For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಾ ಕೇಸ್: 8 ಗಂಟೆ ವಿಚಾರಣೆ, ಪೊಲೀಸರ ಮುಂದೆ ಶೆರ್ಲಿನ್ ಬಿಚ್ಚಿಟ್ಟ ವಿಷಯಗಳೇನು?

  |

  ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಶೆರ್ಲಿನ್ ಚೋಪ್ರಾಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು. ರಾಜ್ ಕುಂದ್ರಾ ಬಂಧನದ ಬಳಿಕ ಘಟನೆ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆ ಕೇಸ್‌ಗೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ಶೆರ್ಲಿನ್‌ಗೆ ನೋಟಿಸ್ ನೀಡಲಾಗಿತ್ತು.

  ಮುಂಬೈ ಪೊಲೀಸರ ಸಮನ್ಸ್ ಹಿನ್ನೆಲೆ ಶನಿವಾರ ಅಪರಾಧ ವಿಭಾಗದ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದ ನಟಿಯ ಬಳಿ ಪೊಲೀಸರು ಸಾಕಷ್ಟು ವಿಚಾರಗಳನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಮಧ್ಯಾಹ್ನ 11.30ಕ್ಕೆ ಮುಂಬೈ ಪೊಲೀಸರ ಮುಂದೆ ಹಾಜರಾದ ನಟಿ ರಾತ್ರಿ 8 ಗಂಟೆಗೆ ಕಚೇರಿಯಿಂದ ಹೊರಬಂದಿದ್ದಾರೆ. ಇದಕ್ಕೂ ಮುಂಚೆ ನಟಿ ಶೆರ್ಲಿನ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪೊಲೀಸರು ಸಮನ್ಸ್ ನೀಡಿದ್ದು, ಬಂಧಿಸುವ ಭೀತಿಯಿಂದ ಜಾಮೀನು ಮೊರೆ ಹೋಗಿದ್ದರು. ಆದರೆ ಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿರಲಿಲ್ಲ.

  ರಾಜ್ ಕುಂದ್ರ ಬ್ಲೂ ಫಿಲ್ಮ್ ದಂಧೆ ಪ್ರಕರಣ: ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್ರಾಜ್ ಕುಂದ್ರ ಬ್ಲೂ ಫಿಲ್ಮ್ ದಂಧೆ ಪ್ರಕರಣ: ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್

  8 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ರಾಜ್ ಕುಂದ್ರಾ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾರೆ. ಕುಂದ್ರಾ ಸಂಸ್ಥೆ ಜೊತೆ ಮಾಡಿಕೊಂಡಿದ್ದ ಒಪ್ಪಂದದ ಬಗ್ಗೆ ವಿವರಣೆ ಕೇಳಿದ್ದಾರೆ. ಮುಂದೆ ಓದಿ...

  ಎಷ್ಟು ವಿಡಿಯೋಗಳಲ್ಲಿ ಪಾಲ್ಗೊಂಡಿದ್ರಿ

  ಎಷ್ಟು ವಿಡಿಯೋಗಳಲ್ಲಿ ಪಾಲ್ಗೊಂಡಿದ್ರಿ

  ''ರಾಜ್ ಕುಂದ್ರಾ ಅವರ ಆರ್ಮ್‌ಪ್ರೈಮ್ ಸಂಸ್ಥೆ ಜೊತೆಗಿನ ಒಪ್ಪಂದ ಹೇಗಾಯಿತು ಮತ್ತು ಆ ಒಪ್ಪಂದಲ್ಲಿ ಯಾವೆಲ್ಲ ಅಂಶಗಳಿವೆ ಎಂದು ಶೆರ್ಲಿನ್ ಚೋಪ್ರಾಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಅವರ ಜೊತೆ ನಿಮ್ಮ ಸಂಬಂಧವೇನು? ಅವರ ಸಂಸ್ಥೆಯಲ್ಲಿ ಎಷ್ಟು ವಿಡಿಯೋಗಳಲ್ಲಿ ನೀವು ಪಾಲ್ಗೊಂಡಿದ್ರಿ'' ಎಂದು ವಿಚಾರಣೆಯಲ್ಲಿ ಕೇಳಿದ್ರು ಎಂದು ಶೆರ್ಲಿನ್ ಇ-ಟೈಮ್ಸ್‌ಗೆ ಹೇಳಿದ್ದಾರೆ. ಅವರು ಕೇಳಿದ ಎಲ್ಲದಕ್ಕೂ ಉತ್ತರ ಕೊಟ್ಟಿದ್ದೇನೆ ಎಂದು ನಟಿ ಶೆರ್ಲಿನ್ ತಿಳಿಸಿದ್ದಾರೆ.

  ಕುಂದ್ರಾ ಜೊತೆ ನಿಮ್ಮ ಸಂಬಂಧ ಹೇಗಿದೆ?

  ಕುಂದ್ರಾ ಜೊತೆ ನಿಮ್ಮ ಸಂಬಂಧ ಹೇಗಿದೆ?

  ರಾಜ್ ಕುಂದ್ರಾ ಜೊತೆ ನಿಮ್ಮ ವೈಯಕ್ತಿಕ ಸಂಬಂಧ ಹೇಗಿದೆ ಎಂದು ಪೊಲೀಸರು ಪ್ರಶ್ನಿಸಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ''ರಾಜ್ ಕುಂದ್ರಾ ಜೊತೆ ನಿಮ್ಮ ಸಂಬಂಧ ಹೇಗೆ? ಅವರ ಒಡೆತನಲ್ಲಿರುವ ಬೇರೆ ಸಂಸ್ಥೆಗಳ ಬಗ್ಗೆ ನಿಮಗೆ ಮಾಹಿತಿ ಇದ್ಯಾ? ಎಂದು ಪ್ರಶ್ನಿಸಿದರು. ಇಡೀ ದಿನ ನನ್ನಿಂದ ಹಲವು ವಿಷಯಗಳಿಗೆ ಮಾಹಿತಿ ಪಡೆದರು. ಮತ್ತೇ ಏನಾದರೂ ಕೇಳುವುದು ಇದ್ಯಾ ಎಂದು ನಾನೇ ಅಧಿಕಾರಿಗಳನ್ನು ಕೇಳಿದೆ. ಏಕಂದ್ರೆ, ಈ ಕೇಸ್‌ನಲ್ಲಿ ಅನ್ಯಾಯವಾಗಿರುವ ಮಹಿಳೆಯರಿಗೆ ನ್ಯಾಯ ಸಿಗಬೇಕಿದೆ'' ಎಂದು ಶೆರ್ಲಿನ್ ತಿಳಿಸಿರುವುದಾಗಿ ವರದಿಯಾಗಿದೆ.

  'ಕಿಸ್ ಮಾಡಲು ಯತ್ನ, ಶಿಲ್ಪಾ ಜೊತೆ ಸಂಬಂಧ ಸರಿಯಿಲ್ಲ': ಶೆರ್ಲಿನ್ ಚೋಪ್ರಾ ಬಾಂಬ್'ಕಿಸ್ ಮಾಡಲು ಯತ್ನ, ಶಿಲ್ಪಾ ಜೊತೆ ಸಂಬಂಧ ಸರಿಯಿಲ್ಲ': ಶೆರ್ಲಿನ್ ಚೋಪ್ರಾ ಬಾಂಬ್

  ರಾಖಿ ಸಾವಂತ್‌ಗೆ ತಿರುಗೇಟು

  ರಾಖಿ ಸಾವಂತ್‌ಗೆ ತಿರುಗೇಟು

  ''ಇನ್ನು ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಿಚಾರದಲ್ಲಿ ಸತ್ಯವನ್ನು ಪರಿಶೀಲಿಸದೇ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ಕೊಡುವುದ ಸರಿಯಲ್ಲ. ನಿಜ ತಿಳಿದು ಮಾತನಾಡಲಿ'' ಎಂದು ನಟಿ ರಾಖಿ ಸಾವಂತ್‌ಗೆ ಶೆರ್ಲಿನ್ ತಿರುಗೇಟು ಕೊಟ್ಟಿದ್ದಾರೆ. ''ಈ ಕೇಸ್‌ ಅಶ್ಲೀಲ ಜಗತ್ತಿನಲ್ಲಿ ನಡೆಯುತ್ತಿರುವ ಕೃತ್ಯಗಳನ್ನು ಭೇದಿಸುವ ನಿಟ್ಟಿನಲ್ಲಿ ಸಾಗಬೇಕಿದೆ. ಇದ್ಯಾವುದು ವಿಡಿಯೋ ಗೇಮ್ ಅಲ್ಲ'' ಎಂದಿದ್ದಾರೆ ನಟಿ ಶೆರ್ಲಿನ್.

