For Quick Alerts
  ALLOW NOTIFICATIONS  
  For Daily Alerts

  ನನ್ನ ಗಂಡ ನಿರಪರಾಧಿ, ಬ್ಲೂ ಫಿಲ್ಮ್ ದಂಧೆಯಲ್ಲಿ ಭಾಗಿಯಾಗಿಲ್ಲ: ಶಿಲ್ಪಾ ಶೆಟ್ಟಿ

  |

  ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ತನಗೆ ಹಾಟ್ ಶಾಟ್ ಗಳೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಪತಿ ರಾಜ್ ಕುಂದ್ರ ಅವರ ಮೊಬೈಲ್ ಅಪ್ಲಿಕೇಶನ್ ಬಗ್ಗೆ ತಿಳಿದಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  ನಿನ್ನ (ಜುಲೈ 23) ಶುಕ್ರವಾರ ಮುಂಬೈ ಪೊಲೀಸ್ ಅಪರಾಧ ವಿಭಾಗ ರಾಜ್ ಕುಂದ್ರ ಅವರ ಅಶ್ಲೀಲ ದಂಧೆ ಪ್ರಕರಣದ ಬಗ್ಗೆ ಶಿಲ್ಪಾ ಶೆಟ್ಟಿ ಅವರನ್ನು ಪ್ರಶ್ನೆ ಮಾಡಿದೆ. ಪೊಲೀಸರ ಬಳಿ ಶಿಲ್ಪಾ ಶೆಟ್ಟಿ, "ನನ್ನ ಪತಿ ನಿರಪರಾಧಿ, ಯಾವುದೇ ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡಿಲ್ಲ. ಬ್ಲೂ ಫಿಲ್ಮ್ ಗಳಿಗಿಂತ ಕಾಮಪ್ರಚೋದಕ (ಎರೋಟಿಕ) ವಿಡಿಯೋಗಳು ವಿಭಿನ್ನವಾಗಿವೆ. ನನ್ನ ಗಂಡ ಯಾವುದೇ ಅಶ್ಲೀಲ ವಿಡಿಯೋ ನಿರ್ಮಾಣ ದಂಧೆಯಲ್ಲಿ ಭಾಗಿಯಾಗಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

  ಪತಿ ಪರ ನಿಂತ ಶಿಲ್ಪಾ: ಕುಂದ್ರಾ ನಿರ್ಮಿಸಿದ್ದು ಅಶ್ಲೀಲ ವಿಡಿಯೋಗಳಲ್ಲ ಎಂದ ನಟಿಪತಿ ಪರ ನಿಂತ ಶಿಲ್ಪಾ: ಕುಂದ್ರಾ ನಿರ್ಮಿಸಿದ್ದು ಅಶ್ಲೀಲ ವಿಡಿಯೋಗಳಲ್ಲ ಎಂದ ನಟಿ

  ಲಂಡನ್ ನಲ್ಲಿರುವ ವಾಂಟೆಡ್ ಆರೋಪಿ ಮತ್ತು ರಾಜ್ ಕುಂದ್ರ ಸಂಬಂಧಿ ಪ್ರದೀಪ್ ಬಕ್ಷಿ ಅಪ್ಲಿಕೇಶನ್ ಮತ್ತು ಈ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ ಎಂದು ಅಧಿಕಾರಿಗಳು ಎ ಎನ್ ಐಗೆ ತಿಳಿಸಿವೆ.

  ಜುಲೈ 19ರಂದು ಬಂಧನಕ್ಕೊಳಗಾಗಿರುವ ರಾಜ್ ಅವರ ಪೊಲೀಸ್ ಕಸ್ಟಡಿ ಅವಧಿ ಜುಲೈ 27ರವರೆಗೂ ವಿಸ್ತರಿಸಿದೆ. ಇನ್ನು ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ರಾಜ್ ಕುಂದ್ರ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

  ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಆಪ್ ಗಳ ಮೂಲಕ ಪ್ರಕಟಿಸಿದ ಆರೋಪದಲ್ಲಿ ರಾಜ್ ಕುಂದ್ರ ಜೊತೆ ಇತರ 10 ಜನರನ್ನು ಈ ವಾರದ ಪ್ರಾರಂಭದಲ್ಲಿ ಮುಂಬೈ ಪೊಲೀಸರು ಬಂದಿಸಿದ್ದಾರೆ. ಈ ಪ್ರಕರಣದಲ್ಲಿ ರಾಜ್ ಕುಂದ್ರ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

  ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೇಶಾ ಸೈಗಲ್

  ವಿಚಾರಣೆ ವೇಳೆ ರಾಜ್ ಕುಂದ್ರ ಮತ್ತು ಸಹಚರರು ಕಳೆದ ಒಂದು ವರ್ಷದಲ್ಲಿ 100ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ನಿರ್ಮಾಣ ಮಾಡಿ ಆಪ್ ಗಳ ಮೂಲಕ ಹಾಟ್ ಸಾಟ್ ಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

  English summary
  Actress Shilpa Shetty claims husband Raj Kundra is innocent; wasn't involved in producing porn content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X