For Quick Alerts
  ALLOW NOTIFICATIONS  
  For Daily Alerts

  ವಿವಾಹ ವಾರ್ಷಿಕೋತ್ಸವ ವೇಳೆ ಭಾವನಾತ್ಮಕ ವಿಚಾರ ಹಂಚಿಕೊಂಡ ಶಿಲ್ಪಾಶೆಟ್ಟಿ

  |

  ನಟಿ ಶಿಲ್ಪಾ ಶೆಟ್ಟಿ. ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾ ಮಾಡಿ ತನ್ನ ಮೈಮಾಟದಿಂದಲೇ ಗಮನ ಸೆಳೆದ ನೀಳಕಾಯದ ಬೆಡಗಿ. ಮಂಗಳೂರಿನಲ್ಲಿ ಹುಟ್ಟಿ ಬಾಲಿವುಡ್ ಅಂಗಳದಲ್ಲಿ ಛಾಪು ಮೂಡಿಸಿರೋ ಶಿಲ್ಪಾ ಶೆಟ್ಟಿ ಸದ್ಯ ಮುಂಬೈನಲ್ಲೇ ಸೆಟಲ್ ಆಗಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸೋ ಶಿಲ್ಪಾ ಶೆಟ್ಟಿ ಯೋಗ, ವರ್ಕ್‌ಔಟ್‌ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೆಲ್ದಿ ಲೈಫ್‌ಸ್ಟೈಲ್ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಸದಾ ಆಕ್ಟಿವ್ ಆಗಿರೋ ನಟಿ ಶಿಲ್ಪಾ ಶೆಟ್ಟಿ ಈಗ ತನ್ನ 12ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಅಂಗವಾಗಿ ವಿಶೇಷ ಫೊಟೋಗಳನ್ನು ಶೇರ್ ಮಾಡಿಕೊಂಡು ಈ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

  ಇಂದಿಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್‌ಕುಂದ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 12 ವರ್ಷಗಳಾಗಿದೆ. 2009 ನವೆಂಬರ್ 22ರಂದು ಬಹಳ ಅದ್ಧೂರಿಯಾಗಿ ರಾಜ್‌ ಕುಂದ್ರಾ ಜೊತೆ ಸಪ್ತಪದಿ ತುಳಿದಿದ್ದ ಶಿಲ್ಪಾ ಶೆಟ್ಟಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಇದರ ಹೊರತಾಗಿಯೂ ಕುಟುಂಬ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡಿರುವ ಶಿಲ್ಪಾ ಶೆಟ್ಟಿ ಇವತ್ತು ತನ್ನ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮದುವೆ ಸಂದರ್ಭದಲ್ಲಿ ತೆಗೆದಿರುವ ಫೊಟೋಗಳನ್ನು, ಹಾಗೆ ಒಂದಷ್ಟು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  ಹಾಗೇ ತಮ್ಮ 12 ವರ್ಷದ ದಾಂಪತ್ಯ ಜೀವನದ ಬಗ್ಗೆ ಶಿಲ್ಪಾ ಶೆಟ್ಟಿ ಭಾವನಾತ್ಮಕವಾಗಿ ಒಂದೆರೆಡು ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದರಲ್ಲಿ "ಈ ಕ್ಷಣ ಮತ್ತು ಈ ದಿನ 12 ವರ್ಷಗಳ ಹಿಂದೆ ನಡೆದಿತ್ತು. ಅವತ್ತು ನಾವು ಭರವಸೆ ನೀಡಿದ್ದೇವೆ. ಹಾಗೆ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಹಾಗೆ ಮುಂದುವರೆಯುತ್ತಿದ್ದೇವೆ. ಜೀವನದ ಒಳ್ಳೆ ಸಮಯವನ್ನು ಹಂಚಿಕೊಳ್ಳುವುದು ಮತ್ತು ಎದುರಾಗುವ ಕಷ್ಟಗಳನ್ನು, ಕಷ್ಟದ ಸಮಯವನ್ನು ಸಹಿಸಿಕೊಳ್ಳುವುದು ಪ್ರೀತಿಯಲ್ಲಿ ನಂಬಿಕೆಯನ್ನು ಹೆಚ್ಚಿಸುತ್ತೆ. ಇದಕ್ಕಾಗಿ ದೇವರು ನಮಗೆ ದಿನದಿಂದ ದಿನಕ್ಕೆ ದಾರಿ ತೋರಿಸುತ್ತಾನೆ. 12 ವರ್ಷಗಳನ್ನು ಎಣಿಸಲು ಆಗಲ್ಲ. ವಾರ್ಷಿಕೋತ್ಸವದ ಶುಭಾಷಯಗಳು ಕುಕೀ. ಜೀವನದ ಅನೇಕ ಕಾಮನಬಿಲ್ಲುಗಳು, ನಗು, ಮೈಲಿಗಲ್ಲು ಮತ್ತು ನಮ್ಮ ಅಮೂಲ್ಯ ಆಸ್ತಿಗಳು ನಮ್ಮ ಮಕ್ಕಳು. ನಮ್ಮ ಕಷ್ಟದ ಸಮಯದಲ್ಲಿ ತನಗೆ ಮತ್ತು ತನ್ನ ಪತಿಗೆ ಬೆಂಬಲ ನೀಡಿದರಿಗೂ ಧನ್ಯವಾದಗಳು" ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

