For Quick Alerts
  ALLOW NOTIFICATIONS  
  For Daily Alerts

  ಎರಡು ವರ್ಷಗಳ ಬಳಿಕ ಮಗುವಾದ ವಿಚಾರ ಬಹಿರಂಗ ಪಡಿಸಿದ ನಟಿ ಶ್ರಿಯಾ ಶರಣ್

  By ಫಿಲ್ಮಿಬೀಟ್ ಡೆಸ್ಕ್
  |

  ಖ್ಯಾತ ನಟಿ ಶ್ರಿಯಾ ಶರಣ್ ಯಾರಿಗೆ ತಾನೆ ಗೊತ್ತಿಲ್ಲ. ದಕ್ಷಿಣ ಭಾರತೀಯ ಚಿತ್ರಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಮಿಂಚಿರುವ ಶ್ರಿಯಾ ಮದುವೆ ನಂತರ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಒಂದು ಸಮಯದ ಬಹುಬೇಡಿಕೆಯ ನಟಿ ಶ್ರಿಯಾ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಶ್ರೀಯಾ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಶ್ರಿಯಾ ತನಗೆ ಮಗುವಾಗಿರುವ ವಿಚಾರವನ್ನು ಬಹಿರಂಗ ಪಡಿಸಿರಲಿಲ್ಲ. ಹೌದು, ಶ್ರಿಯಾ ಶರಣ್ ತಾಯಿಯಾಗಿ ಎರಡು ವರ್ಷಗಳಾಗಿದೆ. ಇದೀಗ ತಾಯಿಯಾದ ಸಂತಸವನ್ನು ಹಂಚಿಕೊಳ್ಳುವ ಜೊತೆಗೆ ಮಗುವಿನ ವಿಡಿಯೋವನ್ನು ಶೇರ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  2020ರಲ್ಲಿಯೇ ಶ್ರಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಶ್ರಿಯಾ ದಂಪತಿ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಆದರೆ ವಿಚಾರವನ್ನು ಶ್ರಿಯಾ ಎಲ್ಲೂ ಹೇಳಿಕೊಂಡಿಲ್ಲ. ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ತಾಯಿಯಾದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  "2020ರ ಕ್ವಾರಂಟೈನ್​ ತುಂಬಾನೆ ಅದ್ಭುತವಾಗಿತ್ತು. ಇಡೀ ಪ್ರಪಂಚ ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚ ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣು ಮಗುವನ್ನು ಸ್ವಾಗತ ಮಾಡಿದೆವು" ಎಂದು ಬರೆದುಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಅಂದಹಾಗೆ ಅನೇಕ ನಟಿಮಣಿಯರು ಮದುವೆಯಾದ ವಿಚಾರವನ್ನು, ಮಗುವಾದ ವಿಚಾರವನ್ನು ಬಹಿರಂಗ ಪಡಿಸಲು ಹಿಂದೇಟು ಹಾಕುತ್ತಾರೆ. ಗ್ಲಾಮರ್ ಲೋಕದಲ್ಲಿ ಬೇಡಿಕೆ ಕಡಿಮೆಯಾಗುತ್ತೆ ಎನ್ನುವ ಕಾರಣಕ್ಕೆ ಕೆಲವು ನಟಿಮಣಿಯರು ವೈಯಕ್ತಿಕ ವಿಚಾರಗಳನ್ನು ಆದಷ್ಟು ಗ್ಲಾಮರ್ ಲೋಕದಿಂದ ದೂರ ಇಟ್ಟಿರುತ್ತಾರೆ. ಶ್ರಿಯಾ ಕೂಡ ಅದೆ ದುರುದ್ದೇಶದಿಂದ ಮಗುವಾದ ವಿಚಾರ ಬಹಿರಂಗ ಪಡಿಸಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ಕೆಲವರು ಇದು ಅವರ ವೈಯಕ್ತಿಕ ವಿಚಾರ, ಹೇಳುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಕಾಮೆಂಟ್ ಮಾಡುವ ಮೂಲಕ ನಟಿಯರ ಪರ ಮಾತನಾಡಿದ್ದಾರೆ.

  ಒಟ್ಟಿನಲ್ಲಿ ನಟಿ ಶ್ರಿಯಾ ಸದ್ಯ ಮುದ್ದಾದ ಮಗಳ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಅಂದಹಾಗೆ 2018ರಲ್ಲಿ ವಿದೇಶಿ ಯುವಕ ಆಂಡ್ರೆ ಕೋಶ್ಚೀವ್ ಜೊತೆ ಹಸೆಮಣೆ ಏರಿರುವ ಶ್ರಿಯಾ ಮದುವೆ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದ ಶ್ರಿಯ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಶ್ರಿಯಾ ಕಾಣಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಶ್ರಿಯಾ ಎಲ್ಲೂ ಬಹಿರಂಗ ಪಡಿಸಿಲ್ಲ.

  ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗಲ್ಲಿ ಮಿಂಚಿರುವ ನಟಿ ಶ್ರಿಯಾ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಅರಸು ಸಿನಿಮಾದಲ್ಲಿ ಶ್ರಿಯಾ ಕಾಣಿಸಿಕೊಂಡಿದ್ದಾರೆ. ಬಳಿಕ ನಿರ್ದೇಶಕಿ ರೂಪ ಅಯ್ಯರ್ ಅವರ ಚಂದ್ರ ಸಿನಿಮಾದಲ್ಲೂ ