For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿಗೆ ಪತಿ 'ಬಿಬಿಸಿ' ಅಂತ ಕರೆದು, ರೇಗಿಸುವುದು ಯಾಕೆ.?

  |
  ಶಿಲ್ಪಾ ಶೆಟ್ಟಿ ಬಿಬಿಸಿ ಅಂತೆ!! | SHILPA SHETTY | RAJ KUNDRA | FILMIBEAT KANNADA

  ಮುದ್ದಿನ ಪತ್ನಿಗೆ ಚಿನ್ನ, ರನ್ನ ಅಂತ ಪತಿ ಕರೆಯೋದು ಕಾಮನ್. ಆದರೆ ಇಲ್ಲಿ, ಪ್ರೀತಿಯ ಪತ್ನಿ ಶಿಲ್ಪಾ ಶೆಟ್ಟಿಗೆ ಪತಿ ರಾಜ್ ಕುಂದ್ರಾ 'ಬಿಬಿಸಿ' ಅಂತ ಕರೆಯುತ್ತಾರೆ.!

  ಅರೇ.. ಶಿಲ್ಪಾಗೆ ಪತಿ ರಾಜ್ ಕುಂದ್ರಾ 'ಬಿಬಿಸಿ' ಅಂತ ಕರೆಯೋದು ಯಾಕೆ.? ಸದಾ ಇನ್ನೊಬ್ಬರ ವಿಷಯದಲ್ಲೇ ಶಿಲ್ಪಾ ಶೆಟ್ಟಿ ಮುಳುಗಿರಬಹುದಾ ಅಥವಾ ಜಾಸ್ತಿ ಗಾಸಿಪ್ ಮಾಡ್ಬಹುದಾ ಅಂತ ಲೆಕ್ಕಾಚಾರ ಹಾಕ್ಬೇಡಿ.

  'ಬಿಬಿಸಿ'ಗೆ ರಾಜ್ ಕುಂದ್ರಾ ಬೇರೆಯದ್ದೇ ಅರ್ಥ ಕೊಟ್ಟಿದ್ದಾರೆ. ರಾಜ್ ಕುಂದ್ರಾ ಪ್ರಕಾರ, ಬಿಬಿಸಿ ಅಂದ್ರೆ ಬಾರ್ನ್ ಬಿಪೋರ್ ಕಂಪ್ಯೂಟರ್ಸ್ (ಕಂಪ್ಯೂಟರ್ ಬರುವುದಕ್ಕಿಂತ ಮುಂಚೆ ಹುಟ್ಟಿರೋರು) ಎಂದರ್ಥ.

  10 ಕೋಟಿ ಆಫರ್ ಬೇಡ ಎಂದು ತಿರಸ್ಕರಿಸಿದ್ರಂತೆ ಶಿಲ್ಪಾ ಶೆಟ್ಟಿ10 ಕೋಟಿ ಆಫರ್ ಬೇಡ ಎಂದು ತಿರಸ್ಕರಿಸಿದ್ರಂತೆ ಶಿಲ್ಪಾ ಶೆಟ್ಟಿ

  ಶಿಲ್ಪಾ ಶೆಟ್ಟಿಗೆ ಹೀಗೆ 'ಬಿಬಿಸಿ' ಅಂತ ರಾಜ್ ಕುಂದ್ರಾ ಕರೆಯುವುದಕ್ಕೆ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ತಂತ್ರಜ್ಞಾನ ಮತ್ತು ಕಂಪ್ಯೂಟರ್ ಗೆ ಸಂಬಂಧಪಟ್ಟ ವಿಷಯದಲ್ಲಿ ಶಿಲ್ಪಾ ಶೆಟ್ಟಿ ತೀರಾ ದಡ್ಡಿ ಅಂತೆ. ಹೀಗಾಗಿ, ಪತ್ನಿಗೆ 'ಬಿಬಿಸಿ' ಅಂತ ರಾಜ್ ಕುಂದ್ರಾ ರೇಗಿಸುತ್ತಾರೆ.

  ಈ ಸಂಗತಿಯನ್ನ ಶೋವೊಂದರಲ್ಲಿ ಶಿಲ್ಪಾ ಶೆಟ್ಟಿ ಬಹಿರಂಗ ಪಡಿಸಿದ್ದಾರೆ. ''ರಾಜ್ ನನ್ನ ಬಿಬಿಸಿ ಅಂತ ಕರೆಯುತ್ತಾರೆ. ಯಾಕಂದ್ರೆ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿಷಯದಲ್ಲಿ ನಾನು ತೀರಾ ಹಿಂದೆ. ನನ್ನ ಮಗನ ಹೋಮ್ ವರ್ಕ್ ಕುರಿತಾದ ಈ-ಮೇಲ್ ಚೆಕ್ ಮಾಡುವುದೆಂದರೆ ನನಗೆ ದೊಡ್ಡ ತಲೆನೋವು. ನೋಟ್ ಬುಕ್ ಮತ್ತು ಪೆನ್ ಕೊಟ್ಟರೆ ಆಗಲ್ವಾ.? ಆ ಪಿ.ಡಿ.ಎಫ್ ಫೈಲ್ ಗಳಿಂದ ಪ್ರಿನ್ಟ್ ಔಟ್ ತೆಗೆದುಕೊಳ್ಳುವುದೇ ಕಷ್ಟ ಕಷ್ಟ'' ಎಂದು ತಲೆ ಚಚ್ಚಿಕೊಳ್ಳುತ್ತಾರೆ ನಟಿ ಶಿಲ್ಪಾ ಶೆಟ್ಟಿ.

  ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಅರಮನೆ 'ಕಿನಾರೆ'ಯ ಅಂದ-ಚೆಂದ ನೋಡಿದ್ದೀರಾ.?ಕರಾವಳಿ ಕುವರಿ ಶಿಲ್ಪಾ ಶೆಟ್ಟಿ ಅರಮನೆ 'ಕಿನಾರೆ'ಯ ಅಂದ-ಚೆಂದ ನೋಡಿದ್ದೀರಾ.?

  ಅಂದ್ಹಾಗೆ, ಲಾಂಗ್ ಗ್ಯಾಪ್ ನಂತರ ನಟಿ ಶಿಲ್ಪಾ ಶೆಟ್ಟಿ ಬಣ್ಣದ ಬದುಕಿಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 'ನಿಕಮ್ಮಾ' ಮತ್ತು 'ಹಂಗಾಮಾ-2' ಚಿತ್ರಗಳಲ್ಲಿ ಶಿಲ್ಪಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.

  English summary
  Shilpa Shetty reveals that her husband Raj Kundra calls her BBC.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X