For Quick Alerts
  ALLOW NOTIFICATIONS  
  For Daily Alerts

  ತನ್ನ ಕಾಯಿಲೆ ಬಗ್ಗೆ ಹೇಳಿಕೊಂಡ ಶಮಿತಾಶೆಟ್ಟಿ: ಶಿಲ್ಪಾಶೆಟ್ಟಿ ಸಹೋದರಿಗೆ ಆಗಿರುವುದೇನು?

  |

  ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ ಬಳಿಕ ಹೆಚ್ಚಾಗಿ ಗಮನ ಸೆಳೆದಿದ್ದಾರೆ. ಶಮಿತಾ ಬಿಗ್‌ ಬಾಸ್‌ಗೆ ಹೋಗಿದ್ದೇ ಹೋಗಿದ್ದು, ಆಕೆಯ ಬಗ್ಗೆಯೇ ಬಾಲಿವುಡ್‌ನಲ್ಲಿ ಚರ್ಚೆ ಆಗುತ್ತಿತ್ತು.

  ತೆರೆಯ ಮೇಲೆ ತುಂಬಾ ಚುರುಕಾಗಿ ಕಾಣಿಸಿಕೊಳ್ಳುವ ಶಮಿತಾ ಶೆಟ್ಟಿ ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಶಮಿತಾ ಬಿಗ್‌ಬಾಸ್‌ ಕಾರ್ಯಕ್ರಮದಿಂದ ಹೊರ ಬರಬೇಕಾಯ್ತು. ಸದ್ಯ ಶಮಿತಾ ಶೆಟ್ಟಿ ತಮಗೆ ಇರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅದರಿಂದ ಅವರು ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಎನ್ನುವುದನ್ನು ಸಹಸ್ಪರ್ಧಿ ಜೊತೆಗೆ ಶಮಿತಾ ಹಂಚಿಕೊಂಡಿದ್ದಾರೆ.

   ಕರುಳು ಉರಿಯೂತದಿಂದ ಬಳಲುತ್ತಿದ್ದಾರೆ ಶಮಿತಾ!

  ಕರುಳು ಉರಿಯೂತದಿಂದ ಬಳಲುತ್ತಿದ್ದಾರೆ ಶಮಿತಾ!

  ಹಿಂದಿಯ ಬಿಗ್‌ ಬಾಸ್‌ 15ನೇ ಆವೃತ್ತಿಯಲ್ಲಿ ಶಮಿತಾ ಶೆಟ್ಟಿ ಭಾಗವಹಿಸಿದ್ದಾರೆ. ಹಲವು ದಿನಗಳಿಂದ ಶಮಿತಾ ಬಿಗ್‌ ಬಾಸ್‌ ಕಾರ್ಯಕ್ರಮದ ಭಾಗ ಆಗಿದ್ದರು. ಆದರೆ ಇತ್ತೀಚೆಗೆ ಅನಾರೋಗ್ಯದ ಸಮಸ್ಯೆಯಿಂದ ಶಮಿತಾ ಶೆಟ್ಟಿ ಬಿಗ್‌ಬಾಸ್‌ ಕಾರ್ಯಕ್ರಮದಿಂದ ಹೊರ ಬಂದಿದ್ದರು. ಈಗ ಮತ್ತೆ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಶಮಿತಾ ಬಿಗ್‌ ಬಾಸ್ ಮನೆ ಸೇರಿದ್ದಾರೆ.

  ಅಲ್ಲಿ ಅವರು ತಮಗೆ ಇರುವ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಆ ಸಮಸ್ಯೆಯಿಂದ ಹೇಗೆ ಸುಧಾರಿಸಿಕೊಂಡರು ಎನ್ನುವ ಬಗ್ಗೆಯೂ ವಿವರಿಸಿದ್ದಾರೆ. 'ಕೊಲೈಟಿಸ್' ಎಂದು ಕರೆಯಲ್ಪಡುವ ಕರುಳಿನ ಉರಿಯೂತದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಶಮಿತಾ ತಮ್ಮ ಬಿಗ್‌ಬಾಸ್ ಸಹ ಸ್ಪರ್ಧಿ ಜೊತೆಗೆ ಹಂಚಿಕೊಂಡಿದ್ದಾರೆ.

   ಶಮಿತಾ ಆಹಾರ ಕ್ರಮದಲ್ಲಿ ಬಹಳ ಕಟ್ಟು ನಿಟ್ಟು!

  ಶಮಿತಾ ಆಹಾರ ಕ್ರಮದಲ್ಲಿ ಬಹಳ ಕಟ್ಟು ನಿಟ್ಟು!

