»   » 'ಪದ್ಮಾವತಿ' ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಾರಾ ಶಾರುಖ್.?

'ಪದ್ಮಾವತಿ' ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಾರಾ ಶಾರುಖ್.?

By: ಸೋನು ಗೌಡ
Subscribe to Filmibeat Kannada

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಸದ್ಯಕ್ಕೆ ಬಿಟೌನ್ ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಭಾರಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿ ನಟಿ ದೀಪಿಕಾ ಪಡುಕೋಣೆ ಅವರು ಫಿಕ್ಸ್ ಆಗಿದ್ದಾರಾದರೂ, ಇವರಿಗೆ ನಾಯಕನನ್ನು ಹುಡುಕುವಷ್ಟರಲ್ಲಿ ನಿರ್ದೇಶಕ ಬನ್ಸಾಲಿ ಅವರು ಸುಸ್ತಾಗಿ ಹೋಗಿದ್ದಾರೆ.

ಮೇವಾಡ ರಾಣಿ 'ಪದ್ಮಾವತಿ'ಯ ಜೀವನದ ಕಥೆಯನ್ನಾಧರಿಸಿದ ಈ ಐತಿಹಾಸಿಕ ಚಿತ್ರದಲ್ಲಿ ಬಾಲಿವುಡ್-ಹಾಲಿವುಡ್ ನಲ್ಲಿ ಖ್ಯಾತಿ ಗಳಿಸಿರುವ ನಟಿ ದೀಪಿಕಾ ಪಡುಕೋಣೆ ಅವರು ರಾಣಿ 'ಪದ್ಮಾವತಿ' ಪಾತ್ರ ವಹಿಸಲಿದ್ದಾರೆ.

ಆದರೆ 'ಪದ್ಮಾವತಿ' ಗಂಡ ರಾಜ ರಾವಲ್ ರತನ್ ಸಿಂಗ್ ಪಾತ್ರ ವಹಿಸುವ ನಟನ ಆಯ್ಕೆಗಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ಇಡೀ ಬಿಟೌನ್ ಸುತ್ತಾಡುತ್ತಿದ್ದಾರೆ. ಈ ಮೊದಲು ನಟ ವಿಕ್ಕಿ ಕೌಶಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರನ್ನು ಖುದ್ದು ದೀಪಿಕಾ ಅವರೇ ಬೇಡ ಎಂದರಂತೆ.[ಊರಿಗೊಬ್ಳೆ 'ಪದ್ಮಾವತಿ' ದೀಪಿಕಾ ಗಂಡ ಆಗ್ತಾರಾ ವಿಕ್ಕಿ.?]

ತದನಂತರ ನಟ ಶಾಹೀದ್ ಕಪೂರ್ ಅವರನ್ನು ಆಯ್ಕೆ ಮಾಡಲಾಯಿತು. ಆದರೆ ಕೊನೆ ಕ್ಷಣದ ಕೆಲವು ಬದಲಾವಣೆಗಳಿಂದ ಅವರು ಈ ಚಿತ್ರತಂಡದಿಂದ ಹೊರಬಿದ್ದರು.

ಇದೀಗ ಬಾಲಿವುಡ್ ನ ಖ್ಯಾತ ನಟರಿಬ್ಬರ ಹೆಸರು ಕೇಳಿ ಬರುತ್ತಿದೆ. ಯಾರು ಆ ಇಬ್ಬರು ನಟರು ಎಂಬುದನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

ಮತ್ತೊಮ್ಮೆ 'ಚೆನ್ನೈ ಎಕ್ಸ್ ಪ್ರೆಸ್' ಜೋಡಿ

ಈ ಬಾರಿ ಬಾಲಿವುಡ್ ನ ಬಾದ್ ಷಾ ಕಿಂಗ್ ಖಾನ್ ಶಾರುಖ್ ಖಾನ್ ಅವರ ಹೆಸರು ಕೇಳಿ ಬರುತ್ತಿದೆ. ಈ ಮೊದಲು ಈ ಜೋಡಿ ನಿರ್ದೇಶಕ ರೋಹಿತ್ ಅವರ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.[ದೀಪಿಕಾ ಜೊತೆ ಮದುವೆ ಬಗ್ಗೆ ರಣವೀರ್ ಏನಂತಾರೆ.?]

ಹೃತಿಕ್ ಕೂಡ

ಅಲ್ಲದೇ ಬಾಲಿವುಡ್ 'ಹ್ಯಾಂಡ್ಸಮ್ ಹಂಕ್' ಹೃತಿಕ್ ರೋಷನ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಈ ಮೊದಲು ನಟ ಹೃತಿಕ್ ಅವರು 'ಜೋಧಾ ಅಕ್ಬರ್' ಚಿತ್ರದಲ್ಲಿ ರಾಜನ ಪಾತ್ರ ವಹಿಸಿ ಮೆಚ್ಚುಗೆ ಗಳಿಸಿದ್ದರು.

ಕಿಂಗ್ ಖಾನ್-ಡಿಪ್ಪಿ

ಬಾಲಿವುಡ್ ನಲ್ಲಿ ಕಿಂಗ್ ಖಾನ್ ಶಾರುಖ್ ಮತ್ತು ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗುತ್ತೆ ಅನ್ನೋದು ಈಗಾಗಲೇ ಸಾಬೀತಾಗಿದೆ.

ಫೇಮಸ್ ಜೋಡಿ

'ಓಂ ಶಾಂತಿ ಓಂ' ಚಿತ್ರದಲ್ಲಿ ಒಂದಾಗಿ ಕಮಾಲ್ ಮಾಡಿದ್ದ ಈ ಜೋಡಿ ನಿಜ ಜೀವನದಲ್ಲೂ ಅತ್ಯುತ್ತಮ ಫ್ರೆಂಡ್ಸ್.

'ಪದ್ಮಾವತಿ'ಯಲ್ಲಿ ಹಸಿಬಿಸಿ ಲುಕ್'

ಐತಿಹಾಸಿಕ ಕಥೆಯಾಧರಿತ 'ಪದ್ಮಾವತಿ' ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಗಂಡನ ಜೊತೆ ತುಂಬಾ ಹಸಿಬಿಸಿ ಲುಕ್ ನಲ್ಲಿ ಮಿಂಚಲಿದ್ದಾರೆ. ಆದ್ದರಿಂದ ದೀಪಿಕಾ ಜೊತೆ ಆನ್ ಸ್ಕ್ರಿನ್ ಕೆಮಿಸ್ಟ್ರಿಗೆ ಯಾರು ಚೆನ್ನಾಗಿ ಒಪ್ಪುತ್ತಾರೆ ಅನ್ನೋದನ್ನ ನೋಡಿಕೊಂಡು ಚಿತ್ರಕ್ಕೆ ನಾಯಕನನ್ನು ಆರಿಸಬೇಕಿದೆ.

ಯಾವಾಗ ಶೂಟಿಂಗ್ ?

ಸೆಪ್ಟೆಂಬರ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭಿಸಲು ಬನ್ಸಾಲಿ ಅವರು ಪ್ಲ್ಯಾನ್ ಮಾಡಿದ್ದಾರೆ. ಅಷ್ಟರೊಳಗಾಗಿ 'ಪದ್ಮಾವತಿ'ಗೆ ಯಾರನ್ನು ಗಂಡನಾಗಿ ಆಯ್ಕೆ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

English summary
Deepika Padukone will play the role of queen Padmavati in her next with Sanjay Leela Bhansali. But did you know that Shahrukh Khan is being considered to play the part of the king in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada