For Quick Alerts
  ALLOW NOTIFICATIONS  
  For Daily Alerts

  ಬಾಡಿಗೆ ತಾಯ್ತನ ಮೂಲಕ ಮತ್ತೆ ಅಮ್ಮನಾದ ಸಂಭ್ರಮದಲ್ಲಿ ನಟಿ ಶಿಲ್ಪ ಶೆಟ್ಟಿ

  |

  ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಕುಂದ್ರ ಮತ್ತೆ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಎರಡನೆ ಮುಗುವನ್ನು ಬರಮಾಡಿಕೊಂಡ ಶಿಲ್ಪ ಶೆಟ್ಟಿ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಶಿಲ್ಪ ಶೆಟ್ಟಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಇದೆ ತಿಂಗಳು 15ರಂದು ಶಿಲ್ಪ ಬಾಡಿಗೆ ತಾಯ್ತನದ ಮೂಲಕ ಅಮ್ಮನಾಗಿದ್ದಾರೆ. 6 ದಿನಗಳ ಬಳಿಕ ಮುದ್ದಾದ ಮಗುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಮನೆಗೆ ಆಗಮಿಸಿರುವ ಮುದ್ದಾದ ಹೆಣ್ಣು ಮಗುವನ್ನು ಶಿಲ್ಪ ದಂಪತಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಈ ಬಗ್ಗೆ ಶಿಲ್ಪ ಶೆಟ್ಟಿ ದಂಪತಿ ಹೇಳಿದ್ದನು?ಮುಂದೆ ಓದಿ..

  ಮಗುವಿಗೆ ನಾಮಕರಣ ಮಾಡಿರುವ ದಂಪತಿ

  ಮಗುವಿಗೆ ನಾಮಕರಣ ಮಾಡಿರುವ ದಂಪತಿ

  ಶಿಲ್ಪ ಶೆಟ್ಟಿ ಮತ್ತು ರಾಜ್ ಕುಂದ್ರ ದಂಪತಿ ಮುದ್ದಾದ ಮಗುವಿಗೆ ನಾಮಕರಣ ಮಾಡಿದ್ದಾರೆ. ಜೂನಿಯರ್ ಶಿಲ್ಪಶೆಟ್ಟಿ ಆಗಮಿಸಿರುವ ಖುಷಿಯಲ್ಲಿ ಮಗುವಿಗೆ ಸಮಿಶಾ ಶೆಟ್ಟಿ ಕುಂದ್ರ ಎಂದು ಹೆಸರಿಟ್ಟಿದ್ದಾರೆ.

  ಶಿಲ್ಪ ಶೆಟ್ಟಿ ಹೇಳಿದ್ದೇನು?

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶಿಲ್ಪ ಶೆಟ್ಟಿ
  "ನಮ್ಮ ಪ್ರಾರ್ಥನೆಗೆ ಪವಾಡದಿಂದ ಉತ್ತರಿಸಲಾಗಿದೆ. ನಮ್ಮ ಪುಟ್ಟ ಏಂಜಲ್ ಆಗಮನವನ್ನು ಘೋಷಿಸಲು ನಾವು ರೋಮಂಚನಗೊಂಡಿದ್ದೇವೆ. ಸಮಿತಾ ಶೆಟ್ಟಿ ಕುಂದ್ರ. ಫೆಬ್ರವರಿ 15ರಂದು ಜನಿಸಿದರು. ಜೂನಿಯರ್ ಶಿಲ್ಪ ಶೆಟ್ಟಿ ಕುಂದ್ರ" ಎಂದು ಬರೆದುಕೊಂಡಿದ್ದಾರೆ.

  ಮೊದಲ ಮಗ ವಿಹಾನ್

  ಮೊದಲ ಮಗ ವಿಹಾನ್

  ಶಿಲ್ಪ ಶೆಟ್ಟಿ ಮತ್ತು ರಾಜ್ ಕುಂದ್ರ ದಂಪತಿಗೆ ಈಗಾಗಲೆ ಒಬ್ಬ ಮಗನಿದ್ದಾನೆ. 2012ರಲ್ಲಿ ಶಿಲ್ಪ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮಗನಿಗೆ ವಿಹಾನ್ ಎಂದು ನಾಮಕರಣ ಮಾಡಿದ್ದಾರೆ. ಶಿಲ್ಪ ಶೆಟ್ಟಿ ಮತ್ತು ರಾಜ್ ಕುಂದ್ರ 2009ರಲ್ಲಿ ಹಸೆಮಣೆ ಏರಿದ್ದರು.

  ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶಿಲ್ಪ

  ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶಿಲ್ಪ

  ಮದುವೆ ನಂತರ ಶಿಲ್ಪ ಶೆಟ್ಟಿ ಬಣ್ಣದ ಲೋಕದಿಂದ ಬ್ರೇಕ್ ಪಡೆದಿದ್ದರು. ಅನೇಕ ವರ್ಷಗಳ ಬಳಿಕ 'ನಿಕಮ್ಮ' ಸಿನಿಮಾ ಮೂಲಕ ಮತ್ತೆ ವಾಪಾಸ್ ಆಗಿದ್ದಾರೆ. ಇನ್ನು 'ಹಂಗಾಮ-2' ಸಿನಿಮಾದಲ್ಲೂ ಶಿಲ್ಪ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟಿ ಪ್ರಣೀತಾ ಕೂಡ ಅಭಿನಯಿಸುತ್ತಿದ್ದಾರೆ.

  Read more about: shilpa shetty baby ಮಗು
  English summary
  Bollywood Actress Shilpa Shetty and Rajkundra blessed with baby girl via surrogacy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X