For Quick Alerts
  ALLOW NOTIFICATIONS  
  For Daily Alerts

  ಚಿತ್ರಪಟ: ಮುದ್ದುಪತಿ ಜೊತೆ ಬರ್ತ್ ಡೇ ಆಚರಿಸಿಕೊಂಡ ಶಿಲ್ಪಾ ಶೆಟ್ಟಿ

  By ಸೋನು ಗೌಡ
  |

  ಬಾಲಿವುಡ್ ನ ಬಳುಕೋ ಬಳ್ಳಿ ನಟಿ ಶಿಲ್ಪಾ ಶೆಟ್ಟಿ ಅವರು ಜೂನ್ 8, ಬುಧವಾರದಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮುದ್ದುಪತಿ ರಾಜ್ ಕುಂದ್ರ ಅವರ ಜೊತೆ ತಮ್ಮ ಮೆಚ್ಚಿನ ರೆಸ್ಟೋರೆಂಟ್ ಒಂದರಲ್ಲಿ ಸೀಕ್ರೆಟ್ ಆಗಿ ಹುಟ್ಟುಹಬ್ಬವನ್ನು ಬಹಳ ರೋಮ್ಯಾಂಟಿಕ್ ಆಗಿ ಆಚರಿಸಿಕೊಂಡಿದ್ದಾರೆ.

  ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರ ಅವರು ಸ್ಪೆಷಲ್ ಮತ್ತು ಸರ್ ಪ್ರೈಸ್ ಬರ್ತ್ ಡೇ ಡಿನ್ನರ್ ಪಾರ್ಟಿ ಆರೆಂಜ್ ಮಾಡಿದ್ದರು. ಇದೀಗ ದಂಪತಿಗಳಿಬ್ಬರು ಒಟ್ಟಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ತಮ್ಮಿಬ್ಬರ ವಿಚ್ಛೇದನದ ಬಗ್ಗೆ ಹಬ್ಬಿದ್ದ ಅಂತೆ-ಕಂತೆಗಳ ಸುದ್ದಿಗೆ ಶಾಶ್ವತವಾಗಿ ಬ್ರೇಕ್ ಹಾಕಿದ್ದಾರೆ.[ಡೈವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ ಶಿಲ್ಪಾ ಪತಿ ರಾಜ್ ಕುಂದ್ರ]

  ಕೆಂಪು ಬಣ್ಣದ ಬಟ್ಟೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರು ಮುದ್ದಾಗಿ ಕಾಣಿಸುತ್ತಿದ್ದು, ಹುಟ್ಟುಹಬ್ಬದ ರೋಮ್ಯಾಂಟಿಕ್ ಡಿನ್ನರ್ ಪಾರ್ಟಿಯ ಚಿತ್ರಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.[ಕನ್ನಡ ಕಿರುತೆರೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ!]

  2009 ರಲ್ಲಿ ಮದುವೆಯಾದ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರ ದಂಪತಿಗಳಿಗೆ ವಿಯಾನ್ ಎಂಬ ಮುದ್ದಾದ ಮಗನಿದ್ದಾನೆ. ಸಂಸಾರಿಕ ಜೀವನಕ್ಕೆ ಕಾಲಿಟ್ಟ ಮೇಲೆ ಶಿಲ್ಪಾ ಶೆಟ್ಟಿ ಅವರು ಹೆಚ್ಚಾಗಿ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಬರ್ತ್ ಡೇ ಬೇಬಿಗೆ ಇಡೀ ಬಾಲಿವುಡ್ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

  -

  -

  -

  ಮುದ್ದುಪತಿ ಜೊತೆ ಬರ್ತ್ ಡೇ ಆಚರಿಸಿಕೊಂಡ ಶಿಲ್ಪಾ ಶೆಟ್ಟಿ

  ಮುದ್ದುಪತಿ ಜೊತೆ ಬರ್ತ್ ಡೇ ಆಚರಿಸಿಕೊಂಡ ಶಿಲ್ಪಾ ಶೆಟ್ಟಿ

  -

  -

  -

  -

  English summary
  Shilpa Shetty has turned 41 Yesterday (8th June). She celebrated her birthday in style with husband Raj Kundra and now she is making us jealous by posting her lovely pictures on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X