For Quick Alerts
  ALLOW NOTIFICATIONS  
  For Daily Alerts

  'ಕಿಸ್ ಮಾಡಲು ಯತ್ನ, ಶಿಲ್ಪಾ ಜೊತೆ ಸಂಬಂಧ ಸರಿಯಿಲ್ಲ': ಶೆರ್ಲಿನ್ ಚೋಪ್ರಾ ಬಾಂಬ್

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಜುಲೈ 27 ರಂದು ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು. ರಾಜ್ ಕುಂದ್ರಾ ಕೇಸ್‌ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಸೂಚಿಸಿದ್ದರು.

  ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸಂಬಂಧ ಹಳಸಿದೆ

  ಪೊಲೀಸರ ಸಮನ್ಸ್‌ನಿಂದ ಬಂಧನದ ಭೀತಿಗೊಳಗಾದ ನಟಿ ಶೆರ್ಲಿನ್ ಚೋಪ್ರಾ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡರು. ಇದೀಗ, ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, 'ರಾಜ್ ಕುಂದ್ರಾ ನನ್ನನ್ನು ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು, ನನಗೆ ಲೈಂಗಿಕ ಕಿರುಕುಳ ಕೊಡಲು ಪ್ರಯತ್ನಿಸಿದರು' ಎಂದು ದೂರಿದ್ದಾರೆ. ಶೆರ್ಲಿನ್ ಚೋಪ್ರಾ ಆಘಾತಕಾರಿ ಆರೋಪ ಈಗ ರಾಜ್ ಕುಂದ್ರಾ ಪಾಲಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಮುಂದೆ ಓದಿ...

  ಏಪ್ರಿಲ್ ತಿಂಗಳಲ್ಲೇ ದೂರು

  ಏಪ್ರಿಲ್ ತಿಂಗಳಲ್ಲೇ ದೂರು

  ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ ಶೆರ್ಲಿನ್ ಚೋಪ್ರಾ ಕಳೆದ ಏಪ್ರಿಲ್ ತಿಂಗಳಲ್ಲೇ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಈ ದೂರಿನಲ್ಲಿ ರಾಜ್ ಕುಂದ್ರಾ ನನ್ನ ಮೇಲೆ ಲೈಂಗಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 2019ರಲ್ಲಿ ಬಿಸಿನೆಸ್ ಆಪ್ ಸಂಬಂಧ ನನ್ನನ್ನು ಮೀಟಿಂಗ್‌ಗೆ ಕರೆದಿದ್ದ ರಾಜ್ ಕುಂದ್ರಾ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರ ಬಹಿರಂಗವಾಗಿದೆ.

  ರಾಜ್ ಕುಂದ್ರಾ ಕೇಸ್: ಪೂನಂ ಪಾಂಡೆ, ಶೆರ್ಲಿನ್‌ಗೆ ನಿರೀಕ್ಷಣಾ ಜಾಮೀನುರಾಜ್ ಕುಂದ್ರಾ ಕೇಸ್: ಪೂನಂ ಪಾಂಡೆ, ಶೆರ್ಲಿನ್‌ಗೆ ನಿರೀಕ್ಷಣಾ ಜಾಮೀನು

  ಬಲವಂತವಾಗಿ ಕಿಸ್ ಮಾಡಲು ಯತ್ನ

  ಬಲವಂತವಾಗಿ ಕಿಸ್ ಮಾಡಲು ಯತ್ನ

  ''ಮೀಟಿಂಗ್ ಎಂದು ಕರೆದು ನನ್ನನ್ನ ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದರು. ಇದಕ್ಕೆ ನಾನು ವಿರೋಧಿಸಿದೆ. ಆಗ ನಮ್ಮಿಬ್ಬರ ನಡುವೆ ಜಗಳ ಶುರುವಾಯಿತು. ನನ್ನನ್ನು ಎಳೆದಾಡಿದರು. ಭಯದಿಂದ ನಾನು ಕೇಳಿಕೊಂಡೆ. ಆದರೂ ರಾಜ್ ಕುಂದ್ರಾ ಸುಮ್ಮನಾಗಲಿಲ್ಲ. ಅವರಿಂದ ತಪ್ಪಿಸಿಕೊಳ್ಳಲು ನಾನು ಬಾತ್‌ರೂಂನಲ್ಲಿ ಅಡಗಿ ಕುಳಿತಿದ್ದೆ'' ಎಂದು ಹೇಳಿರುವುದಾಗಿ ವರದಿಯಾಗಿದೆ.

  ಶಿಲ್ಪಾ ಶೆಟ್ಟಿ ಜೊತೆ ದಾಂಪತ್ಯ ಸರಿಯಿಲ್ಲ

  ಶಿಲ್ಪಾ ಶೆಟ್ಟಿ ಜೊತೆ ದಾಂಪತ್ಯ ಸರಿಯಿಲ್ಲ

  ಇನ್ನು ಶಿಲ್ಪಾ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟಂತೆಯೂ ಶೆರ್ಲಿನ್ ಚೋಪ್ರಾ ಆಘಾತಕಾರಿ ವಿಷಯ ಹೊರಹಾಕಿದ್ದಾರೆ. ''ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ, ನಾನು ಸದಾ ಒತ್ತಡದಲ್ಲಿದ್ದೇನೆ'' ಎಂದು ಶೆರ್ಲಿನ್ ಬಳಿ ರಾಜ್ ಕುಂದ್ರಾ ಹೇಳಿಕೊಂಡಿದ್ದರು ಎಂಬ ಸುದ್ದಿ ಬಹಿರಂಗಪಡಿಸಿದ್ದಾರೆ.

  ಸೆಪ್ಟೆಂಬರ್ 20ರವರೆಗೂ ಕ್ರಮ ಇಲ್ಲ

  ಸೆಪ್ಟೆಂಬರ್ 20ರವರೆಗೂ ಕ್ರಮ ಇಲ್ಲ

  ರಾಜ್ ಕುಂದ್ರಾ ಕೇಸ್ ಸಂಬಂಧಿಸಿದಂತೆ ಮುಂಬೈ ಪೊಲೀಸರು ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್ ನೀಡಿದ್ದರು. ಇದರ ಬೆನ್ನಲ್ಲೆ ಸೆಷನ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 20 ರವರೆಗೆ ಪೂನಂ ಮತ್ತು ಶೆರ್ಲಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ (ಜುಲೈ 27) ಆದೇಶಿಸಿದೆ.

  English summary
  Raj Kundra Porngraphy case: Sherlyn Chopra accuses Raj Kundra of Sexual Assault, started kissing her despite her resistance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X