»   » ಶಾರುಖ್-ಸಲ್ಮಾನ್ ತಬ್ಬಿಕೊಂಡರೆ ಏನಾಯ್ತೀಗ?

ಶಾರುಖ್-ಸಲ್ಮಾನ್ ತಬ್ಬಿಕೊಂಡರೆ ಏನಾಯ್ತೀಗ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಹಾಗೂ ಬಾಲಿವುಡ್ ನ ಪ್ರಣಯ ರಾಜ ಸಲ್ಮಾನ್ ಖಾನ್ ಇಬ್ಬರು ಇಫ್ತಾರ್ ಕೂಟವೊಂದರಲ್ಲಿ ಪರಸ್ಪರ ಆಲಿಂಗನ ಮಾಡಿಕೊಂಡಿದ್ದು ಕಳೆದ ಎರಡು ದಿನಗಳಿಂದ ಪ್ರಮುಖ ಸುದ್ದಿಯಾಗಿ ರಾಷ್ಟ್ರೀಯ ವಾಹಿನಿಗಳಲ್ಲಿ ಹರಿದಾಡಿದೆ. ಭಾರತ-ಪಾಕಿಸ್ತಾನ ಒಂದಾದಂತೆ, ಉತ್ತರ-ದಕ್ಷಿಣ ಕೊರಿಯಾ ಮತ್ತೆ ಕೈಜೋಡಿಸಿದಂತೆ ಪ್ರಾದೇಶಿಕ ಚಾನೆಲ್ ಗಳು ಪೈಪೋಟಿಗೆ ಬಿದ್ದು ಸುದ್ದಿ ಪ್ರಸಾರ ಮಾಡಿವೆ.

ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸುವುದು ಮಾಮೂಲಿ ಮುಂಬೈನಲ್ಲಿ ಇದು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಎಂಎಲ್ ಎ ಬಾಬಾ ಸಿದ್ದಿಕಿ ಆಯೋಜನೆಯ ಇಫ್ರಾರ್ ಕೂಟದಲ್ಲಿ ಪರಸ್ಪರ ಎದುರಾದಾಗ ಇಬ್ಬರು ಅಪ್ಪಿಕೊಂಡು ಫೋಟೋಗೆ ಪೋಸ್ ಕೊಟ್ಟಾಗ ಸಂಭ್ರಮಿಸಿದ್ದು ಬಾಬಾ ಮಾತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಶಾರುಖ್ ಹಾಗೂ ಸಲ್ಮಾನ್ ಮತ್ತೆ ಒಂದಾದರೋ ಅಥವಾ ಇದು ಬರೀ ಗಿಮಿಕ್ಕೋ ಯಾವನಿಗೆ ಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ಇಬ್ಬರ ಆಲಿಂಗನದ ಕಿಚ್ಚು ಹಬ್ಬಿತ್ತು. ಮೇಡಂ ಟುಸ್ಸಾಡ್ ನಲ್ಲಿ ಇಬ್ಬರ ಪ್ರತಿಮೆ ಅನಾವರಣ ಮಾಡಿ, ಶಾರುಖ್ -ಸಲ್ಮಾನ್ ಆಲಿಂಗನದ ನಂತರ ಜಯಾ ಬಚ್ಚನ್-ರೇಖಾ ಆಲಿಂಗನ ಮಾಡಿದರಂತೆ ಎನ್ನುವ ಫನ್ನಿ ಟ್ವೀಟ್ ಗಳ ಮಹಾಪೂರ ಹರಿದು ಬಂದಿತ್ತು. ಶಾರುಖ್ -ಸಲ್ಮಾನ್ ಆಲಿಂಗನದಿಂದ ಖುಷಿಗೊಂಡ ಟ್ವೀಟ್ ಸಮೂಹ ಹರಿಸಿದ ನಗೆಬುಗ್ಗೆಗಳನ್ನು ಒಮ್ಮೆ ಓದಿ

ಶಾರುಖ್ -ಸಲ್ಮಾನ್ ಆಲಿಂಗನ ಟ್ವೀಟ್ ಮಳೆ ಬಾಬಾ ನೀಡಿದ ಇಫ್ತಾರ್ ಕೂಟ

ಸಲ್ಮಾನ್ ಭಾಯ್ ಮುಬಾರಕ್!

