For Quick Alerts
  ALLOW NOTIFICATIONS  
  For Daily Alerts

  ರಾಜ್‌ ಕುಂದ್ರಾ ಅರೆಸ್ಟ್: ಪೊಲೀಸರಿಗೆ ಮೊದಲು ಹೇಳಿಕೆ ಕೊಟ್ಟಿದ್ದೆ ನಾನು- ಶೆರ್ಲಿನ್ ಚೋಪ್ರಾ

  |

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನದ ನಂತರ ಈ ಪ್ರಕರಣ ಹಲವು ಆಯಾಮಗಳು ಪಡೆದುಕೊಳ್ಳುತ್ತಿದೆ. ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ, ಸಾಗರಿಕಾ ಸುಮನ್ ಅಂತಹ ನಟಿಯರು ಕುಂದ್ರಾ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಿದ್ದಾರೆ.

  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  ಇದೀಗ, ಶೆರ್ಲಿನ್ ಚೋಪ್ರಾ ಈ ಪ್ರಕರಣದ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸುದ್ದಿಯಾಗಿದ್ದಾರೆ. ಈ ಕೇಸ್‌ ಸಂಬಂಧ ರಾಜ್ ಕುಂದ್ರಾರನ್ನು ಜುಲೈ 19 ರಂದು ಮುಂಬೈ ಪೊಲಿಸರು ಅರೆಸ್ಟ್ ಮಾಡಿದ್ದರು. ಜುಲೈ 23ರವರೆಗೂ ಪೊಲೀಸರ ವಶಕ್ಕೆ ನ್ಯಾಯಾಲಯ ನೀಡಿತ್ತು. ಈ ಪ್ರಕರಣದಲ್ಲಿ ಶೆರ್ಲಿನ್ ಚೋಪ್ರಾ ಹೆಸರು ಹೆಚ್ಚು ತಳುಕು ಹಾಕಿಕೊಂಡಿದೆ. ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿರುವ ನಟಿ ಶೆರ್ಲಿನ್ 'ಈ ಕೇಸ್‌ನಲ್ಲಿ ಮೊದಲು ಹೇಳಿಕೆ ಕೊಟ್ಟಿದ್ದು ನಾನು'' ಎಂಬ ವಿಷಯ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

  ರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ ರಾಜ್‌ಕುಂದ್ರಾ ವಿರುದ್ಧ ಆಘಾತಕಾರಿ ವಿಷಯಗಳನ್ನು ಬಿಚ್ಚಿಟ್ಟ ಪೂನಂ ಪಾಂಡೆ

  ಮೊದಲು ಹೇಳಿಕೆ ಕೊಟ್ಟಿದ್ದೇ ನಾನು

  ಮೊದಲು ಹೇಳಿಕೆ ಕೊಟ್ಟಿದ್ದೇ ನಾನು

  ರಾಜ್ ಕುಂದ್ರಾ ಅರೆಸ್ಟ್ ಆದ ನಂತರ ನಟಿ ಶೆರ್ಲಿನ್ ಚೋಪ್ರಾ ಹೆಸರು ಹೆಚ್ಚು ಚರ್ಚೆಯಲ್ಲಿತ್ತು. ಈ ಸಂಬಂಧ ಆಕೆಯನ್ನು ಸಂಪರ್ಕಿಸಲು ಪತ್ರಕರ್ತರು, ಇಂಡಸ್ಟ್ರಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಇದೀಗ, ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ''ಕಳೆದ ಕೆಲವು ದಿನಗಳಿಂದ ಹಲವು ಪತ್ರಕರ್ತರು ನನಗೆ ಫೋನ್ ಮಾಡ್ತಿದ್ದಾರೆ. ಇ-ಮೇಲ್ ಮಾಡ್ತಿದ್ದಾರೆ. ವಾಟ್ಸಾಪ್ ಸಂದೇಶ ಕಳುಹಿಸುತ್ತಿದ್ದಾರೆ. ಮುಂಬೈ ಸೈಬರ್ ಪೊಲೀಸರ ಮುಂದೆ ಈ ಕೇಸ್ ಸಂಬಂಧ ಮೊದಲು ಹೇಳಿಕೆ ಕೊಟ್ಟಿದ್ದೇ ನಾನು ಎಂದು ನಿಮಗೆ ತಿಳಿಸಲು ಬಯಸುತ್ತೇನೆ'' ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

