For Quick Alerts
  ALLOW NOTIFICATIONS  
  For Daily Alerts

  ಛಾಯಾಗ್ರಾಹಕನ ಜೊತೆ ನಟಿ ಶ್ರದ್ಧಾ ಕಪೂರ್ ಮದುವೆ: ಶಕ್ತಿ ಕಪೂರ್ ಹೇಳಿದ್ದೇನು?

  |

  ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಮದುವೆಯಾದ ಬೆನ್ನಲ್ಲೇ ಮತ್ತೋರ್ವ ಸ್ಟಾರ್ ನಟಿಯ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ನಟಿ ಶ್ರದ್ಧಾ ಕಪೂರ್ ಈ ವರ್ಷ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಶ್ರದ್ಧಾ ಕಪೂರ್ ಕಳೆದ ಮೂರು ವರ್ಷಗಳಿಂದ ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಶ್ರೇಷ್ಠ ಜೊತೆ ಪ್ರೀತಿಯಲ್ಲಿದ್ದಾರೆ. ಇಬ್ಬರು ಪ್ರೀತಿಯ ವಿಚಾರವನ್ನು ಎಲ್ಲಿಯೂ ಹೇಳಿಕೊಂಡಿಲ್ಲವಾರೂ ಅದು ಗುಟ್ಟಾಗಿ ಉಳಿದಿಲ್ಲ. ಶ್ರದ್ಧಾ ಮತ್ತು ರೋಹನ್ ಮದುವೆ ಬಗ್ಗೆ ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್ ಸುಳಿವು ನೀಡಿದ್ದಾರೆ.

  ನಟಿ ಶ್ರದ್ಧಾ ಮದುವೆಯ ಬಗ್ಗೆ ಸುಳಿವು ನೀಡಿದ ನಟ ವರುಣ್ ಧವನ್

  ವರುಣ್ ಧವನ್ ಗೆ ವಿಶ್ ಮಾಡಿದ್ದ ರೋಹನ್ ಗೆ ಧನ್ಯವಾದ ತಿಳಿಸಿ,

  'ನಿಜಕ್ಕೂ ನೀವು ಕೂಡ ಮದುವೆಗೆ ಸಿದ್ಧರಾಗಿದ್ದೀರಾ ಎಂದು ಭಾವಿಸಿದ್ದೇನೆ' ಎಂದು ಪ್ರತಿಕ್ರಿಯೆ ನೀಡಿದ್ದರು. ವರುಣ್ ಈ ಸ್ಟೇಟಸ್ ಹಾಕುತ್ತಿದ್ದಂತೆ ಶ್ರದ್ಧಾ ಮದುವೆ ವಿಚಾರ ವೈರಲ್ ಆಗಿದೆ.

  ಈ ಬಗ್ಗೆ ಶ್ರದ್ಧಾ ಕಪೂರ್ ತಂದೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 'ರೋಹನ್ ಶ್ರೇಷ್ಠನೆ ಯಾಕೆ? ಅವಳು ಯಾರನ್ನೇ ಆರಸಿಕೊಂಡರು ಮತ್ತು ಅವಳು ಯಾರ ಜೊತೆ ಇರಲು ಇಷ್ಟಪಡುತ್ತಾಳೆ ಎಂದು ಹೇಳಲಿ. ನನಗೆ ಯಾವುದೇ ಆಕ್ಷೇಪವಿಲ್ಲ' ಎಂದಿದ್ದಾರೆ.

  ಇನ್ನೂ ರೋಹನ್ ಬಗ್ಗೆ ಮಾತನಾಡಿದ ಶಕ್ತಿ ಕಪೂರ್, 'ರೋಹನ್ ತುಂಬಾ ಒಳ್ಳೆಯ ಹುಡುಗ. ಅವನು ಚಿಕ್ಕವನಿದ್ದಾಗಿಂದನೂ ಮನೆಗೆ ಬರುತ್ತಿದ್ದಾನೆ. ಅವನನ್ನು ಮದುವೆ ಆಗುವ ಬಗ್ಗೆ ಶ್ರದ್ಧಾ ನನಗೆ ಹೇಳಿಲ್ಲ. ನನಗೆ ಅವರು ಇನ್ನೂ ಬಾಲ್ಯದ ಗೆಳೆಯರು ಅಷ್ಟೆ.' ಎಂದು ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada

  2020ರಲ್ಲಿ ಶ್ರದ್ಧಾ ಕಪೂರ್ ಸಂದರ್ಶನವೊಂದರಲ್ಲಿ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದರು. ಸದ್ಯ ಸಿನಿಮಾಗಳು ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಸಮಯವಿಲ್ಲ ಎಂದು ಹೇಳುವ ಮೂಲಕ ರೋಹನ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.

  English summary
  Shakti Kapoor reaction about shraddha kapoor's marriage plan with Rohan Shrestha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X