»   » ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಇನ್ನು ಮುಂದೆ 'ಜೀರೋ'

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಇನ್ನು ಮುಂದೆ 'ಜೀರೋ'

Posted By:
Subscribe to Filmibeat Kannada

ಬಿ ಟೌನ್ ಅಂಗಳದ ಹ್ಯಾಂಡ್ ಸಮ್ ಹಂಕ್ ಅಂತಾನೇ ಹೆಸರು ಪಡೆದುಕೊಂಡಿರುವ ಕಿಂಗ್ ಖಾನ್ ಇನ್ನು ಮುಂದೆ ಜೀರೋ, ಅಯ್ಯೋ ಶಾರುಖ್ ಯಾಕೆ ಜೀರೋ ಆಗುತ್ತಾರೆ. ಅಂತ ಆಶ್ಚರ್ಯ ಪಡಬೇಡಿ. ಶಾರುಕ್ ಅಭಿನಯದ ಮುಂದಿನ ಚಿತ್ರದ ಟೈಟಲ್ ಜೀರೋ.ಹೊಸ ವರ್ಷದ ವಿಶೇಷವಾಗಿ ಚಿತ್ರ ಟೈಟಲ್ ಹಾಗೂ ವಿಡಿಯೋ ಝಲಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಜೀರೋ ಶಾರುಖ್ ಅಭಿನಯದ ಸಿನಿಮಾ. ಇದೇ ಮೊದಲ ಬಾರಿಗೆ ಕಿಂಗ್ ಖಾನ್ ಅಭಿಮಾನಿಗಳ ಮುಂದೆ 'ಕುಬ್ಜ'ನ ರೂಪದಲ್ಲಿ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಶಾರುಖ್ ಹೇಗೆ ಕಾಣಿಸಿಕೊಳ್ಳುತ್ತಾರೆ ಅನ್ನುವ ಕುತೂಹಲ ತಣಿಸಲು ಸಣ್ಣದೊಂದು ವಿಡಿಯೋ ತುಣುಕನ್ನ ಬಿಡುಗಡೆ ಮಾಡಿದ್ದಾರೆ.

Shahrukh will be seen in the role of a dwarf man his next film

ಜೋರೋ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ. ಆನಂದ್ ಎಲ್ ರಾಯ್ ಜೀರೋ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಕಿಂಗ್ ಖಾನ್ ಜೊತೆ ನಾಯಕಿಯರಾಗಿ ಅಭಿನಯಿಸಲಿದ್ದಾರೆ.

Shahrukh will be seen in the role of a dwarf man his next film

ರೆಡ್ ಚಿಲ್ಲಿಸ್ ಬ್ಯಾನರ್ ನಲ್ಲಿ ಗೌರಿ ಖಾನ್ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಚಿತ್ರದ ಬಿಡುಗಡೆ ದಿನಾಂಕವನ್ನೂ ಅನೌನ್ಸ್ ಮಾಡಿದೆ ಸಿನಿಮಾತಂಡ. ಇದೇ ವರ್ಷದ ಅಂತ್ಯಕ್ಕೆ ಜೀರೋ ಸಿನಿಮಾವನ್ನ ತೆರೆಗೆ ತರಲಿದ್ದಾರೆ ಶಾರುಖ್ ಮತ್ತು ತಂಡ.

Shahrukh will be seen in the role of a dwarf man his next film

ಟೀಸರ್ ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು 5.8 ಅಡಿ ಎತ್ತರ ಇರುವ ಶಾರುಖ್ ಅವರನ್ನ ಟೆಕ್ನಾಲಜಿ ಬಳಸಿಕೊಂಡು ಕುಬ್ಜರಂತೆ ಕಾಣುವಂತೆ ಮಾಡಲಾಗಿದೆ. ಟೈಟಲ್ ಬಿಡುಗಡೆ ಮಾಡಿರುವ ನಿರ್ದೇಶಕರು ಸಿನಿಮಾದ ಬಗ್ಗೆ ಹೆಚ್ಚೇನು ಮಾಹಿತಿ ನೀಡಿಲ್ಲ. ಒಟ್ಟಾರೆ ಈ ವರ್ಷ ಶಾರುಖ್ ಅಭಿಮಾನಿಗಳಿಗೆ ಬೇರೆಯದ್ದೇ ರೀತಿಯ ಚಿತ್ರವನ್ನ ನೋಡುವ ಅವಕಾಶವಂತು ಸಿಕ್ಕಿದೆ.

English summary
Shahrukh Khan has brought a special gift for his fans, Shah Rukh Khan unveiled Name of his upcoming Movie,King Khan’s upcoming title is Zero, Shahrukh Khan will be seen in the role of a dwarf man in his next film.Anushka Sharma and katrina kaife will play a lead role in this film with Shah Rukh Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X