For Quick Alerts
  ALLOW NOTIFICATIONS  
  For Daily Alerts

  ಕ್ರೈಂ ಪ್ರೇಮಕತೆಗೆ ಕೈ ಹಾಕಿದ ಶಾರುಖ್ ಖಾನ್: ಮತ್ತೊಂದು ನಿರ್ಮಾಣ ಸಾಹಸಕ್ಕೆ ಯತ್ನ

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ನಟನೆಯ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಯಿತು. 2018 ರಲ್ಲಿ ನಟಿಸಿದ್ದ ಜೀರೋ ಅವರ ನಟನೆಯ ಕೊನೆಯ ಸಿನಿಮಾ, ಆ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಫ್ಲಾಪ್ ಆಯಿತು.

  ಶಾರುಖ್ ಕಳೆದ ಕೆಲವು ವರ್ಷಗಳಲ್ಲಿ ನಟನಾಗಿ ಅಂಥಹಾ ಯಶಸ್ಸು ಗಳಿಸಿಲ್ಲ, ಆದರೆ ನಿರ್ಮಾಪಕರಾಗಿ ಹಲವು ಹೊಸ ಸಾಹಗಳನ್ನು ಮಾಡುತ್ತಲೇ ಇದ್ದಾರೆ. ಯಶಸ್ಸನ್ನೂ ಕಂಡಿದ್ದಾರೆ.

  ವೈಭವೋಪೇತ ಮನೆ 'ಮನ್ನತ್' ಅನ್ನು ಮಾರುತ್ತಾರೆಯೇ ಶಾರುಖ್ ಖಾನ್?ವೈಭವೋಪೇತ ಮನೆ 'ಮನ್ನತ್' ಅನ್ನು ಮಾರುತ್ತಾರೆಯೇ ಶಾರುಖ್ ಖಾನ್?

  ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್ ಸಂಸ್ಥೆಯಿಂದ ವೆಬ್ ಸೀರೀಸ್, ಟಿವಿ ಧಾರಾವಾಹಿ ಹಾಗೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ಇತ್ತೀಚಿನ ಕೆಲ ವರ್ಷಗಳಲ್ಲಿ ಹೊರತಂತಿದ್ದಾರೆ ಶಾರುಖ್. ಈಗ ಮತ್ತೊಂದು ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆಯಿಂದ ಘೋಷಿಸಿದ್ದಾರೆ ಶಾರುಖ್.

  ಲವ್ ಹಾಸ್ಟೆಲ್ ಸಿನಿಮಾ ಘೋಷಿಸಿದ ಶಾರುಖ್

  ಲವ್ ಹಾಸ್ಟೆಲ್ ಸಿನಿಮಾ ಘೋಷಿಸಿದ ಶಾರುಖ್

  'ಲವ್ ಹಾಸ್ಟೆಲ್' ಎಂಬ ಹೊಸ ಸಿನಿಮಾವನ್ನು ಶಾರುಖ್ ಖಾನ್ ಘೋಷಿಸಿದ್ದಾರೆ. ಸಿನಿಮಾವು ಅಪರಾಧ ಮತ್ತು ಪ್ರೇಮಕತೆಯ ಹದವಾದ ಮಿಶ್ರಣವಾಗಿರುತ್ತದೆಯಂತೆ. ಸಿನಿಮಾದಲ್ಲಿ ರೊಮಾನ್ಸ್‌ ನ ಜೊತೆಗೆ ರಕ್ತಪಾತವೂ ಇರುತ್ತದೆ ಎಂದಿದೆ ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್.

  ಪ್ರೇಮಿಗಳು ಹಾಗೂ ಕೊಲೆಗಾರನ ನಡುವಿನ ಕತೆ

  ಪ್ರೇಮಿಗಳು ಹಾಗೂ ಕೊಲೆಗಾರನ ನಡುವಿನ ಕತೆ

  ಇಬ್ಬರು ಯುವ ಪ್ರೇಮಿಗಳು ತಮ್ಮ ದೂರ ಪ್ರಯಾಣದ ನಡುವೆ ಅಪಾಯಕಾರಿ ಕೊಲೆಪಾತಕನೊಬ್ಬನನ್ನು ಎದುರುಗೊಳ್ಳುತ್ತಾರೆ. ಪ್ರೇಮಿಗಳ ಜರ್ನಿ ಉದ್ದಕ್ಕೂ ಆತ ಪ್ರೇಮಿಗಳನ್ನು ಕೊಲ್ಲಲು ಯತ್ನಿಸುತ್ತಾನೆ. ಪ್ರೇಮಿಗಳು ಆತನಿಂದ ಹೇಗೆ ಪಾರಾಗುತ್ತಾರೆ ಎಂಬುದೇ ಸಿನಿಮಾದ ಒನ್‌ಲೈನರ್ ಕತೆ.

  DDLJ ಸಿನಿಮಾದ ನಾಯಕ ರಾಜ್ ಮಹಿಳಾ ಪೀಡಕನೇ?DDLJ ಸಿನಿಮಾದ ನಾಯಕ ರಾಜ್ ಮಹಿಳಾ ಪೀಡಕನೇ?

  ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್

  ವಿಲನ್ ಪಾತ್ರದಲ್ಲಿ ಬಾಬಿ ಡಿಯೋಲ್

  ಲವ್ ಹಾಸ್ಟೆಲ್ ಸಿನಿಮಾವನ್ನು ಶಂಕರ್ ರೆಹಮಾನ್ ನಿರ್ದೇಶಿಸಲಿದ್ದಾರೆ. ಯುವ ಪ್ರೇಮಿಗಳಾಗಿ ಸಾನ್ಯಾ ಮಲ್ಹೋತ್ರಾ, ವಿಕ್ರಾಂತ್ ಮೆಸ್ಸಿ ನಟಿಸಲಿದ್ದಾರೆ. ಬಾಬಿ ಡಿಯೋಲ್ ಕೊಲೆಪಾತಕನ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನುಳಿದ ಪಾತ್ರವರ್ಗ ಇನ್ನಷ್ಟೆ ಅಂತಿಮವಾಗಬೇಕಿದೆ.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada
  ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಶಾರುಖ್ ಬ್ಯುಸಿ

  ಶಾರುಖ್ ಖಾನ್, ತಮಿಳಿನ ನಿರ್ದೇಶಕ ಅಟ್ಟಿಲಿಯ ಸಿನಿಮಾದಲ್ಲಿ ನಟಿಸಲಿದ್ದಾರೆ. ಆಶುತೋಶ್ ಗೊವರಿಕರ್ ನಿರ್ದೇಶನದ ಆಪರೇಷನ್ ಕುಕರಿ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್, ಮನಿಶ್ ಶರ್ಮಾ ನಿರ್ದೇಶನದ ಧೂಮ್ 4 ಸಿನಿಮಾದಲ್ಲಿ ನಟಿಸಲಿದ್ದಾರೆ.

  ಶಾರುಖ್ ಖಾನ್ ಮಗಳ ಕಪ್ಪು ತ್ವಚೆ ಹಾಗೂ ಗಟ್ಟಿ ಗುಂಡಿಗೆಶಾರುಖ್ ಖಾನ್ ಮಗಳ ಕಪ್ಪು ತ್ವಚೆ ಹಾಗೂ ಗಟ್ಟಿ ಗುಂಡಿಗೆ

  English summary
  Actor Sharukh Khan to produce new movie Love Hostel. Movie staring Sanya Malhotra, Vikrant Massey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X