Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಶ್ಲೀಲ ವಿಡಿಯೋ ಪ್ರಕರಣ: ಬಂಧನ ಭೀತಿಯಲ್ಲಿ ಶೆರ್ಲಿನ್ ಚೋಪ್ರಾ
ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ ಬಂಧನ ಭೀತಿ ಎದುರಿಸುತ್ತಿದ್ದು, ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಶೆರ್ಲಿನ್ ಚೋಪ್ರಾ ಅಶ್ಲೀಲ ವಿಡಿಯೋ ಒಂದರಲ್ಲಿ ನಟಿಸಿ ಆ ವಿಡಿಯೋವನ್ನು ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಖಾಸಗಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಶೆರ್ಲಿನ್ ಚೋಪ್ರಾ ಬಂಧನವಾಗುವ ಸಾಧ್ಯತೆ ಇದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ ಬಾಂಬೆ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ಅಲ್ಲಿ ಶೆರ್ಲಿನ್ ಚೋಪ್ರಾರ ಅರ್ಜಿಯನ್ನು ತಳ್ಳಿಹಾಕಲಾಗಿದೆ. ಹಾಗಾಗಿ ಈಗ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ ಶೆರ್ಲಿನ್ ಚೋಪ್ರಾ.
'ಆ ಸೆಕ್ಸ್ ವಿಡಿಯೋವನ್ನು ತಾವು ಅಂತರಾಷ್ಟ್ರೀಯ ವೆಬ್‌ಸೈಟ್ ಒಂದಕ್ಕಾಗಿ ಚಿತ್ರೀಕರಿಸಿದ್ದು, ಆ ವಿಡಿಯೋ ಹೇಗೋ ಲೀಕ್ ಆಗಿ ಹಲವು ವೆಬ್‌ಸೈಟ್‌ಗಳನ್ನು ಅದನ್ನು ಬಳಸಿಕೊಂಡಿವೆ. ಈ ಪ್ರಕರಣದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆ ಆಗಿದ್ದು, ನಾನು ಸಂತ್ರಸ್ತೆ ಆಗಿದ್ದೀನಿ' ಎಂದು ಶೆರ್ಲಿನ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ನಾನು ಸಂತ್ರಸ್ತೆ: ಶೆರ್ಲಿನ್ ಚೋಪ್ರಾ
'ಯಾವ ಮಹಿಳೆ ತಾನೆ ತನ್ನದೇ ಅಶ್ಲೀಲ ವಿಡಿಯೋವನ್ನು ಉಚಿತವಾಗಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿ ಎಲ್ಲರೂ ನೋಡುವಂತೆ ಮಾಡುತ್ತಾಳೆ' ಎಂದು ಸಹ ಶೆರ್ಲಿನ್ ಚೋಪ್ರಾ ತನ್ನ ಅರ್ಜಿಯಲ್ಲಿ ಹೇಳಿದ್ದಾಳೆ. ಶೆರ್ಲಿನ್ ರ ಅರ್ಜಿಯ ವಿಚಾರಣೆ ಫೆಬ್ರವರಿ 22 ರಂದು ನಡೆಯಲಿದೆ.

ಸೋಮವಾರದ ವರೆಗೆ ಬಂಧಿಸಲ್ಲ ಎಂದಿರುವ ಪೊಲೀಸರು
ಕೇಂದ್ರ ಸರ್ಕಾರದ ಮಾಜಿ ಅಧಿಕಾರಿ ಮಧುಕರ್ ಖೇಣಿ ಎಂಬುವರು ಶೆರ್ಲಿನ್ ಚೋಪ್ರಾ ವಿರುದ್ಧ ಸೈಬರ್ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಮುಂಬೈ ಪೊಲೀಸರು ಹೇಳಿರುವಂತೆ, ಪ್ರಕರಣದ ತನಿಖೆ ನಡೆಸುತ್ತಿದ್ದು, ಸೋಮವಾರದ ವರೆಗೆ ನಟಿಯನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದಾರೆ.

ಪೂನಂ ಪಾಂಡೆಯನ್ನು ಬಂಧಿಸಿದ್ದ ಪೊಲೀಸರು
ಕೆಲವು ತಿಂಗಳ ಹಿಂದಷ್ಟೆ ಮತ್ತೊಬ್ಬ ಗ್ಲಾಮರಸ್ ನಟಿ ಪೂನಂ ಪಾಂಡೆ, ಗೋವಾದ ಬೀಚ್ ಒಂದರ ಬಳಿ ಅಶ್ಲೀಲ ವಿಡಿಯೋ ಚಿತ್ರೀಕರಣದಲ್ಲಿ ಭಾಗವಹಿಸಿದ್ದಕ್ಕೆ ಆಕೆಯನ್ನು ಗೋವಾ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಬೆತ್ತಲೆಯಾಗಿ ಫೋಸ್ ನೀಡಿದ್ದ ಶೆರ್ಲಿನ್
ಈ ರೀತಿಯ ವಿವಾದಗಳು ಶೆರ್ಲಿನ್ ಚೋಪ್ರಾಗೆ ಹೊಸವಲ್ಲ. 2012 ರಲ್ಲಿಯೇ ಪ್ಲೇಬಾಯ್ ಮ್ಯಾಗಜೀನ್ ನ ಕವರ್ ಫೋಟೊಗೆ ಬೆತ್ತಲೆಯಾಗಿ ಫೋಸ್ ನೀಡಿದ್ದರು ಶೆರ್ಲಿನ್ ಚೋಪ್ರಾ. ಅದಾದ ಬಳಿಕ ಇಂಗ್ಲಿಷ್ ಸಿನಿಮಾ 'ಕಾಮಸೂತ್ರ 3ಡಿ' ನಲ್ಲಿಯೂ ಬೆತ್ತಲೆಯಾಗಿ ನಟಿಸಿ ಸುದ್ದಿಯಾಗಿದ್ದರು. ವಿದೇಶಿ ಪಾರ್ನ್ ವೆಬ್‌ಸೈಟ್ ಕೆಲವಕ್ಕೆ ತಮ್ಮ ವಿಡಿಯೋಗಳನ್ನು ಕಳಿಸುತ್ತಾರೆ ಶೆರ್ಲಿನ್ ಚೋಪ್ರಾ.