For Quick Alerts
  ALLOW NOTIFICATIONS  
  For Daily Alerts

  ನಟಿ ಶರ್ಮಿಳಾ ಟ್ಯಾಗೋರ್ ಬಿಕಿನಿ ಫೋಟೋ ವೈರಲ್; ಜನ ನನ್ನನ್ನು ಮರೆಯಲು ಬಿಡುವುದಿಲ್ಲ ಎಂದ ಸೈಫ್ ತಾಯಿ

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನ ಹಿರಿಯ ನಟಿ ಹಾಗೂ ನಟ ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಬಿಕಿನಿ ಧರಿಸಿದ್ದ ಫೋಟೋ ಈಗ ಮತ್ತೆ ವೈರಲ್ ಆಗಿದೆ. ಬಾಲಿವುಡ್ ನ ಒಂದು ಕಾಲದ ಬಹುಬೇಡಿಕೆಯ ನಟಿ ಶರ್ಮಿಳಾ. 1959ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.

  ನಟಿ ಶರ್ಮಿಳಾ ಆ ಕಾಲದಲ್ಲೇ ಬಿಕಿನಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಾಲಿವುಡ್ ನಲ್ಲಿ ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡ ನಟಿ ಎನ್ನುವ ಖ್ಯಾತಿ ಕೂಡ ಶರ್ಮಿಳಾ ಹೊಂದಿದ್ದಾರೆ. ಇದೀಗ ಶರ್ಮಿಳಾ ಬಿಕಿನಿ ಫೋಟೋ ಮತ್ತೆ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಶರ್ಮಿಳಾ ಜನರಿಗೆ ನನ್ನನ್ನು ಮರೆಯಲೂ ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

  ಅತ್ತೆಯೆದುರೇ ಬಿಕಿನಿ ತೊಟ್ಟು ಧಿಮಾಕು 'ಪ್ರದರ್ಶಿಸಿದ' ಸೊಸೆಅತ್ತೆಯೆದುರೇ ಬಿಕಿನಿ ತೊಟ್ಟು ಧಿಮಾಕು 'ಪ್ರದರ್ಶಿಸಿದ' ಸೊಸೆ

  1966ರಲ್ಲಿ ಮ್ಯಾಗಜೀನ್ ಶೂಟ್ ಗಾಗಿ ಶರ್ಮಿಳಾ ಬಿಕಿನಿಯಲ್ಲಿ ಪೋಸ್ ನೀಡಿದ್ದರು. ಮೊದಲ ಬಾರಿಗೆ ಬಿಕಿನಿ ಶೂಟ್ ಮಾಡಿಸಿದ ಶರ್ಮಿಳಾ ನೋಡಿ ಇಡೀ ಬಾಲಿವುಡ್ ದಂಗ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ಟ್ಯಾಗೋರ್, 'ನಾನು ಮ್ಯಾಗಜೀನ್ ಗಾಗಿ ಬಿಕಿನಿಯಲ್ಲಿ ಫೋಸ್ ನೀಡಿದ್ದೆ, ಜನರು ನನ್ನನ್ನು ಎಂದಿಗೂ ಮರೆಯಲು ಬಿಡುವುದಿಲ್ಲ' ಎಂದಿದ್ದಾರೆ.

  ಮ್ಯಾಗಜೀನ್ ಗಾಗಿ ಬಿಕಿನಿಯಲ್ಲಿ ಪೋಸ್ ನೀಡುವುದು ಶರ್ಮಿಳಾ ಅವರ ಆಲೋಚನೆಯಾಗಿತ್ತು ಅದರಂತೆ ಅವರು ಮಾಡಿಯೇ ಬಿಟ್ಟುರ. ಈ ಬಗ್ಗೆ ಮಾತನಾಡಿರುವ ಶರ್ಮಿಳಾ, 'ಓ..ದೇವರೇ, ಆಗ ನಮ್ಮ ಸಮಾಜ ಎಷ್ಟು ಸಂಪ್ರದಾಯವಾಗತ್ತು. ನಾನು ಯಾಕೆ ಆ ಶೂಟ್ ಮಾಡಿಸಿದೆ ಎಂದು ನನಗೆ ತಿಳಿದಿಲ್ಲ. ನಾನು ಮದುವೆಯಾಗುವುದಕ್ಕೆ ಸ್ವಲ್ಪ ಮುಂಚಿತವಾಗಿ ಆ ಶೂಟ್ ಮಾಡಿಸಿದ್ದು' ಎಂದಿದ್ದಾರೆ.

  'ನನಗೆ ಇನ್ನು ನೆನರಪಿದೆ, ನಾನು ಬಿಕಿನಿ ಧರಿಸಿ ಛಾಯಾಗ್ರಾಹಕರಿಗೆ ತೋರಿದ್ದು. ಅವರು ಕೇಳಿದರು. ನಿಮಗೆ ಖಚಿತವಿದೆಯೇ? ಎಂದು. ಶೂಟ್ ಮಾಡುವಾಗ ಕೆಲವು ಕಡೆ ನನ್ನ ದೇಹವನ್ನು ಮುಚ್ಚಿಕೊಳ್ಳುವಂತೆ ಹೇಳುತ್ತಿದ್ದರು. ನನಗಿಂತ ಹೆಚ್ಚು ಛಾಯಾಗ್ರಾಹಕರು ಚಿಂತಿಸುದ್ದರು.'

  Sharmila Tagore reaction about her first mainstream actor to wear Bikini in 1966
  ಸ್ನೇಹಿತರ ಮಾತು ಕೇಳದೆ ಇದ್ದಿದ್ರೆ ಜಯಶ್ರೀ ಬದುಕಿರ್ತಾ ಇದ್ರು | Oneindia Kannada

  'ಜನರು ಈ ಪೋಟೋಗೆ ಬಲವಾಗಿ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದಾಗ ನಾನು ಆ ಬಗ್ಗೆ ಯೋಚಿಸಲು ಪ್ರಾರಂಭ ಮಾಡಿದೆ. ಜನರು ಯಾಕೆ ಇಷ್ಟ ಪಡುತ್ತಿಲ್ಲ ಎಂದು ನನಗೆ ಗೊಂದಲವಾಯಿತು. ನಾನು ಚೆನ್ನಾಗಿ ಕಾಣುತ್ತೇನೆ ಎಂದು ಭಾವಿಸಿದ್ದೆ. ನಾನು ಚಿಕ್ಕವಳಿದ್ದೆ ಹೊಸದಾಗಿ ಏನೋ ಮಾಡಲು ಹಾತೊರೆಯುತ್ತಿದ್ದೆ' ಎಂದು ಶರ್ಮಿಳಾ ಮೊದಲ ಬಿಕಿನಿ ಶೂಟ್ ಬಗ್ಗೆ ಮಾತನಾಡಿದ್ದಾರೆ.

  English summary
  Veteran Actress Sharmila Tagore reaction about her first mainstream actor to wear Bikini in 1966.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X