»   » ಅಭಿನೇತ್ರಿ ಶರ್ಮಿಳಾ ಠಾಗೋರ್ ಆಸ್ಪತ್ರೆಗೆ ದಾಖಲು

ಅಭಿನೇತ್ರಿ ಶರ್ಮಿಳಾ ಠಾಗೋರ್ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada
Sharmila Tagore
ಬಾಲಿವುಡ್ ಚಿತ್ರರಂಗದ ಒಂದು ಕಾಲದ ಅಭಿನೇತ್ರಿ ಹಾಗೂ ನಟ ಸೈಫ್ ಆಲಿ ಖಾನ್ ಅವರ ತಾಯಿ ಶರ್ಮಿಳಾ ಠಾಗೋರ್ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫುಡ್ ಪಾಯ್ಸನಿಂಗ್ ಕಾರಣದಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿರುವುದಾಗಿ ತಿಳಿಸಿದ್ದಾರೆ.

ಮನ್ಸೂರ್ ಆಲಿ ಖಾನ್ ಪಟೌಡಿ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಬೇಕಾಗಿತ್ತು. ಆದರೆ ದಿಢೀರ್ ಎಂದು ಅವರ ಆರೋಗ್ಯ ಕೈಕೊಟ್ಟಿದೆ. ಸದ್ಯಕ್ಕೆ ಅವರು ಮುಂಬೈನ ಆಶ್ಲಕ್ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಲೆಟ್ ರಾಜಾ ಚಿತ್ರದಲ್ಲಿ ಸೈಫ್ ಬಿಜಿಯಾಗಿದ್ದ, ಸಾಹೇಬ್ ಬೀಬಿ ಔರ್ ಗ್ಯಾಂಗ್ ಸ್ಟಾರ್ ಚಿತ್ರದಲ್ಲಿ ಸೋಹ ಆಲಿ ಖಾನ್ ಬಿಜಿಯಾಗಿದ್ದರು. ನಾನು ಮಾತ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಫ್ರೀಯಾಗಿದ್ದೆ. ಆದರೆ ಆರೋಗ್ಯ ಕೈಕೊಡ್ತು ಎಂದಿದ್ದಾರೆ 68ರ ಪ್ರಾಯದ ಶರ್ಮಿಳಾ.

ಅಪೂರ್ವ ಸಂಸಾರ್ (1959) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಶರ್ಮಿಳಾ ಅವರು ಹಲವಾರು ಚಿತ್ರಗಳ ಮೂಲಕ ಮನೆಮಾತಾದವರು. ಎಪ್ಪತ್ತು, ಎಂಬತ್ತರ ದಶಕದಲ್ಲಿ ಅವರನ್ನು ಆರಾಧಿಸುವ ದೊಡ್ದ ಅಭಿಮಾನಿ ಬಳಗವೇ ಇತ್ತು.

ಶರ್ಮಿಳಾ ಅವರು ಬಣ್ಣ ಹಚ್ಚಿದ ಕೊನೆಯ ಚಿತ್ರ 'ಬ್ರೇಕ್ ಕೆ ಬಾದ್'. ಈ ಇಳಿವಯಸ್ಸಲ್ಲಿ ಆರೋಗ್ಯದಲ್ಲಿ ಒಂಚೂರು ಏರುಪೇರಾದರು ಚೇತರಿಸಿಕೊಳ್ಳುವುದು ಕಷ್ಟ. ಶರ್ಮಿಳಾ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ. (ಏಜೆನ್ಸೀಸ್)

English summary
Renowned actress and Saif Ali Khan mother Sharmila Tagore admitted to hospital due to food poisoning. "I am suffering from severe bout of food poisoning" said the actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada