಲೋ ಹಾಡಿಗೂ ಕೂಡ ಡಾನ್ಸ್ ಮಾಡಲಾಗಿದೆ. ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಹೊರತಾಗಿ ಅಮೀರ್ ಖಾನ್, ಫರ್ಹಾನ್ ಅಖ್ತರ್, ಅಯುಷ್ಮಾನ್ ಖುರಾನಾ, ಶ್ರೀದೇವಿ, ಮಲೈಕಾ ಅರೋರಾ ಹಾಗೂ ಶಾಹಿದ್ ಕಪೂರ್ ಕೂಡ ಆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ಆಶ್ಚರ್ಯವೆಂದರೆ ಶಾರುಖ್ ಹಾಗೂ ಪ್ರಿಯಾಂಕ ಇಬ್ಬರಿಗೂ ತಮ್ಮಿಬ್ಬರ ಸಂಬಂಧದ ಬಗ್ಗೆ ಗಾಸಿಪ್ ಹಬ್ಬಿರುವುದು ಗೊತ್ತಿದೆ. ಆದರೂ ಸಾಮಾಜಿಕ ಜವಾಬ್ಧಾರಿ ಅರಿತಿರುವ ಈ ಇಬ್ಬರೂ ಅದನ್ನು ಮರೆತು ಪಕ್ಕಾ ವೃತ್ತಿಪರತೆ ಮೆರೆಯುತ್ತಿದ್ದಾರೆ.

ಗಾಸಿಪ್ ಗಳಿಗೆ ಕಿವಿಗೊಡದೇ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅದೇ ಬಾಲಿವುಡ್ ಅಂಗಳದ ಕೆಲವು ಪಂಡಿತರು ಅವರಿಗೆ 'ಭೇಷ್' ಎನ್ನುತ್ತಿದ್ದಾರೆ. ಆದರೆ, ಇನ್ನೂ ಏನೇನ್ ಸುದ್ದಿ ಕೇಳ್ಬೇಕೋ ಎಂದು ಶಾರುಖ್ ಪತ್ನಿ ಗೌರಿ ಗೊಣಗಿದ್ದೂ ಕೂಡ ಎಲ್ಲರ ಕಿವಿ ತಲುಪಿದೆಯಂತೆ. (ಒನ್ ಇಂಡಿಯಾ ಕನ್ನಡ)

English summary
At a recent NDTV Greenathon event Shahrukh Khan and Priyanka Chopra buried the past and rocked the stage by dancing together.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada