37 ವರ್ಷದ ಹಳೇ ಚಿತ್ರ ರೀಮೇಕ್ ಮಾಡ್ತಿದ್ದಾರೆ ಶಾರೂಖ್ ಖಾನ್.!

'ಜೀರೋ' ಸಿನಿಮಾದ ಸೋಲಿನ ಬಳಿಕ ಸೈಲೆಂಟ್ ಆಗಿರುವ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಡಾನ್-3 ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಡಾನ್ ಸರಣಿಗೆ ಬ್ರೇಕ್ ಹಾಕಿರುವ ಶಾರೂಖ್ ಇನ್ನೊಂದು ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.

ಹೌದು, ಬಾಲಿವುಡ್ ಗಲ್ಲಿಯಲ್ಲಿ ಸದ್ದು ಮಾಡುತ್ತಿರುವ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ 37 ವರ್ಷದ ಹಳೆಯ ಚಿತ್ರವನ್ನ ಶಾರೂಖ್ ಖಾನ್ ಮತ್ತೆ ರೀಮೇಕ್ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

1982ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಹೇಮಾ ಮಾಲಿನಿ ನಟಿಸಿ ಬಿಡುಗಡೆಯಾಗಿದ್ದ 'ಸತ್ತೆ ಪೆ ಸತ್ತ' (Satte Pe Satta) ಚಿತ್ರದ ರೀಮೇಕ್ ನಲ್ಲಿ ಶಾರೂಖ್ ನಟಿಸಲಿದ್ದಾರಂತೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ.

Shahrukh khan to do the remake of Satte Pe Satta

ಈ ಹಿಂದೆ ಶಾರೂಖ್ ಜೊತೆ 'ಮೇ ಹೂ ನಾ' ಹಾಗೂ 'ಹ್ಯಾಪಿ ನ್ಯೂ ಇಯರ್' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಫರಾಹ ಖಾನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಶಾರೂಖ್ ಖಾನ್ ಗೆ ನಾಯಕಿಯಾಗಿ ಕತ್ರಿಕಾ ಕೈಫ್ ಅವರು ನಟಿಸುವ ಸಾಧ್ಯತೆ ಇದೆಯಂತೆ. ಸದ್ಯ ಕತ್ರಿನಾ, ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದಲ್ಲಿ ನಟಿಸಿದ್ದು, ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅಕ್ಷಯ್ ಕುಮಾರ್ ಮತ್ತು ರೋಹಿತ್ ಶೆಟ್ಟಿ ಕಾಂಬಿನೇಷನ್ ನ ಸೂರ್ಯವಂಶಿ ಚಿತ್ರದಲ್ಲೂ ನಟಿಸಲಿದ್ದಾರೆ.

More from Filmibeat

English summary
Bollywood superstar shahrukh khan reportedly to do the remake of Amitabh 's 1982 Classic hit 'Satte Pe Satta'. FarahKhan to direct and Katrnia Kaif might co-star in the new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X