  ಈ ಹಿಂದೆ ಉದ್ಯಮಿ ರಾಜ್ ಕುಂದ್ರಾ ಆಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿರೊ ವಿಚಾರಕ್ಕೆ ಬಂಧನಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಶಿಲ್ಪಾಶೆಟ್ಟಿ ಮತ್ತು ರಾಜ್ ಕುಂದ್ರಾ ನಡುವೆ ಭಾರಿ ಬಿರುಕು ಉಂಟಾಗಿತ್ತು. ಆ ಸಂದರ್ಭದಲ್ಲಿ ಇವರಿಬ್ಬರು ಜೀವನದಲ್ಲಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಈಗ ಶಿಲ್ಪಾ ಶೆಟ್ಟಿಯ ಈ ಭಾವನಾತ್ಮಕ ಬರಹವನ್ನು ಗಮನಿಸಿದರೆ ಕುಟುಂಬದಲ್ಲಿದ್ದ ಬಿರುಕುಗಳು ಸರಿಯಾಗಿ ಸಂತಸದ ಜೀವನ ನಡೆಸಲು ಮುಂದಾಗಿದ್ದಾರೆ ಅನ್ನೋದು ತಿಳಿದು ಬರುತ್ತಿದೆ.

  ಜುಲೈನಲ್ಲಿ ರಾಜ್‌ ಕುಂದ್ರಾ ಅವರನ್ನು ಆಶ್ಲೀಲ ಕ್ಲಿಪ್‌ಗಳನ್ನು ತಯಾರಿಕೆ ಆರೋಪದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಪತ್ನಿ ಶಿಲ್ಪಾಶೆಟ್ಟಿ ಸಾಕಷ್ಟು ಅಸಮಾಧಾನ ಗೊಂಡಿದ್ದರು. ಮಾಧ್ಯಮದ ಕಣ್ಣಿಗು ಬೀಳದೆ, ತನ್ನ ರಿಯಾಲಿಟಿ ಶೋಗೂ ತೆರಳದೇ, ಸೋಶಿಯಲ್ ಮೀಡಿಯಾದಲ್ಲು ಸೈಲೆಂಟ್ ಆಗಿದ್ದರು. ಆದರೆ ಈಗ ಎಲ್ಲವು ಸರಿಯಾಗಿದೆ. ಸೆಪ್ಟೆಂಬರ್ 20ರಂದು ಮ್ಯಾಜಿಸ್ಟ್ರೇಟ್ ನ್ಯಾಯಲಯವು ರಾಜ್‌ಕುಂದ್ರಾ ಅವರಿಗೆ ಜಾಮೀನು ನೀಡಿತ್ತು, ತದನಂತರದಲ್ಲಿ ಕೊಂಚ ಚೇತರಿಸಿಕೊಂಡಿರುವ ಶಿಲ್ಪಾ ಶೆಟ್ಟಿ ಈಗ ಸಹಜ ಜೀವನ ನಡೆಸುತ್ತಿದ್ದಾರೆ.

  Shilpa Shetty and Raj Kundra are celebrating their 12th wedding anniversary

  ಇನ್ನು ಶಿಲ್ಪಾ ಶೆಟ್ಟಿ ಸಿನಿಮಾ ವಿಚಾರಕ್ಕೆ ಬಂದರೇ ಅವರ ಅಭಿನಯದ ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹಾಗೆ ಬಾಲಿವುಡ್‌ನ ಹೆಸರಿಡದ ಎರಡು ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದು, ಇತ್ತೀಚೆಗೆ ಗೋವಾದಲ್ಲಿ ಈ ಸಿನಿಮಾದ ಚಿತ್ರೀಕರಣದಲ್ಲಿ ಶಿಲ್ಪಾ ಶೆಟ್ಟಿ ಭಾಗಿಯಾಗಿದ್ದರು. ಹೀಗೆ ಸಹಜ ಜೀವನದತ್ತ ಮರಳಿರೋ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

  English summary
  Shilpa Shetty penned a note to wish husband Raj Kundra on their 12th wedding anniversary, along with their wedding pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X