Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತನ್ನ ಆರಾಧ್ಯ ನಟನಿಂದಲೇ ಶಹಬ್ಬಾಶ್‌ಗಿರಿ ಪಡೆದ ಯಶ್: ಇದಕ್ಕಿಂತ ಇನ್ನೇನು ಬೇಕು ಎಂದ ಫ್ಯಾನ್ಸ್!
ರಾಕಿ ಭಾಯ್ ಆಗಿ ಯಶ್ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಗೊತ್ತೇಯಿದೆ. ಯಶ್ ಮುಂದಿನ ಬಗ್ಗೆ ಬಾಲಿವುಡ್ ಮಂದಿಗೂ ಕುತೂಹಲ ಇದೆ. ಮುಂದೆ ಯಶ್ ಮತ್ತೊಂದು ಹಾಲಿವುಡ್ ರೇಂಜ್ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.
ಸ್ಟಾರ್ ನಟರಿಗೆ ಸಾಕಷ್ಟು ಅಭಿಮಾನಿಗಳು ಇರುತ್ತಾರೆ. ಆದರೆ ಅಂತಹ ಸ್ಟಾರ್ ನಟರಿಗೆ ಇಷ್ಟ ಆಗುವಂತಹ ಸೂಪರ್ ಸ್ಟಾರ್‌ಗಳು ಇದ್ದಾರೆ. ತಮ್ಮ ಅಭಿಮಾನದ ನಟನನ್ನು, ಆತನ ಸಿನಿಮಾಗಳನ್ನು ನೋಡುತ್ತಾ ಚಿತ್ರರಂಗಕ್ಕೆ ಬಂದವರು ಇಂದು ಸೂಪರ್ ಸ್ಟಾರ್‌ಗಳಾಗಿದ್ದಾರೆ. ಬಸ್ ಡ್ರೈವರ್ ಮಗನಾಗಿದ್ದ ನವೀನ್ ಕುಮಾರ್ ಗೌಡ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ ಆಗಿ ನಮ್ಮ ಕಣ್ಣಮುಂದೆ ನಿಂತಿದ್ದಾರೆ. KGF ರಾಕಿ ಭಾಯ್ ನೋಡಿ ಬಾಲಿವುಡ್ ನಟರೇ ಬಹುಪರಾಕ್ ಎಂದಿದ್ದಾರೆ.
"ಯಶ್
ಅವಕಾಶ
ಕೇಳಿಕೊಂಡು
ಬಂದಾಗ
ನಾನು
ರಿಜೆಕ್ಟ್
ಮಾಡಿದ್ದೆ":
ಕುಮಾರ್
ಗೋವಿಂದ್
ಯಶ್ ನೆಚ್ಚಿನ ನಟ ಶಾರುಕ್ ಖಾನ್. ಈ ಹಿಂದೆ ಸಾಕಷ್ಟು ಬಾರಿ ರಾಕಿಂಗ್ ಸ್ಟಾರ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಶಾರುಕ್ ಖಾನ್ ನನಗೆ ದೊಡ್ಡ ಇನ್‌ಸ್ಪಿರೇಷನ್ ಎಂದು ಯಶ್ ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ ಈಗ ಅದೇ ಶಾರುಕ್, ಯಶ್‌ನ ಮೆಚ್ಚಿ ಕೊಂಡಾಡಿದ್ದಾರೆ.

'ಯಶ್ ಈಸ್ ವಾಹ್' ಎಂದ ಶಾರುಕ್
ಒಂದ್ಕಡೆ 'ಪಠಾಣ್' ಚಿತ್ರದ 'ಬೇಷರಂ ರಂಗ್' ಸಾಂಗ್ ವಿವಾದ ತಾರಕಕ್ಕೇರಿದೆ. ಇದರ ನಡುವೆ ಕಿಂಗ್ ಖಾನ್ ಅಭಿಮಾನಿಗಳ ಜೊತೆ ಟ್ವಿಟ್ಟರ್‌ನಲ್ಲಿ ಸಂವಾದ ನಡೆಸಿದ್ದಾರೆ. ಅಭಿಮಾನಿಗಳ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬ "ಸರ್ KGF- 2 ಸಿನಿಮಾ ನೋಡಿದ್ದೀರಾ? ಯಶ್ ಬಗ್ಗೆ ಒಂದು ಪದದಲ್ಲಿ ಹೇಳಿ?" ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿರುವ ಕಿಂಗ್ ಖಾನ್ "ಯಶ್ ಈಸ್ ವಾಹ್" ಎಂದು ಕಾಮೆಂಟ್ ಮಾಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