  ಮಾಹಿತಿ ಇದ್ದರೆ ತಿಳಿಸಿ

  ಮಾಹಿತಿ ಇದ್ದರೆ ತಿಳಿಸಿ

  ''ಇದು ಯಾವುದೇ ವ್ಯಕ್ತಿಯ ವಿರುದ್ಧದ ಸೇಡು ತೀರಿಸಿಕೊಳ್ಳುವ ವಿಷಯವಲ್ಲ ಎಂದು ತನಿಖಾ ಅಧಿಕಾರಿಗಳು ನನಗೆ ಹೇಳಿದರು. ಅಶ್ಲೀಲ ದಂಧೆ ಭೇದಿಸಲು ಈ ಪ್ರಯತ್ನ ನಡೆಯುತ್ತಿದೆ. ಹಾಗಾಗಿ, ಈ ಕೇಸ್‌ ಬಗ್ಗೆ ಯಾರಿಗಾದರೂ ಏನಾದರೂ ತಿಳಿದಿದ್ದರೆ ದಯವಿಟ್ಟು ಮುಂದೆ ಬಂದು ಪೊಲೀಸರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಈ ಮಾಧ್ಯಮದ ಮೂಲಕ ನಾನು ವಿನಂತಿಸುತ್ತಿದ್ದೇನೆ" ಎಂದು ಶೆರ್ಲಿನ್ ಹೇಳಿದ್ದಾರೆ.

  ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ

  ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ

  ''ಈ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಎಂದು ದಿನಾಂಕ-ಸಮಯದ ಸಮೇತ ನಾನು ಪೊಲೀಸರೊಂದಿಗೆ ಮಾಹಿತಿ ನೀಡಿದ್ದೇನೆ. ವಾಟ್ಸಾಪ್ ಚಾಟ್ ಸಹ ಒಪ್ಪಿಸಿದ್ದೇನೆ. ಈ ಹಿಂದೆ ಮಹಾರಾಷ್ಟ್ರ ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ್ದ ಎಲ್ಲಾ ಮಾಹಿತಿ, ದಾಖಲೆ ಹಾಗು ಹೇಳಿಕೆಗಳನ್ನು ಈಗ ಮುಂಬೈ ಪೊಲೀಸರಿಗೂ ನೀಡಿದ್ದೇನೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕುಂದ್ರಾ ವಿರುದ್ಧ ಏಕೆ ದೂರು ನೀಡಿದ್ದೆ ಎಂದು ಸಹ ವಿವರಿಸಿದ್ದೇನೆ'' ಎಂದು ನಟಿ ಶೆರ್ಲಿನ್ ತಿಳಿಸಿದ್ದಾರೆ.

  ನ್ಯಾಯಾಂಗ ಬಂಧನದಲ್ಲಿ ಕುಂದ್ರಾ

  ನ್ಯಾಯಾಂಗ ಬಂಧನದಲ್ಲಿ ಕುಂದ್ರಾ

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಜುಲೈ 19 ರಂದು ಬಂಧನವಾಗಿದ್ದರು. ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಾಯಿತು. ನಂತರ ಜುಲೈ 27 ರಂದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನಿಡಲಾಗಿದೆ. ಆಗಸ್ಟ್ 9 ರಂದು ಕುಂದ್ರಾ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದ್ದು, ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಮತ್ತೊಂದಡೆ ಕುಂದ್ರಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈ ಕೋರ್ಟ್ ನಿರಾಕರಿಸಿದೆ.

  English summary
  Pornography case: Actress Sherlyn Chopra questioned 8 hours by Mumbai Police crime branch in RajKundra case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X