For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ಖಾನ್ ತ್ರಯರು: ಸಿನಿಮಾ ಯಾವುದು?

  |

  ಬಾಲಿವುಡ್‌ನ ಖಾನ್ ತ್ರಯರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಇದೇ ಮೊದಲ ಬಾರಿಗೆ ಸಿನಿಮಾ ಒಂದಕ್ಕಾಗಿ ಒಂದಾಗುತ್ತಿದ್ದಾರೆ.

  ಮೂವರೂ ಸಹ ಸೂಪರ್ ಸ್ಟಾರ್ ನಟರು ಹಾಗೂ ಪರಸ್ಪರ ಆತ್ಮೀಯ ಸ್ನೇಹಿತರು ಆದರೆ ಈ ವರೆಗೆ ಅವರು ಮೂವರು ಒಂದೇ ಸಿನಿಮಾದಲ್ಲಿ ನಟಿಸಿಯೇ ಇಲ್ಲ. ಇದೇ ಮೊದಲ ಬಾರಿಗೆ ಮೂವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಮೂವರಿಗೂ ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳಿದ್ದು, ಮೂವರನ್ನೂ ಏಕಕಾಲದಲ್ಲಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮೂವರು ಸಹ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರಾದರೂ ಸಲ್ಮಾನ್ ಹಾಗೂ ಶಾರುಖ್‌ ಗೆ ಅದು ಕೇವಲ ಅತಿಥಿ ಪಾತ್ರವಾಗಿರುತ್ತದೆ.

  ಲಾಲ್‌ಸಿಂಗ್ ಛಡ್ಡಾ ಸಿನಿಮಾದಲ್ಲಿ ಸಲ್ಮಾನ್-ಶಾರುಖ್

  ಲಾಲ್‌ಸಿಂಗ್ ಛಡ್ಡಾ ಸಿನಿಮಾದಲ್ಲಿ ಸಲ್ಮಾನ್-ಶಾರುಖ್

  ಹೌದು, ಅಮೀರ್ ಖಾನ್ ನಟಿಸುತ್ತಿರುವ ಲಾಲ್‌ಸಿಂಗ್ ಛಡ್ಡಾ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದೂ ಇಬ್ಬರೂ ತಮ್ಮ 'ಐಕಾನಿಕ್' ಪಾತ್ರಗಳಾದ ಪ್ರೇಮ್ ಹಾಗೂ ರಾಜ್ ಪಾತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

  ಅಮೀರ್ -ಶಾರುಖ್ ಒಟ್ಟಿಗೆ ನಟಿಸಿಲ್ಲ

  ಅಮೀರ್ -ಶಾರುಖ್ ಒಟ್ಟಿಗೆ ನಟಿಸಿಲ್ಲ

  ಈ ಹಿಂದೆ ಸಲ್ಮಾನ್-ಶಾರುಖ್ ಒಟ್ಟಿಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಅಮೀರ್-ಸಲ್ಮಾನ್ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಈವರೆಗೆ ಶಾರುಖ್ ಹಾಗು ಅಮೀರ್ ಒಟ್ಟಿಗೆ ತೆರೆ ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಅಮೀರ್ ಸಿನಿಮಾದಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದಾರೆ.

  ಶಾರುಖ್-ಸಲ್ಮಾನ್ ಅನ್ನು ಭೇಟಿ ಮಾಡುವ ದೃಶ್ಯವಿದೆ

  ಶಾರುಖ್-ಸಲ್ಮಾನ್ ಅನ್ನು ಭೇಟಿ ಮಾಡುವ ದೃಶ್ಯವಿದೆ

  90 ರ ದಶಕದ ಕತೆ ಹೊಂದಿರುವ ಲಾಲ್‌ಸಿಂಗ್ ಛಡ್ಡಾ ಸಿನಿಮಾದಲ್ಲಿ ನಾಯಕ ಅಮೀರ್ ಖಾನ್, ಡಿಡಿಎಲ್‌ಜೆ ಸಿನಿಮಾದ ಸೆಟ್‌ಗೆ ಹೋಗಿ ಶಾರುಖ್ ಖಾನ್ ಅನ್ನು ಭೇಟಿ ಮಾಡುವ ದೃಶ್ಯ ಇದೆಯಂತೆ. ಜೊತೆಗೆ ಮೈನೆ ಪ್ಯಾರ್ ಕಿಯಾ ಸೆಟ್‌ಗೆ ಹೋಗಿ ಸಲ್ಮಾನ್ ಖಾನ್ ಅನ್ನು ಭೇಟಿ ಮಾಡುತ್ತಾನಂತೆ.

  ಜಾಲಿ ಮೂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ | Filmibeat Knnada
  'ಫಾರೆಸ್ಟ್ ಗಂಪ್' ಸಿನಿಮಾದ ರೀಮೇಕ್

  'ಫಾರೆಸ್ಟ್ ಗಂಪ್' ಸಿನಿಮಾದ ರೀಮೇಕ್

  ಲಾಲ್‌ಸಿಂಗ್ ಛಡ್ಡಾ ಸಿನಿಮಾವು ಇಂಗ್ಲಿಷ್‌ನ 'ಫಾರೆಸ್ಟ್ ಗಂಫ್' ಎಂಬುದ ಸುಂದರ ಸಿನಿಮಾದ ರೀಮೇಕ್. ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ, ಕರೀನಾ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವು 2021 ರ ಅಂತ್ಯದ ವೇಳೆಗೆ ಬಿಡುಗಡೆ ಆಗಲಿದೆಯಂತೆ.

  English summary
  Salman Khan-Sharukh Khan-Aamir Khan acting together in Lal Singh Chadda movie. Salman and Sharukh to be seen as Prem and Raj characters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X