For Quick Alerts
  ALLOW NOTIFICATIONS  
  For Daily Alerts

  ಶ್ರದ್ಧಾ ಶ್ರೀನಾಥ್ ಹಿಂದಿ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ

  |

  'ಆಪರೇಷನ್ ಅಲಮೇಲಮ್ಮ' ಚಿತ್ರದ ನಂತರ ನಟಿ ಶ್ರದ್ಧಾ ಶ್ರೀನಾಥ್ ಎಲ್ಲೋದ್ರು. 'ದಿ ವಿಲನ್' ಚಿತ್ರದ ಹಾಡೊಂದರಲ್ಲಿ ಶ್ರದ್ಧಾ ಹೆಜ್ಜೆ ಹಾಕಿದ್ದು ಬಿಟ್ಟರೇ ಯಾವ ಕನ್ನಡ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ ಯಾಕೆ ಎಂಬ ಕುತೂಹಲ ಕಾಡ್ತಿದೆ.

  ಆದ್ರೆ, ನೀವು ಅಂದುಕೊಂಡಂತೆ ಶ್ರದ್ಧಾ ಎಲ್ಲೂ ಹೋಗಿಲ್ಲ. ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೂ ಅಭಿನಯಿಸ್ತಿದ್ದಾರೆ.

  ಶ್ರದ್ಧಾ ಶ್ರೀನಾಥ್ ಅಭಿನಯದ ಚೊಚ್ಚಲ ಹಿಂದಿ ಸಿನಿಮಾ ಆರಂಭ

  ಸದ್ಯ, ಹಿಂದಿಯಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯದ 'ಮಿಲನ್ ಟಾಕೀಸ್' ಚಿತ್ರದ ರಿಲೀಸ್ ಡೇಟ್ ಪ್ರಕಟವಾಗಿದೆ. ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಪ್ರಕಟ ಮಾಡಿದ್ದು, ಮಾರ್ಚ್ 15 ರಂದು 'ಮಿಲನ್ ಟಾಕೀಸ್' ತೆರೆಕಾಣಲಿದೆ.

  ಶ್ರದ್ಧಾ ಶ್ರೀನಾಥ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಅಲಿ ಫೈಜಲ್ ನಾಯಕನಾಗಿ ನಟಿಸಿದ್ದಾರೆ. ರೀಚಾ ಸಿನ್ಹಾ, ಆಷತೋಶ ರಾಣ, ಸಂಜಯ್ ಮಿಶ್ರಾ, ಸಿಕಂದರ್ ಖೇರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಟಿಗ್ಮಾಂಶು ಧೂಲಿಯಾ ನಿರ್ದೇಶನ ಮಾಡಿದ್ದಾರೆ.

  ಮತ್ತೊಂದೆಡೆ ಸೌತ್ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಯು ಟರ್ನ್ ಹುಡುಗಿ, ಸತೀಶ್ ನೀನಾಸಂ ಅಭಿನಯದ 'ಗೋದ್ರಾ', ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಕಡೆ ಅಜಿತ್ ಜೊತೆ 'ಪಿಂಕ್' ಚಿತ್ರದ ರೀಮೇಕ್, ನಾನಿ ಜೊತೆ 'ಜೆರ್ಸಿ', 'ಮಾರ' ಮತ್ತು 'ಕೆ13' ಪ್ರಾಜೆಕ್ಟ್ ಗಳಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ.

  English summary
  Ali Fazal and Shraddha Srinath starrer MilanTalkies movie to release on 15 March 2019. directed by Tigmanshu Dhulia.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X