ಮಾಧ್ಯಮಗಳಿಗೆ ಸವಾಲು

ದೇಶ ಪ್ರವಾಹದಲ್ಲಿ ಮುಳುಗಿರುವಾಗ ಇದು ದೊಡ್ಡ ಸುದ್ದಿಯೇ?

ಬಾಬಾ ನೀಡಿದ ಇಫ್ತಾರ್

ಬಾಬಾ !ಆಹಾ ಎಂಥಾ ನಗು ಸ್ಟಾರ್ ಗಳ ಮುಖದಲ್ಲೂ ಇಲ್ಲದ ಮಂದಹಾಸ

ಸರ್ ಜಡೇಜ ಟ್ವೀಟ್

ಸರ್ ರವೀಂದ್ರ ಜಡೇಜ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಕ್ರಿಕೆಟರ್ ಗೆ ಈಗ ಇತ್ತೀಚೆಗೆ ರೈನಾ ಜೊತೆ ಕಿತ್ತಾಡಿದ್ದು ಸರಿ ಮಾಡಿಕೊಳ್ಳಬೇಕಂತೆ

ಇಫ್ತಾರ್ ಕೂಟ

ಇಫ್ತಾರ್ ಕೂಟದಲ್ಲಿ ಅರ್ಜುನ್ ಕಪೂರ್, ಮಹೇಶ್ ಮಂಜ್ರೇಕರ್ ಜೊತೆ ಸಲ್ಮಾನ್ ಖಾನ್

ಮೇಡಂ ಟುಸ್ಸಾಡ್ ನಲ್ಲಿ ಪ್ರತಿಮೆ

ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಪ್ರತಿಮೆ ಇಬ್ಬರ ಆಲಿಂಗನದ ಪ್ರತಿಮೆ ತಯಾರಿಯಂತೆ!

ಸೊಹೈಲ್ ಖಾನ್ ಹೇಳಿದ್ದು

ಶಾರುಖ್ ಹಾಗೂ ಸಲ್ಮಾನ್ ಆಲಿಂಗನದಲ್ಲಿ ಯಾವುದೇ ವಿಶೇಷ ಇಲ್ಲ, ಇದು ವಿಶ್ ಮಾಡಿದ ರೀತಿ ಅಷ್ಟೇ ಎಂದು ಸಲ್ಮಾನ್ ಸೋದರ ಸೊಹೈಲ್ ಖಾನ್ ಹೇಳಿದ್ದಾರೆ

ಸಲ್ಮಾನ್ ಗೆ ಶುಭ ಹಾರೈಕೆ

ಶಾರುಖ್ ಹಾಗೂ ಸಲ್ಮಾನ್ ಆಲಿಂಗನದಿಂದ ಸಲ್ಮಾನ್ ಅಭಿಮಾನಗಳು ಸಕತ್ ಖುಷಿಯಾಗಿದ್ದಾರೆ.

ಹೀಗೊಂದು ಗ್ರೂಪ್ ಫೋಟೊ

ಶಾಸಕ ಬಾಬಾ ನೀಡಿದ ಇಫ್ತಾರ್ ಕೂಟದ ಗ್ರೂಪ್ ಫೋಟೋ

ಕೊರಿಯಾದಲ್ಲೂ ಇಫ್ತಾರ್ ಕೂಟ

ಕೊರಿಯಾದಲ್ಲೂ ಇಫ್ತಾರ್ ಕೂಟ ಆಯೋಜನೆಗೆ ಬಾಬಾ ಸಿದ್ದವಾಗಬೇಕಂತೆ!

ಬಾಬಾ ನೀಡಿದ ಇಫ್ತಾರ್ ಕೂಟ

ಸಲ್ಮಾನ್ ಆಲಿಂಗನದ ನಂತರ ಹೊರಬಿದ್ದ ಕಿಂಗ್ ಖಾನ್ ಶಾರುಖ್

ಇದೆಲ್ಲ ರಾಜಕೀಯ

ಇದರ ಹಿಂದೆ ಯುಪಿಎ ಇದೆಯೆ? ಅಥವಾ ಭೂಗತ ದೊರೆಗಳ ಆರ್ಡರ್ ?

English summary
Shahrukh Khan and Salman Khan are trending on Twitter, ever since the two superstars have decided to bury the past and start afresh.
Please Wait while comments are loading...