  ಬಿಗ್ ಬಾಸ್ ಮನೆಯನ್ನು ತಾತ್ಕಾಲಿಕವಾಗಿ ತೊರೆದಿದ್ದ ನಟಿ ಶಮಿತಾ ಶೆಟ್ಟಿ ಇತ್ತೀಚೆಗೆ ಟಾಪ್ 5 ಸ್ಪರ್ಧಿಗಳನ್ನು ಘೋಷಿಸುವ ಮುನ್ನ ಕಾರ್ಯಕ್ರಮಕ್ಕೆ ಮರಳಿದ್ದಾರೆ. ಒಂದು ಸಂಚಿಕೆಯಲ್ಲಿ, ಶೆಟ್ಟಿ ಸಹಸ್ಪರ್ಧಿ ಅಕ್ಷರಾ ಸಿಂಗ್ ಅವರ ಬಳಿ ಕರುಳಿನ ಉರಿಯೂತದ ಕಾಯಿಲೆಯಿಂದ ತಮ್ಮ ಸ್ಥಿತಿ ಹೇಗಾಗಿತ್ತು ಎಂದು ವಿವರಿಸಿದ್ದಾರೆ. "ಸಹಜವಾಗಿ ಊಟವನ್ನು ತಿನ್ನಲು ಸಾಧ್ಯವಾಗದ ಸ್ಥಿತಿಯಿಂದ ಬಳಲುತ್ತಿದ್ದೇನೆ" ಎಂದು ಹೇಳಿಕೊಂಡರು. ಅಲ್ಲದೇ ಅವರು ಗ್ಲುಟನ್ ಮುಕ್ತ ಆಹಾರವನ್ನು ಸೇವಿಸುವ ಬಗ್ಗೆಯು ಮಾತನಾಡಿದ್ದಾರೆ.

  ಕೊಲೈಟಿಸ್ ಎನ್ನುವುದು ದೊಡ್ಡ ಕರುಳಿನ ಒಳಗಿನ ಪದರ ಉರಿಯೂತವಾಗಿದೆ. ಕರುಳಿಗೆ ಸೋಂಕು ತಗುಲಿರುವುದು ಮತ್ತು ರಕ್ತ ಸರಬರಾಜು ಸರಿಯಾಗಿ ಆಗದೇ ಇರುವುದು ಉರಿಯೂತಕ್ಕೆ ಕಾರಣ ಆಗಲಿದೆ. ಹೀಗೆ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಹೊಟ್ಟೆ ನೋವು, ಅತಿಸಾರ ಮತ್ತು ಸೆಳೆತ ಎನ್ನುತ್ತಾರೆ ತಜ್ಞರು.

   ಬಿಗ್‌ ಬಾಸ್ ಟ್ರೋಫಿ ಗೆಲ್ಲುತ್ತಾರಾ ಶಮಿತಾ ಶೆಟ್ಟಿ!

  ಬಿಗ್‌ ಬಾಸ್ ಟ್ರೋಫಿ ಗೆಲ್ಲುತ್ತಾರಾ ಶಮಿತಾ ಶೆಟ್ಟಿ!

  ಸದ್ಯ ಬಿಗ್‌ ಬಾಸ್‌ ಕಾರ್ಯಕ್ರಮಕ್ಕೆ ನಟಿ ಶಮಿತಾ ಶೆಟ್ಟಿ ಕಮ್‌ ಬ್ಯಾಕ್ ಮಾಡಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಶಮಿತಾ ವಾಪಸ್ ಆಗಿದ್ದಾರೆ. ಟಾಪ್ 5 ಸ್ಪರ್ಧಿಗಳಲ್ಲಿ ಶಮಿತಾ ಕೂಡ ಒಬ್ಬರಾಗಿದ್ದಾರೆ. ಹಾಗಾಗಿ ಶಮಿತಾ ಈ ಬಾರಿಯ ಬಿಗ್‌ ಬಾಸ್‌ನಲ್ಲಿ ವಿನ್ನರ್ ಅಥವಾ ರನ್ನರಪ್ ಆಗುವ ಸಾಧ್ಯತೆ ಇದೆ.

   ಬಿಗ್‌ಬಾಸ್‌ನಿಂದ ಶಮಿತಾ ಬೇಡಿಕೆ ಹೆಚ್ಚಲಿದೆ!

  ಬಿಗ್‌ಬಾಸ್‌ನಿಂದ ಶಮಿತಾ ಬೇಡಿಕೆ ಹೆಚ್ಚಲಿದೆ!

  ಇನ್ನು ನಟಿ ಶಮಿತಾ ಶೆಟ್ಟಿ 2000ದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಶಮಿತಾಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಶಮಿತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ವೆಬ್‌ ಸಿರೀಸ್‌ಗಳಲ್ಲೂ ಶಮಿತಾ ಶೆಟ್ಟಿ ಅಭಿನಯಿಸಿದ್ದಾರೆ. ಈಗ ಬಿಗ್‌ ಬಾಸ್ ಬಳಿಕ ಶಮಿತಾ ಜರ್ನಿ ಬದಲಾಗುವ ಸಾಧ್ಯತೆ ಇದೆ. ಬಿಗ್ ಬಾಸ್‌ ಟ್ರೋಪಿ ಹಿಡಿದರೆ ಶಮಿತಾಗೆ ಇರುವ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ.

  English summary
  Bollywood Actress Shamita Shetty opened up about her health condition On Bigg Boss 15, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X