For Quick Alerts
  ALLOW NOTIFICATIONS  
  For Daily Alerts

  ಸಿದ್ಧಾರ್ಥ್ ಶುಕ್ಲಾ ನಿಧನ: ಗೆಳತಿ ಶೆಹನಾಜ್ ಗಿಲ್ ಪರಿಸ್ಥಿತಿ ಹೇಗಿದೆ?

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಿದ್ಧಾರ್ಥ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 40ರ ಪ್ರಾಯದ ಸಿದ್ಧಾರ್ಥ್ ಇಂದು ಬೆಳಗ್ಗೆ (ಸೆಪ್ಟಂಬರ್ 02) ಸಾವಿನಪ್ಪಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ರಾತ್ರಿ ಮಲಗಿದ್ದ ಸಿದ್ಧಾರ್ಥ್ ಬೆಳಗ್ಗೆ ಅಷ್ಟೊತ್ತಿಗೆ ಶವವಾಗಿದ್ದರು. ಮುಂಬೈನ ಕೂಪರ್ ಆಸ್ಪತ್ರೆಯ ವೈದ್ಯರು ಹೃದಯಾಘಾತದಿಂದ ನಿಧನಹೊಂದಿದ್ದಾರೆ ಎಂದ ಹೇಳಿದ್ದಾರೆ.

  ಸಿದ್ಧಾರ್ಥ್ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಗೆಳತಿ ಶೆಹನಾಜ್ ಗಿಲ್ ಕುಸಿದು ಹೋಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚಿತ್ರೀಕರಣಕ್ಕೆ ತೆರಳಿದ್ದ ಶೆಹನಾಜ್ ತಕ್ಷಣ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿ ವಾಪಸ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಶೆಹಜಾನ್ ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಅವರಿಗೆ ಇಡೀ ಕುಟುಂಬ ಧೈರ್ಯ ತುಂಬುತ್ತಿದೆ ಎಂದು ಶೆಹನಾಜ್ ತಂದೆ ಮಾಹಿತಿ ನೀಡಿದ್ದಾರೆ.

  ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಶೆಹನಾಜ್ ತಂದೆ, "ನಾನು ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಆಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶೆಹನಾಜ್​ ಜೊತೆ ಮಾತನಾಡಿದ್ದೇನೆ. ಆಕೆಯ ಪರಿಸ್ಥಿತಿ ಚೆನ್ನಾಗಿಲ್ಲ. ಅವಳ ಜೊತೆ ಇರಲು ನನ್ನ ಮಗ ಈಗ ಮುಂಬೈಗೆ ತೆರಳುತ್ತಿದ್ದಾನೆ. ನಂತರ ನಾನು ಕೂಡ ಅಲ್ಲಿಗೆ ಹೋಗುತ್ತೇನೆ' ಎಂದು ಶೆಹನಾಜ್​ ತಂದೆ ಹೇಳಿದ್ದಾರೆ.

  ಗೆಳೆಯನ ಸಾವಿನ ಬಗ್ಗೆ ಶೆಹನಾಜ್ ಇದುವರೆಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿದ್ಧಾರ್ಥ್ ಮತ್ತು ಶೆಹನಾಜ್ ಸ್ನೇಹ ಪ್ರಾರಂಭವಾಗಿದ್ದು ಬಿಗ್ ಬಾಸ್ 13 ಶೋನಿಂದ. ಬಿಗ್ ಬಾಸ್ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸ್ನೇಹಿತರರಾಗಿದ್ದರು, ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಭಿಮಾನಿಗಳು ಈ ಜೋಡಿಯನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು.

  ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕವೂ ಇಬ್ಬರ ಸ್ನೇಹ ಸಂಬಂಧ ಅಷ್ಟೆ ಗಟ್ಟಿಯಾಗಿತ್ತು. ಇಬ್ಬರೂ ಸದಾ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಿಯಾಲಿಟಿ ಶೋಗಳಲ್ಲಿ ಇಬ್ಬರೂ ಒಟ್ಟಿಗೆ ಡಾನ್ಸ್ ಮಾಡುತ್ತಿದ್ದರು. ಇತ್ತೀಚಿಗೆ ಪ್ರಾರಂಭವಾದ ಬಿಗ್ ಬಾಸ್ ಒಟಿಟಿ ಪ್ರಾರಂಭದಲ್ಲೂ ಸಹ ಸಿದ್ಧಾರ್ಥ್ ಶೆಹನಾಜ್ ಒಟ್ಟಿಗೆ ಡಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಗೆಳೆಯ ಸಿದ್ಧಾರ್ಥ್ ನನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ.

  ಮಾಡೆಲಿಂಗ್ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸಿದ್ಧಾರ್ಥ್ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟರು. ಹಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಸಿದ್ಧಾರ್ಥ್ 2019ರಲ್ಲಿ ಪ್ರಸಾರವಾದ ಬಿಗ್ ಬಾಸ್ 13 ರಲ್ಲಿ ಭಾಗಿಯಾಗಿದ್ದರು. ಅದ್ಭುತವಾಗಿ ಆಟವಾಡುವ ಮೂಲಕ ಸಿದ್ಧಾರ್ಥ್ ಪ್ರೇಕ್ಷಕರ ಮನಗೆದ್ದಿದ್ದರು. ಬಿಗ್ ಬಾಸ್ 13 ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ಮತ್ತಷ್ಟು ಖ್ಯಾತಿ ಪಡೆದಿದ್ದರು. ಇನ್ನು ಬಿಗ್ ಬಾಸ್ 14ನಲ್ಲೂ ಸಿದ್ಧಾರ್ಥ್ ಗೆಸ್ಟ್ ಆಗಿ ಭಾಗಿಯಾಗಿದ್ದರು.

  ಇನ್ನು ಸಿದ್ಧಾರ್ಥ 'ಬಾಲಿಕಾ ವಧು', 'ದಿಲ್ ಸೆ ದಿಲ್ ತಕ್' ಧಾರಾವಾಹಿಗಳಲ್ಲಿ ಸಿದ್ಧಾರ್ಥ್ ಶುಕ್ಲಾ ನಟಿಸುತ್ತಿದ್ದು, ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು. 'ಜಲಕಾ ದಿಕ್ ಲಾಜಾ 6', 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ' ಮತ್ತು 'ಬಿಗ್ ಬಾಸ್ 13' ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

  English summary
  Sidharth Shukla death: shehnaaz gill father says She is not Fine after Sidharth Shukla's shocking death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X