For Quick Alerts
  ALLOW NOTIFICATIONS  
  For Daily Alerts

  ಶ್ರದ್ಧಾ ಕಪೂರ್ ಮದುವೆ ವದಂತಿ ಬಗ್ಗೆ ಗರಂ ಆದ ಶಕ್ತಿ ಕಪೂರ್

  |

  ನಟಿ ಶ್ರದ್ಧಾ ಕಪೂರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ಮೂಲಕ ಬಾಲಿವುಡ್ ನ ಟಾಪ್ ನಟಿಮಣಿಯರ ಸಾಲಲ್ಲಿ ಸ್ಥಾನ ಪಡೆದಿರುವ ಶ್ರದ್ಧಾ ಸೈಲೆಂಟ್ ಆಗಿ ಮದುವೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ, ಮುಂದಿನ ವರ್ಷವೇ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಕಳೆದ ಕೆಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಶ್ರದ್ಧಾ ಮದುವೆ ವಿಚಾರ ಚರ್ಚೆ ಆಗುತ್ತಿದೆ. ಕಾರಣ ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ಎಂದು ಹೇಳಲಾಗ್ತಿರುವ ಸೆಲೆಬ್ರಿಟಿ ಫೋಟೋಗ್ರಾಫರ್ ರೋಹನ್ ಶ್ರೇಸ್ತಾ ಜೊತೆ ತುಂಬ ಆತ್ಮೀಯವಾಗಿರುವುದು. ಅಲ್ಲದೆ ಇಬ್ಬರು ತಮ್ಮ ಗೆಳೆತನವನ್ನು ಮದುವೆವರೆಗೂ ತೆಗೆದುಕೊಂಡು ಹೋಗಲು ಕದ್ದು ಮುಚ್ಚಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  'ಸೈನಾ' ಬಯೋಪಿಕ್ ನಿಂದ ಶ್ರದ್ದಾ ಹೊರಕ್ಕೆ: ಶ್ರದ್ಧಾ ಜಾಗಕ್ಕೆ ಬಂದ ನಟಿ ಯಾರು?

  ಮದುವೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ ಈ ಬಗ್ಗೆ ಶ್ರದ್ಧಾ ಕಪೂರ್ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಆದ್ರೀಗ ಶ್ರದ್ಧಾ ಕಪೂರ್ ಅವರ ಅಪ್ಪ ಶಕ್ತಿ ಕಪೂರ್ ಮಗಳ ಮದುವೆ ಚರ್ಚೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಗೆ ಡೆಂಘೀ ಜ್ವರ

  'ಇದು ಶುದ್ಧ ಸುಳ್ಳು ಸುದ್ದಿ. ಮದುವೆ ವಿಚಾರವಾಗಿ ಶ್ರದ್ಧಾ ಇನ್ನೂ ಪ್ಲಾನ್ ಮಾಡಿಲ್ಲ. ಮುಂದಿನ ನಾಲ್ಕೈದು ವರ್ಷಗಳವರೆಗೂ ನನ್ನ ಮಗಳು ಮದುವೆ ಆಗಲ್ಲ. ಸದ್ಯ ಆಕೆಯ ಬಳಿ ಕೈ ತುಂಬಾ ಸಿನಿಮಾಗಳಿವೆ. ಅದರ ಕಡೆ ಮಾತ್ರ ಗಮನ ಹರಿಸುತ್ತಾಳೆ. ಏನೇ ಇದ್ದರು ನನ್ನ ಬಳಿ ಹೇಳಿಕೊಳ್ಳುತ್ತಾಳೆ. ನಮಗೆ ಹೇಳದೆ ಅವಳು ಮದುವೆ ಪ್ಲಾನ್ ಮಾಡುವುದಿಲ್ಲ' ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

  ಪ್ರಭಾಸ್ ಅಭಿನಯದ 'ಸಾಹೋ' ಚಿತ್ರದಲ್ಲಿ ನಟಿಸುತ್ತಿರುವ ಶ್ರದ್ಧಾ ಕಪೂರ್ ಬಳಿ ಸದ್ಯ 'ಸ್ಟ್ರೀಟ್ ಡಾನ್ಸರ್', 'ಚಿಚೋರ್' ಅಂತಹ ಚಿತ್ರಗಳಿವೆ.

  English summary
  Shakti Kapoor breaks silence about Shraddha Kapoor's marriage rumours. Shraddha getting married next year rumours are going around in bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X