For Quick Alerts
  ALLOW NOTIFICATIONS  
  For Daily Alerts

  ನಂಬಿದ್ದ ಗೆಳೆಯರು ಬೆನ್ನಿಗೆ ಚೂರಿ ಹಾಕಿದರು: ನಟ ಶ್ರೇಯಸ್

  |

  ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಇನ್ನೂ ಹಲವರೊಟ್ಟಿಗೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಬಾಲಿವುಡ್‌ ಪ್ರತಿಭಾವಂತ ನಟ ಶ್ರೇಯಸ್ ತಲ್ಪಾಡೆ 'ನಾನು ನಂಬಿದ್ದ ಗೆಳೆಯರೇ ನನಗೆ ಮೋಸ ಮಾಡಿದರು' ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  'ನನ್ನ ಕೆಲವು ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಸೋತಾಗ ನನ್ನ ಕೆಲವು ಗೆಳೆಯರೇ ನನ್ನೊಂದಿಗೆ ನಟಿಸಲು ಹಿಂದೇಟು ಹಾಕಿದರು. ನಾನು ಅವರು ಕರೆದಾಗ ಅವರ ಸಿನಿಮಾಗಳಲ್ಲಿ ನಟಿಸಿದ್ದೆ. ಆದರೆ ನಾನು ಸೋತಾಗ ಅವರು ನನ್ನಿಂದ ಅಂತರ ಕಾಯ್ದುಕೊಂಡರು' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಶ್ರೇಯಸ್ ತಲ್ಪಾಡೆ.

  'ನಾನು ಗೆಳೆಯರು ಎಂದು ನಂಬಿದ್ದ ಕೆಲವರು ನನ್ನನ್ನು ಪರಿಗಣಿಸಿದೆ ಅವರು ಮಾತ್ರವೇ ತಂಡ ಕಟ್ಟಿಕೊಂಡು ಸಿನಿಮಾ ಮಾಡಿ ನನ್ನ ಬೆನ್ನಿಗೆ ಚೂರಿ ಹಾಕಿದರು. ಅವರು ನನಗೆ ಗೆಳೆಯರೋ ಅಲ್ಲವೋ ಎಂಬ ಪ್ರಶ್ನೆಯನ್ನು ಈಗ ನನಗೆ ನಾನೆ ಕೇಳಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಶ್ರೇಯಸ್.

  ಹದಿನೈದು ವರ್ಷಗಳಿಂದಲೂ ಬಾಲಿವುಡ್‌ನಲ್ಲಿರುವ ಶ್ರೇಯಸ್, 'ಈಗ ನಾನು ಗೆಳೆಯರು ಮತ್ತು ಪರಿಚಯಸ್ಥರ ಮಧ್ಯೆ ವ್ಯತ್ಯಾಸ ಕಂಡುಕೊಂಡಿದ್ದೇನೆ' ಎಂದಿದ್ದಾರೆ.

  'ಸಿನಿಮಾರಂಗದಲ್ಲಿ 90% ಜನ ಕೇವಲ ಪರಿಚಯಸ್ಥರಷ್ಟೆ. ಇನ್ನುಳಿದ 10% ಜನ ಮಾತ್ರ ನೀವು ಗೆದ್ದಾಗ ನೀವು ಚೆನ್ನಾಗಿ ಪ್ರದರ್ಶನ ನೀಡಿದಾಗ ಸಂತೋಷ ಪಡುತ್ತಾರೆ' ಎಂದಿದ್ದಾರೆ.

  Fake! Fake!! ಇದು ನಾನಲ್ಲ ಹುಷಾರಾಗಿರಿ ಎಂದ ಸೋನು ಸೂದ್ | Filmibeat Kannada

  ನಾಗೇಶ್ ಕುಕನೂರ್ ನಿರ್ದೇಶನದ 'ಇಕ್ಬಾಲ್' ಸಿನಿಮಾದ ಮೂಲಕ ಶ್ರೇಯಸ್ ತಲ್ಪಾಡೆ ನಾಯಕ ನಟನಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಅದಾದ ನಂತರ 'ಓಂ ಶಾಂತಿ ಓಂ' ಸಿನಿಮಾದಲ್ಲಿ ಶಾರುಖ್ ಖಾನ್ ಗೆಳೆಯನ ಪಾತ್ರದಲ್ಲಿ ನಟಿಸಿದರು. ರೋಹಿತ್ ಶೆಟ್ಟಿ ನಿರ್ದೇಶನದ 'ಗೋಲ್ ಮಾಲ್' ಸರಣಿ ಸಿನಿಮಾಗಳಲ್ಲಿ ಶ್ರೇಯಸ್ ನಟಿಸಿದ್ದಾರೆ. 2019 ರ 'ಸೆಟ್ಟರ್' ಬಳಿಕ ಇನ್ನಾವುದೇ ಸಿನಿಮಾದಲ್ಲಿ ಶ್ರೇಯಸ್ ನಟಿಸಿಲ್ಲ.

  English summary
  Actor Shreyas Talpade said some friends in Bollywood backstabbed him. He said they did not consider me for their movie. In back he acted in some movie for them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X