For Quick Alerts
  ALLOW NOTIFICATIONS  
  For Daily Alerts

  "ದೀಪಿಕಾ ಬಿಕಿನಿ ಅಶ್ಲೀಲ ಅಷ್ಟೇ ಅಲ್ಲ.. ಪ್ರಚೋದನಕಾರಿ" ಎಂದ 'ಶಕ್ತಿಮಾನ್'

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್‌ ಕಿಂಗ್ ಖಾನ್ ಶಾರುಖ್ ನಾಲ್ಕು ವರ್ಷಗಳ ಬಳಿಕ ಹೊಸ ಸಿನಿಮಾ 'ಪಠಾಣ್' ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೇನು ಸಿನಿಮಾ ಬಿಡುಗಡೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಚಿತ್ರತಂಡ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದೆ. ಇದೇ ವೇಳೆ ಸಿನಿಮಾ ವಿರುದ್ಧ ವಿವಾದವೊಂದು ಅಂಟಿಕೊಂಡಿದ್ದು, ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೀಡು ಮಾಡಿದೆ.

  'ಪಠಾಣ್' ಸಿನಿಮಾ 'ಭೇಷರಮ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಕೆಲವು ದಿನಗಳಿಂದ ಕೇಸರಿ ಬಿಕಿನಿ ಬಗ್ಗೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ದಿಗ್ಗಜರು ಪರ-ವಿರೋಧ ಪ್ರತಿಕ್ರಿಯೆಗಳನ್ನು ನೀಡುತ್ತಲೇ ಇದ್ದಾರೆ.

  Fact Check: ಶಾರುಖ್ ಖಾನ್ ಸಿನಿಮಾ 'ಪಠಾಣ್' ಬಾಯ್‌ಕಾಟ್ ಮಾಡುವಂತೆ ಕರೆ ನೀಡಿದ್ರಾ ಯೋಗಿ ಆದಿತ್ಯನಾಥ್?Fact Check: ಶಾರುಖ್ ಖಾನ್ ಸಿನಿಮಾ 'ಪಠಾಣ್' ಬಾಯ್‌ಕಾಟ್ ಮಾಡುವಂತೆ ಕರೆ ನೀಡಿದ್ರಾ ಯೋಗಿ ಆದಿತ್ಯನಾಥ್?

  ಇತ್ತೀಚೆಗೆ 'ಶಕ್ತಿಮಾನ್' ಖ್ಯಾತಿಯ ನಟ ಮುಕೇಶ್ ಖನ್ನಾ ಕೂಡ ದೀಪಿಕಾ ಪಡುಕೋಣೆ ಉಡುಗೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೆನ್ಸಾರ್ ಬೋರ್ಡ್ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಅಸಲಿಗೆ ಮುಕೇಶ್ ಖನ್ನಾ ಹೇಳಿಕೆ ಇಷ್ಟೊಂದು ಚರ್ಚೆಯಾಗುತ್ತಿರೋದು ಯಾಕೆ? ಅನ್ನೋದರ ಡಿಟೈಲ್ಸ್ ಇಲ್ಲಿದೆ.

  'ಬಾಯ್‌ಕಾಟ್ ಪಠಾಣ್' ಅಭಿಯಾನ

  'ಬಾಯ್‌ಕಾಟ್ ಪಠಾಣ್' ಅಭಿಯಾನ

  'ಪಠಾಣ್' ಸಿನಿಮಾದ 'ಭೇಷರಮ್ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಲುಕ್ ಕೊಟ್ಟಿರೋ ನಟಿ ಹಲವು ಸನ್ನಿವೇಶಗಳಲ್ಲಿ ಬೋಲ್ಡ್ ಕಾಸ್ಟ್ಯೂಮ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಹಾಡಿನಲ್ಲಿ ಕೇಸರಿ ಬಿಕಿನಿಯನ್ನು ತೊಟ್ಟಿರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ 'ಬಾಯ್‌ಕಾಟ್ ಪಠಾಣ್' ಅಭಿಯಾನ ಕೂಡ ಆರಂಭ ಆಗಿದೆ. ಇಷ್ಟೆಲ್ಲಾ ನಡೆಯುತ್ತಿರುವಾಗಲೇ 'ಶಕ್ತಿಮಾನ್' ಖ್ಯಾತಿಯ ಮುಕೇಶ್ ಖನ್ನಾ ಕೂಡ ಈ ಹಾಡಿನ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು.