KGF ಎದುರು ಮುಗ್ಗರಿಸಿದ್ದ 'ಜೀರೊ'
4 ವರ್ಷಗಳ ಹಿಂದೆ 'KGF' ಸಿನಿಮಾ ರಿಲೀಸ್ ದಿನವೇ ಶಾರುಕ್ ಖಾನ್ ನಟನೆಯ 'ಜಿರೋ' ಸಿನಿಮಾ ಕೂಡ ತೆರೆಗೆ ಬಂದಿತ್ತು. ಆದರೆ 'KGF' ಎದುರು ಶಾರುಕ್ ಖಾನ್ ಸಿನಿಮಾ ಸೋತು ಸುಣ್ಣವಾಗಿತ್ತು. ಚಿತ್ರದಲ್ಲಿ ಸಲ್ಮಾನ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಪ್ರಯೋಜನವಾಗಲಿಲ್ಲ. ಬಾಲಿವುಡ್ ಪ್ರೇಕ್ಷಕರೇ ರಾಕಿಭಾಯ್‌ನ ಕೊಂಡಾಡಿದ್ದರು. 4 ವರ್ಷ ಶಾರುಕ್ ಖಾನ್ ಯಾವುದೇ ಸಿನಿಮಾ ಮಾಡಲಿಲ್ಲ.

ಮುಂದಿನ ಸಿನಿಮಾ ಯಶ್ ಮಾತು
ಇತ್ತೀಚಿಗೆ ನಡೆದ ಫಿಲ್ಮ್ ಕಂಪಾನಿಯನ್ ಸಂವಾದ ಕಾರ್ಯಕ್ರಮದಲ್ಲಿ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ನೇರವಾಗಿ ಸಿನಿಮಾ ಕುರಿತು ಏನು ಹೇಳಿಲ್ಲ. ಆದರೆ ಸೈನ್ಸ್ ಫಿಕ್ಷನ್ ಅಥವಾ ಆಕ್ಷನ್ ಎಂಟರ್‌ಟೈನರ್ ಜಾನರ್ ಸಿನಿಮಾ ಮಾಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಚಿತ್ರವನ್ನು ಕೂಡ ಹಾಲಿವುಡ್ ರೇಂಜ್‌ನಲ್ಲಿ ತೆರೆಗೆ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಎಲ್ಲಾ ಪಕ್ಕಾ ಆದ ಮೇಲೆ ಆ ಸಿನಿಮಾ ಬಗ್ಗೆ ಮಾತನಾಡುತ್ತೇನೆ ಎಂದು ವಿವರಿಸಿದ್ದಾರೆ.

ಜನವರಿ 25ಕ್ಕೆ 'ಪಠಾಣ್' ತೆರೆಗೆ
ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಪಠಾಣ್' ಚಿತ್ರದಲ್ಲಿ ಶಾರುಕ್ ಖಾನ್ ನಟಿಸಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಮಿಂಚಿದ್ದಾರೆ. ಜಾನ್ ಅಬ್ರಹಾಂ ಮತ್ತೊಂದು ಕೀ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಜನವರಿ 25ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ.
ಈ ಚಿತ್ರದ 'ಬೇಷರಂ ರಂಗ್' ಸಾಂಗ್ ರಿಲೀಸ್ ಆಗಿ ವಿವಾದ ಹುಟ್ಟುಹಾಕಿದೆ. ಸಾಂಗ್‌ನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರವನ್ನು ಬಾಯ್ಕಾಟ್ ಮಾಡುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಚಿತ್ರಕ್ಕೆ ಸೋಲಿನ ಭೀತಿ ಶುರುವಾಗಿದೆ.