For Quick Alerts
  ALLOW NOTIFICATIONS  
  For Daily Alerts

  ತಾರೆ ಶಿಲ್ಪಾ ಶೆಟ್ಟಿ ಕಂದನಿಗೆ ಟ್ವಿಟ್ಟರ್‌ನಲ್ಲೇ ನಾಮಕರಣ

  By Rajendra
  |

  ಈಗ ತಂತ್ರಜ್ಞಾನದ ಜೊತೆಗೆ ಜನರ ಹಾವ ಭಾವ ಮನೋಭಾವಗಳೂ ಬದಲಾಗುತ್ತಿವೆ. ನಾಲ್ಕು ಗೋಡೆಗಳ ನಡುವೆ ನಡೆಯುತ್ತಿದ್ದಂತಹ ಸಭೆ ಸಮಾರಂಭಗಳು ಈಗ ಗೋಡೆ ಹಾರಿ ಸಾಮಾಜಿಕ ಜಾಲತಾಣಗಳಲ್ಲೇ ಜಿಗಿಯುತ್ತಿವೆ. ಅಂದಹಾಗೆ ಬಾಲಿವುಡ್ ತಾರೆ, ಮಂಗಳೂರು ಕುಡಿ ಶಿಲ್ಪಾ ಶೆಟ್ಟಿ ಕಂದನ ನಾಮಕರಣ ಟ್ವಿಟ್ಟರ್‌ನಲ್ಲಿ ನಡೆದುಹೋಗಿದೆ.

  ಮೇ 21, 2012ರಂದು ಶಿಲ್ಪಾ ಶೆಟ್ಟಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ನವಜಾತ ಶಿಶುವಿಗೆ ಬೇಬಿ ಕೆ ಎಂದು ಶಿಲ್ಪಾ ಹಾಗೂ ರಾಜ್ ಕುಂದ್ರ ಮುದ್ದಾದ ಒಂದು ಹೆಸರಿಟ್ಟಿದ್ದರು. ಈಗ ತಮ್ಮ ಮಗುವಿಗೆ ಹೊಸ ಹೆಸರನ್ನು ಇಟ್ಟಿದ್ದಾರೆ.

  ಶಿಲ್ಪಾ ರಾಜ್ ಕುಂದ್ರ ದಂಪತಿಗಳು ತಮ್ಮ ಕಂದನಿಗೆ ಇಟ್ಟಿರುವ ಹೆಸರು ವಿಯಾನ್ ರಾಜ್ ಕುಂದ್ರ (Viaan Raj Kundra). ವಿಯಾಯ್ ಎಂದರೆ ಪರಿಪೂರ್ಣ ಜೀವನ ಎಂದರ್ಥವಂತೆ. ಈ ವಿಷಯವನ್ನು ಸ್ವತಃ ರಾಜ್ ಕುಂದ್ರಾ ಟ್ವೀಟಿಸಿದ್ದಾರೆ.

  "ಹಾಯ್ ಟ್ವೀಟೋಸ್, ಹೌದು ಇದು ಅಧಿಕೃತ, ಇಂದು ನಾಮಕರಣ ನಡೆಯಿತು, ನನ್ನ ಮಗನಿಗೆ ವಿಯಾನ್ ರಾಜ್ ಕುಂದ್ರ ಎಂದು ಹೆಸರಿಟ್ಟಿದ್ದೇವೆ. ಪರಿಪೂರ್ಣ ಜೀವನ/ಸಂಪೂರ್ಣ ಶಕ್ತಿ ಎಂಬರ್ಥ" ಎಂದಿದ್ದಾರೆ.

  ಇಷ್ಟಕ್ಕೆ ಸುಮ್ಮನಾಗದ ರಾಜ್ ಕುಂದ್ರ ತಮ್ಮ ಮಗನಿಗಾಗಿ ಒಂದು ಟ್ವಿಟ್ಟರ್ ಖಾತೆಯನ್ನೂ ತೆಗೆದಿದ್ದಾರೆ. "ಟ್ವಿಟ್ಟರ್‌ನ ಅತಿಚಿಕ್ಕ ವಯಸ್ಸಿನ ಬಳಕೆದಾರನಾದ ನನ್ನ ಮಗನನ್ನು ಸ್ವಾಗತಿಸಿ. ಅವನೊಂದಿಗೆ ಚೆನ್ನಾಗಿ ಮಾತನಾಡಿ. ರಿಪ್ಲೈ ಕೊಡಲೂ ಬಹುದು" ಎಂದಿದ್ದಾರೆ ರಾಜ್ ಕುಂದ್ರ.

  ಶಿಲ್ಪಾ ಶೆಟ್ಟಿಗೆ ವಿಯಾನ್ ಚೊಚ್ಚಲ ಕಂದ. ಆದರೆ ರಾಜ್ ಕುಂದ್ರಗೆ ಮಾತ್ರ ತಂದೆಯಾಗುತ್ತಿರುವುದು ಇದೇ ಎರಡನೇ ಬಾರಿ. ಈ ಹಿಂದೆ ರಾಜ್‌ಗೆ ಮದುವೆಯಾಗಿದ್ದು ಆತನ ಮೊದಲ ಪತ್ನಿಗೆ ಮಗಳಿದ್ದಾಳೆ.

  ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಿಲ್ಪಾ ಶೆಟ್ಟಿ ಗರ್ಭಿಣಿ ಎಂಬ ಅಂಶ ಬಯಲಾಗಿತ್ತು. ಬಳಿಕ ಶಿಲ್ಪಾ ಶೆಟ್ಟಿ ಕೂಡ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರು. (ಏಜೆನ್ಸೀಸ್)

  English summary
  Bollywood actress Shilpa Shetty gave birth to a baby boy on May 21st. Initially, Shilpa and Raj Kundra fondly nicknamed him Baby K. But now they have finally named their baby boy Viaan Raj Kundra. Viaan means full of life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X