  'ಭೇಷರಮ್' ಹಾಡು ಪ್ರಚೋದನಕಾರಿ'

  'ಭೇಷರಮ್' ಹಾಡು ಪ್ರಚೋದನಕಾರಿ'

  ಮುಕೇಶ್ ಖನ್ನಾ 'ಭೇಷರಮ್' ಹಾಡಿನ ಬಗ್ಗೆ ಚರ್ಚೆಯಾಗಬೇಕಿರುವುದು ದೀಪಿಕಾ ತೊಟ್ಟ ಬಿಕಿನಿಯ ಬಣ್ಣದ ಬಗ್ಗೆ ಅಲ್ಲ ಎಂದಿದ್ದಾರೆ. "ಇಲ್ಲಿ ಚರ್ಚೆಯಾಗಬೇಕಿರುವುದು ನಟಿ ತೊಟ್ಟ ಬಿಕಿನಿ ಬಣ್ಣದ ಬಗ್ಗೆ ಅಲ್ಲ. ವಿಷಯ ಬೇರೆನೇ ಇದೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಸಿನಿಮಾದ ಭೇಷರಮ್ ಹಾಡು ಅಶ್ಲೀಲವಾಗಿರುವುದಷ್ಟೇ ಅಲ್ಲ. ಪ್ರಚೋದನಕಾರಿಯಾಗಿದೆ" ಎಂದು ಮುಕೇಶ್ ಖನ್ನಾ ಆಕ್ರೋಶ ಹೊರ ಹಾಕಿದ್ದಾರೆ.

  'ಸೆನ್ಸಾರ್ ಮಾಡುವಾಗ ವಿವೇಚನೆ ಇರಬೇಕು'

  'ಸೆನ್ಸಾರ್ ಮಾಡುವಾಗ ವಿವೇಚನೆ ಇರಬೇಕು'

  " ಭೇಷರಮ್ ಹಾಡು ಚರ್ಚೆಯಾಗಬೇಕಿರೋದು ಬಿಕಿನಿಯ ಬಣ್ಣದಿಂದ ಅಲ್ಲ. ಅಥವಾ ಇದೊಂದು ಧಾರ್ಮಿಕ ವಿಷಯವೂ ಅಲ್ಲ. ಈ ಹಾಡು ಅಶ್ಲೀಲ ಅಷ್ಟೇ ಅಲ್ಲ. ಪ್ರಚೋದನಾಕಾರಿಯಾಗಿದೆ. ಇಂತಹ ಹಾಡನ್ನು ಸೆನ್ಸಾರ್ ಬೋರ್ಡ್ ಹೇಗೆ ಬಿಡಲು ಸಾಧ್ಯ? ನಾವು ಸ್ಪೇನ್ ಅಥವಾ ಸ್ವೀಡನ್‌ನಲ್ಲಿ ಇಲ್ಲ. ನಾವು ಭಾರತದಲ್ಲಿ ಇದ್ದೇವೆ. ಈ ಹಾಡು ಯುವಕ ನಿದ್ದೆ ಕೆಡಿಸುವುದಲ್ಲದೆ. ಅವರನ್ನು ತಪ್ಪುದಾರಿಗೆ ಎಳೆಯುತ್ತೆ. ಸೆನ್ಸಾರ್ ಬೋರ್ಡ್ ಇಂತಹ ಹಾಡುಗಳನ್ನು ಬಿಡಬಾರದು" ಎಂದು ಮುಕೇಶ್ ಖನ್ನಾ ಹೇಳಿಕೆ ನೀಡಿದ್ದಾರೆ.

  ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಸಿನಿಮಾ

  ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಸಿನಿಮಾ

  'ಪಠಾಣ್' ಸಿನಿಮಾ ಯಶ್ ರಾಜ್‌ ಬ್ಯಾನರ್‌ನಲ್ಲಿ ನಿರ್ಮಾಣ ಆಗುತ್ತಿರುವ ಬಿಗ್ ಬಜೆಟ್ ಸಿನಿಮಾ. ಶಾರುಖ್ ಖಾನ್ ನಾಲ್ಕು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿರುವ ಚಿತ್ರ. ಈ ಕಾರಣಕ್ಕೆ ಸಿನಿಮಾ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ. ಶಾರುಖ್, ದೀಪಿಕಾ, ಜಾನ್ ಅಬ್ರಾಹಂ ಅಂತಹ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿದ್ದು, ಸಿನಿಪ್ರಿಯರು 'ಪಠಾಣ್' ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಬಿಕಿನಿ ವಿವಾದ ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

  English summary
  Shaktimaan Aka Mukesh Khanna Calls Deepika Padukone Outfit Is Provocative, Know More.
  Sunday, December 18, 2022, 12:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X