»   » ಟ್ವಿಟ್ಟರ್ ನಲ್ಲಿ ಕಿತ್ತಾಡಿದ ಶಾರುಖ್- ಪ್ರಿಯಾಂಕಾ ಜೋಡಿ

ಟ್ವಿಟ್ಟರ್ ನಲ್ಲಿ ಕಿತ್ತಾಡಿದ ಶಾರುಖ್- ಪ್ರಿಯಾಂಕಾ ಜೋಡಿ

Posted By:
Subscribe to Filmibeat Kannada

ಸೆಲೆಬ್ರಿಟಿಗಳಿಗೆ ಸಾಮಾಜಿಕ ತಾಣ ಟ್ವಿಟ್ಟರ್, ಅಭಿಮಾನಿಗಳ ಜೊತೆ ಮಾತುಕತೆ, ಫೋಟೋಗಳ ವಿನಿಮಯಕ್ಕಷ್ಟೇ ಸೀಮಿತವಾಗಿಲ್ಲ. ಅವರು ಟ್ವಿಟ್ಟರ್ ಮೂಲಕ ಸಹನಟರ ಜೊತೆ ಕಿತ್ತಾಡುತ್ತಾರೆ ಕೂಡ. ತಮ್ಮ ಕೋಪ, ತಾಪ, ಮೋಹ ಮಾತ್ಸರ್ಯಗಳನ್ನೂ ಕೂಡ ಈ ಸಾಮಾಜಿಕ ತಾಣದ ಮೂಲಕ ಹರಿಯಬಿಡುತ್ತಾರೆ. ಇದಕ್ಕೆ ಶಾರುಖ್-ಪ್ರಿಯಾಂಕಾ ಜೋಡಿಯ ತಾಜಾ ಉದಾಹರಣೆ ಇಲ್ಲಿದೆ.

ಒಂದು ಕಾಲದ ಗೆಳತಿ ಪ್ರಿಯಾಂಕಾ ಚೋಪ್ರಾಗೆ ಶಾರುಖ್ ಖಾನ್ ಟ್ವಿಟ್ಟರಿನಲ್ಲಿ ಚುಚ್ಚಿದ್ದಾರೆ. ಎಂದಿನಂತೆ ಯಾವುದೋ ವಿಷಯಕ್ಕೆ "So many people send me so many notices. Isn't this whole exercise losing its 'Appeal'...pun intended." ಎಂದು ಟ್ವೀಟ್ ಮಾಡಿದ ಶಾರುಖ್ ಗೆ ಪ್ರತಿಯಾಗಿ ಪ್ರಿಯಾಂಕಾ, "Quick q n a.. Let's go.." ಎಂದು ಉತ್ತರಿಸಿದ್ದರು. ಇದು ಶಾರುಖ್ ಶಾಂತಿ ಕದಡಿದೆ.

ತಕ್ಷಣವೇ ಪ್ರಿಯಾಂಕಾ ಟ್ವಿಟ್ಟರ್ ಗೆ ಸ್ಪಂದಿಸಿ ಅದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಶಾರುಖ್, ""quick questions...only funny answers...so please beware and don't get offended. Ask me of my favourite colour and i will sue u !!" ಎಂದು ಉತ್ತರಿಸಿದ್ದಾರೆ. ಹೀಗೆ ಶಾರುಖ್ ಹಾಗು ಪ್ರಿಯಾಂಕಾ ಜಗಳಕ್ಕೆ ಬಡಪಾಯಿ ಟ್ವಿಟ್ಟರ್ ವೇದಿಕೆಯಾಗಿದೆ.

ಆದರೆ ಶಾರುಖ್ ಉತ್ತರದಿಂದ ಪ್ರಿಯಾಂಕಾ ಕಂಗಾಲಾದರೋ ಏನೋ ಗೊತ್ತಿಲ್ಲ! ಆದರೆ ಶಾರುಖ್ ಅಭಿಮಾನಿಗಳಿಗೆ ಮಾತ್ರ ಶಾರುಖ್ ಖಾನ್ ಈ ರೀತಿ ಟ್ವೀಟ್ ಮಾಡುವ ಅಗತ್ಯವಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ. ಒಟ್ಟಿನಲ್ಲಿ ಟ್ವಿಟ್ಟರ್, ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳು ಸ್ನೇಹಸೇತುವೆ ಹಾಗೂ ಮಾಹಿತಿ ವಿನಿಮಯಕ್ಕೆ ಬದಲಾಗಿ, ಜಗಳದ ತಾಣವಾಗುತ್ತಿವೆಯೇ ಎಂಬ ಪ್ರಶ್ನೆ ಕೆಲವರನ್ನು ಕಾಡಲಾರಂಭಿಸಿದೆ. (ಏಜೆನ್ಸೀಸ್)

English summary
Twitter is not just a platform for celebrities to talk and share pictures with fans but it has also become a medium for stars to vent off their anger and slam each other. Recently, superstar Shahrukh Khan took a dig at once good friend Priyanka Chopra on Twitter.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada