For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿಗೆ ಮಾಜಿ ಪ್ರೇಮಿಯಿಂದ ಶುಭ ಹಾರೈಕೆ

  |

  ನಟಿ ಶಿಲ್ಪಾ ಶೆಟ್ಟಿ ಗಂಡುಮಗುವಿಗೆ ಜನ್ಮನೀಡಿದ್ದು ಜಗತ್ತಿಗೇ ಗೊತ್ತಾಗಿದೆ. ಹೊಸ ಸುದ್ದಿಯೆಂದರೆ, ಈ ಹಿಂದೆ ಸಾಕಷ್ಟು ವರ್ಷಗಳ ಮೊದಲು ಶಿಲ್ಪಾರ ಆತ್ಮೀಯ ಸ್ನೇಹಿತ ಹಾಗೂ ಮಾಜಿ ಪ್ರೇಮಿಯಾಗಿದ್ದ ಅಕ್ಷಯ್ ಕುಮಾರ್ ಶಿಲ್ಪಾಗೆ ಶುಭ ಹಾರೈಸಿದ್ದಾರೆ. ಮಗು ಹಾಗೂ ಶಿಲ್ಪಾ ಕುಟುಂಬ ಸಂತೋಷವಾಗಿರಲಿ ಎಂದಿದ್ದಾರೆ.

  ಶಿಲ್ಪಾ ಹಾಗೂ ಅಕ್ಷಯ್ ಮಾಜಿ ಪ್ರೇಮಿಗಳಷ್ಟೇ ಅಲ್ಲ, ಇವರಿಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ಪುಗಳು, ಸುದ್ದಿಗಳು ಈ ಹಿಂದೆ ವರದಿಯಾಗಿದ್ದವು. ಆದರೆ ಅಕ್ಷಯ್ ಟ್ವಿಂಕಲ್ ಖನ್ನಾರನ್ನು ಹಾಗೂ ಶಿಲ್ಪಾ ರಾಜ್ ಕುಂದ್ರಾರನ್ನು ಮದುವೆಯಾಗಿ ಈಗ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ.

  ಅಕ್ಷಯ್-ಟ್ವಿಂಕಲ್ ಜೋಡಿಗೆ ಈಗ ಆರವ್ ಎಂಬ ಮಗನಿದ್ದಾನೆ. ಮತ್ತೊಂದು ಮಗುವಿಗೆ ಜನ್ಮನೀಡಲು ಟ್ವಿಂಕಲ್ ದಿನ ಎಣಿಸುತ್ತಿದ್ದಾರೆ. ಅಷ್ಟರಲ್ಲೇ ಇತ್ತ ಶಿಲ್ಪಾ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಕೇಳಿದ ಶಿಲ್ಪಾರ ಮಾಜಿ ಪ್ರೇಮಿ ಅಕ್ಷಯ್ ಖುಷಿಖುಷಿಯಾಗಿದ್ದಾರಂತೆ. ಶಿಲ್ಪಾ ಕುಟುಂಬಕ್ಕೆ ಶುಭಾಶಯವನ್ನೂ ರವಾನಿಸಿದ್ದಾರೆ.

  ಅದಕ್ಕೇ ಹೇಳುವುದು ಅನ್ನಿಸುತ್ತೆ, ಮದುವೆ ಸ್ವರ್ಗದಲ್ಲೇ ನಿರ್ಧಾರವಾಗುತ್ತೆ. ಇಲ್ಲಿ ಯಾರೇ ಪ್ರೇಮಿಸಿದರೂ ಮದುವೆಯಾಗಲು ಋಣ ಬೇಕು ಎಂದು. ಅದೇನೇ ಇರಲಿ, ಇಬ್ಬರೂ ಈಗ ಬೇರೆಬೇರೆಯಾದರೂ ತಮ್ಮ ತಮ್ಮ ಸಂಗಾತಿಗಳ ಜೊತೆ ಸುಖವಾಗಿದ್ದಾರಲ್ಲ, ಅಷ್ಟು ಸಾಕು ಎನ್ನುತ್ತಿದ್ದಾರೆ ಅವರವರ ಅಭಿಮಾನಿಗಳು. (ಏಜೆನ್ಸೀಸ್)

  English summary
  Shilpa Shetty's ex-boyfriend Akshay Kumar congratulates her over the birth of her baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X