  ಪೂನಂ ಪಾಂಡೆಗೆ ತಿರುಗೇಟು ಕೊಟ್ಟ ನಟಿ

  ಪೂನಂ ಪಾಂಡೆಗೆ ತಿರುಗೇಟು ಕೊಟ್ಟ ನಟಿ

  ''ಮುಂಬೈ ಸೈಬರ್ ಪೊಲೀಸರೊಂದಿಗೆ ರಾಜ್ ಕುಂದ್ರಾ ಒಡೆತನದ ಆಪ್‌ ಬಗ್ಗೆ ಮೊದಲು ಮಾಹಿತಿ ನೀಡಿದ್ದು ನಾನು'' ಎಂದು ಶೆರ್ಲಿನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ''ನನಗೆ ಸಮನ್ಸ್ ನೀಡಿದಾಗ ಶಿಲ್ಪಾ ಶೆಟ್ಟಿ ಮತ್ತು ಮಕ್ಕಳ ಕಡೆ ನನ್ನ ಮನಸ್ಸು ಹೋಗುತ್ತದೆ ಎಂದು ಹೇಳಿಕೆ ಕೊಡಲಿಲ್ಲ. ತಲೆಮರಿಸಿಕೊಂಡಿಲ್ಲ, ನಗರ-ದೇಶ ಬಿಟ್ಟು ಓಡಿ ಹೋಗಲಿಲ್ಲ. ನನ್ನ ಹೇಳಿಕೆಯನ್ನು 2021 ಮಾರ್ಚ್ ತಿಂಗಳಲ್ಲಿ ಮುಂಬೈ ಪೊಲೀಸರು ಮುಂದೆ ನೀಡಿದ್ದೇನೆ'' ಎಂದು ಪೂನಂ ಪಾಂಡೆಗೆ ಪರೋಕ್ಷವಾಗಿ ತಿರುಗೇಟು ಕೊಟ್ಟರು.

  ಬೆತ್ತಲೆಯಾಗಿ ಆಡಿಷನ್ ನೀಡಲು ಕೇಳಿದ್ದ: ರಾಜ್ ಕುಂದ್ರಾ ವಿರುದ್ಧ ಬಾಂಬ್ ಸಿಡಿಸಿದ ನಟಿಬೆತ್ತಲೆಯಾಗಿ ಆಡಿಷನ್ ನೀಡಲು ಕೇಳಿದ್ದ: ರಾಜ್ ಕುಂದ್ರಾ ವಿರುದ್ಧ ಬಾಂಬ್ ಸಿಡಿಸಿದ ನಟಿ

  ಮಾತನಾಡಲು ತುಂಬಾ ವಿಷಯ ಇದೆ

  ಮಾತನಾಡಲು ತುಂಬಾ ವಿಷಯ ಇದೆ

  ಮಾತು ಮುಂದುವರಿಯುತ್ತಾ, ''ಈ ಕೇಸ್‌ ಬಗ್ಗೆ ಮಾತನಾಡಬೇಕಾಗಿರುವುದು ಬಹಳಷ್ಟಿದೆ. ಆದರೆ ಪೊಲೀಸರು ತನಿಖೆ ಮಾಡುತ್ತಿರುವುದರಿಂದ ನಾನು ಹೆಚ್ಚಾಗಿ ಚರ್ಚಿಸಲು ಇಷ್ಟಪಡುವುದಿಲ್ಲ. ಸೈಬರ್ ಪೊಲೀಸರ ಬಳಿಕ ಹೆಚ್ಚಿನ ವಿಷಯವನ್ನು ನೀವು ಪಡೆಯಬಹುದು. ಹಾಗೂ ನನ್ನ ಹೇಳಿಕೆಯನ್ನು ನೀವು ಅಲ್ಲಿಂದಲೇ ಆಗ್ರಹಿಸಿ ಪಡೆಯಿರಿ'' ಎಂದು ಶೆರ್ಲಿನ್ ಚೋಪ್ರಾ ಪತ್ರಕರ್ತರಿಗೆ ತಿಳಿಸಿದ್ದಾರೆ.

  ಶೆರ್ಲಿನ್-ಪೂನಂ ಹೇಳಿಕೆ ಪಡೆಯಲಾಗಿದೆ

  ಶೆರ್ಲಿನ್-ಪೂನಂ ಹೇಳಿಕೆ ಪಡೆಯಲಾಗಿದೆ

  ಫೆಬ್ರವರಿ ತಿಂಗಳಲ್ಲಿ ದಾಖಲಾಗಿರುವ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನವಾಗಿದೆ. ಇದೇ ಕೇಸ್‌ನಲ್ಲಿ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಹೇಳಿಕೆಯೂ ಸಹ ಪೊಲೀಸರು ಪಡೆದುಕೊಂಡಿದ್ದಾರೆ. ಇದಕ್ಕೂ ಮುಂಚೆ ಈ ಇಬ್ಬರು ನಟಿಯರು ಕುಂದ್ರಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ತದನಂತರ ಇಬ್ಬರು ಒಪ್ಪಂದ ಮುರಿದುಕೊಂಡು ಹೊರಬಂದಿದ್ದರು. ಇದಾದ ಬಳಿಕವೇ ಈ ಬೆಳವಣಿಗೆಯಲ್ಲಾ ನಡೆದಿದೆ.

  English summary
  Bollywood actress Sherlyn Chopra releases video statement in Raj Kundra Pornograhy Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X