Don't Miss!
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ಕರ್ ಅಂಗಳಕ್ಕೆ ಭಾರತದ ಕಿರುಚಿತ್ರ: ಮೂಡಿದೆ ಗೊಂದಲ
ಭಾರತದ ಮಟ್ಟಿಗೆ ಈ ಹಿಂದಿಗಿಂತಲೂ ಈ ಬಾರಿ ಕುತೂಹಲ ಮೂಡಿಸಿದೆ ಆಸ್ಕರ್. ಮಲಯಾಳಂ ಸಿನಿಮಾ 'ಜಲ್ಲಿಕಟ್ಟು'ವನ್ನು ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಕಳಿಸಲಾಗಿದೆ.
ಆದರೆ ಈ ಬಾರಿ ಆಸ್ಕರ್‌ನ ಸಿನಿಮಾ ವಿಭಾಗದ ಜೊತೆಗೆ ಕಿರುಚಿತ್ರ ವಿಭಾಗದ ಮೇಲೆ ಭಾರತೀಯರ ಕಣ್ಣು ನೆಟ್ಟಿದೆ. ಅದಕ್ಕೆ ಕಾರಣ ಉತ್ತಮ ಗುಣಮಟ್ಟದ ಕಿರುಚಿತ್ರಗಳು ಆಸ್ಕರ್‌ಗೆ ಆಗಿವೆ. ಆದರೆ ಈ ಆಯ್ಕೆಯಲ್ಲೂ ತುಸು ಗೊಂದಲ ಏರ್ಪಟ್ಟಿದೆ.
ಹೌದು, ಮೊದಲಿಗೆ ನಟಿ ವಿದ್ಯಾ ಬಾಲನ್ ನಟನೆಯ 'ನಟ್‌ಕಟ್' ಸಿನಿಮಾ, ವಿವಿಧ ಕಿರುಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಗೆದ್ದು, ಆಸ್ಕರ್‌ಗೆ ಹೋಗಲು ಅರ್ಹತೆ ಗಿಟ್ಟಿಸಿಕೊಂಡಿದೆ ಎನ್ನಲಾಗಿತ್ತು.
ನಂತರ ಧೀರಜ್ ಜಿಂದಾಲ್ ನಿರ್ದೇಶನದ 'ಪಾಷ್' ಎಂಬ ಕಿರುಚಿತ್ರ ಸಹ ಆಸ್ಕರ್‌ಗೆ ತೆರಳಿದೆ ಎಂಬ ಸುದ್ದಿ ಬಂತು. 13 ನಿಮಿಷದ ಈ ಕಿರುಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರಕ್ ಡ್ರೈವರ್ ಒಬ್ಬ ಹೇಳಿದ ಕತೆಯನ್ನೇ ಸಿನಿಮಾ ಮಾಡಿದ್ದಾರೆ ಧೀರಜ್ ಜಿಂದಾಲ್.
Recommended Video
ಕಿರುಚಿತ್ರ 'ಶೇಮ್‌ಲೆಸ್' ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿ ಆಸ್ಕರ್ ಹೋಗುತ್ತಿದೆ ಎಂಬ ಸದ್ದಿ ಇದೀಗ ಬಂದಿದೆ. ಆದರೆ ಈ ಬಗ್ಗೆ 'ನಟ್‌ಕಟ್' ಕಿರುಚಿತ್ರದ ನಿರ್ದೇಶಕ ತಕರಾರು ತೆಗೆದಿದ್ದು, ಇದು ಸುಳ್ಳು ಸುದ್ದಿ, ಶೆಮ್‌ಲೆಸ್ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ ಹಲವು ಮಾಧ್ಯಮಗಳಲ್ಲಿ ಶೇಮ್‌ಲೆಸ್ ಸಿನಿಮಾ ಆಯ್ಕೆ ಆಗಿರುವುದಾಗಿ ಹೇಳಲಾಗಿದೆ.
ನಟ್‌ಕಟ್ ಕಿರುಚಿತ್ರದ ನಿರ್ದೇಶಕ 'ಶೇಮ್‌ಲೆಸ್' ಸಿನಿಮಾ ಆಸ್ಕರ್‌ಗೆ ಆಯ್ಕೆಯಾಗಿಲ್ಲ. ಆಯ್ಕೆಯಾದ ಕಿರುಚಿತ್ರದ ಹೆಸರು ಘೋಷಿಸುವುದು ಫೆಬ್ರವರಿ ತಿಂಗಳಲ್ಲಿ ಆ ವರೆಗೆ ಘೋಷಿಸುವುದಿಲ್ಲ. ಶೇಮ್‌ಲೆಸ್ ಕಿರುಚಿತ್ರ ಆಸ್ಕರ್‌ಗೆ ಆಯ್ಕೆ ಆಗಿದೆ ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ.