ಪಟಾಕಿ ತುಂಬಿದ ಅನಾನಸ್ ಹಣ್ಣು ನೀಡಿ ಗರ್ಭಿಣಿ ಆನೆಯ ಹತ್ಯೆ: ಅಮಾನುಷ ಕೃತ್ಯಕ್ಕೆ ಸಿನಿತಾರೆಯರ ಆಕ್ರೋಶ

ಕೇರಳದ ಗರ್ಭಿಣಿ ಆನೆ ಹತ್ಯೆಗೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. . ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ತಿನ್ನಲು ನೀಡಿ ಆನೆಯನ್ನು ಹತ್ಯೆ ಮಾಡಲಾಗಿದೆ. ಅರಣ್ಯ ಅಧಿಕಾರಿಯೊಬ್ಬರು ಈ ಭೀಕರ ಘಟನೆಯ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಈ ದುರಂತ ಘಟನೆ ಬೆಳಕಿಗೆ ಬಂದಿದೆ.

ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಕಾಡಾನೆಯೊಂದು ಆಹಾರ ಅರಸುತ್ತ ಕಾಡಿನಿಂದ ಹೊರಬಂದು ಸಮೀಪದ ಹಳ್ಳಿಯಲ್ಲಿ ಸುತ್ತಾಡುತ್ತಿತ್ತು. ಆನೆ ಹಳ್ಳಿಗೆ ಬಂದ ಭಯಕ್ಕೆ ಸ್ಥಳಿಯರು ಅನಾನಸ್ ಹಣ್ಣು ನೀಡಿದ್ದಾರೆ. ಆದರೆ ಅದರೊಳಗೆ ಪಟಾಕಿ ಇಟ್ಟು ಸೇವಿಸಲು ಕೊಟ್ಟಿದ್ದಾರೆ. ಆನೆ ಹಣ್ಣನ್ನು ಬಾಯಿಗೆ ಇಡುತ್ತಿದ್ದಂತೆ ಸ್ಪೋಟಗೊಂಡಿದೆ. ಗರ್ಭವತಿಯಾಗಿದ್ದ ಆನೆ ದುರಂತ ಸಾವನ್ನಪ್ಪಿದೆ.

ಈ ಘಟನೆ ಖಂಡಿಸಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಸಿನಿತಾರೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಕಲಾವಿದರು ಸೇರಿದಂತೆ ದಕ್ಷಿಣಭಾರತೀಯ ಸಿನಿಮಂದಿಯೂ ಈ ಘಟನೆ ಖಂಡಿಸಿ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

ನ್ಯಾಯಕ್ಕಾಗಿ ಅಭಿಯಾನ

ನ್ಯಾಯಕ್ಕಾಗಿ ಅಭಿಯಾನ

ಬಾಯಲ್ಲಿ ಹಣ್ಣು ಸ್ಪೋಟಗೊಂಡ ನಂತರ ಆನೆ ನೋವು ತಾಳಲಾರದೆ ನೀರಿನಲ್ಲಿಯೇ ಇದ್ದು, ಕೊನೆಗೆ ಅಲ್ಲೆ ಪ್ರಾಣಬಿಟ್ಟಿದೆ. 18-20 ತಿಂಗಳಲ್ಲಿ ಆನೆ ಜನ್ಮ ನೀಡುತ್ತಿತ್ತು. ಆನೆ ಗಾಯಗೊಂಡ ನಂತರವೂ ಯಾವುದೆ ಮನೆಯನ್ನು ಪುಡಿಮಾಡಿಲ್ಲ. ಯಾವ ಮನುಷ್ಯನಿಗೂ ತೊಂದರೆ ಕೊಟ್ಟಿಲ್ಲ. ನೋವಿನಿಂದ ನೀರಿನಲ್ಲಿಯೆ ಪ್ರಾಣಬಿಟ್ಟಿದೆ. ಪ್ರಾಣಿಗಳು ಬಹಳಷ್ಟು ಮನುಷ್ಯರನ್ನು ನಂಬುತ್ತವೆ. ಇದೂ ಅತಿಯಾದ ಕ್ರೂರ. ನಿಮಗೆ ಸಹಾನುಭೂತಿ ಮತ್ತು ದಯೆ ಇಲ್ಲದಿದ್ದಾಗ ಮನುಷ್ಯ ಎಂದು ಕರೆಯಲು ಅರ್ಹರಲ್ಲ. ಕಾನೂನಿನ ಯೋಗ್ಯ ಮರಣದಂಡನೆ ಬೇಕು. ತಪ್ಪಿತಸ್ಥರಿಗೆ ಕೆಟ್ಟ ರೀತಿಯಲ್ಲಿ ಶಿಕ್ಷೆಯಾಗಬೇಕು. ಇವರು ಕಾನೂನಿಗೆ ಹೆದರುವರಲ್ಲ. ಇದು ತುಂಬಾ ಕಷ್ಟಕರವಾದರೂ, ಅಪರಾಧವನ್ನು ಮಾಡಿದ ವ್ಯಕ್ತಿಯ ಕಂಡುಹಿಡಿದು ಮತ್ತು ಅದಕ್ಕೆ ತಕ್ಕ ಅವರಿಗೆ ಶಿಕ್ಷೆಯಾಗುತ್ತೆ ಎಂದು ನಾನು ಭಾವಿಸಿದ್ದೀನಿ" ಎಂದು ಅನೇಕರು ಶೇರ್ ಮಾಡುತ್ತಿದ್ದಾರೆ.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

ಈ ಘಟನೆ ನೋಡಿ ಆಘಾತಕೊಂಡ ನಟಿ ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ. ಆನೆಯ ಸಾವಿನ ಸುದ್ದಿಯ ಪೋಸ್ಟ್ ಶೇರ್ ಮಾಡಿ " ಇದಕ್ಕಾಗಿಯೇ ನಮಗೆ ಪ್ರಾಣಿಗಳ ಕ್ರೌರ್ಯದ ವಿರುದ್ಧ ಕಠಿಣ ಕಾನೂನಗಳು ಬೇಕಾಗುತ್ತವೆ" ಎಂದು ಹೇಳಿದ್ದಾರೆ.

ಅಲಿಯಾ ಭಟ್

ಅಲಿಯಾ ಭಟ್

ಆನೆಯ ಸಾವಿನ ಸುದ್ದಿಯ ಬಗ್ಗೆ ಕೋಪಗೊಂಡ ಅಲಿಯಾ ಕರಳುಹಿಂಡುವ ಘಟನೆಯನ್ನು ಶೇರ್ ಮಾಡಿ "ಭಯಾನಕ ಇದೂ ಭಯಾನಕ, ನಾವು ಅವುಗಳ ಧ್ವನಿ ಮತ್ತು ಸಹಬಾಳ್ವೆಯಾಗಿರಬೇಕು. ಇದು ಹೃದಯ ವಿದ್ರಾವಕವಾಗಿದೆ" ಎಂದು ಹೇಳಿದ್ದಾರೆ.

ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್

ನಟಿ ಶ್ರದ್ಧಾ ಕಪೂರ್ ಸಹ ಆನೆಯ ಕಾರ್ಟೂನ್ ಫೋಟೋ ಶೇರ್ ಮಾಡಿದ್ದಾರೆ. ಬೇಸರ ವ್ಯಕ್ತಪಡಿಸಿರುವ ಶ್ರದ್ಧಾ ಇದು ಅತಿಯಾದ ಕ್ರೂರ ಎಂದಿದ್ದಾರೆ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದಿದ್ದಾರೆ.

ನಟಿ ವರಲಕ್ಷ್ಮಿ ಶರತ್ ಕುಮಾರ್

ನಟಿ ವರಲಕ್ಷ್ಮಿ ಶರತ್ ಕುಮಾರ್

ಜನರು ರಾಕ್ಷಸರು ಈ ಬಡ ಪ್ರಾಣಿಗಳಲ್ಲ. ಸಾಕ್ಷರತೆಗೆ, ಮಾನವೀಯತೆ ಅಥವಾ ಅನುಭೂತಿಯಾಗೂ ಸಂಬಂಧವಿಲ್ಲ. ಅಥವಾ ಸಾಮಾನ್ಯ ಜ್ಞಾನವನ್ನು ಹೊಂದಿಲ್ಲ ಎಂದು ಗೊತ್ತಾಗುತ್ತೆ. ಅಸಹ್ಯವಾಗುತ್ತೆ. ಕೊರೊನಾ ಈ ರಾಕ್ಷಸರನ್ನು ಬಲಿಪಡೆಯುತ್ತೆ. ಅವರು ಖಂಡಿತಾ ಸಾಯುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
Film stars Shraddha Kapoor, Anushka Sharma, Alia Bhatt others outrage against a pregnant elephant death after being fed a pineapple stuffed with crackers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X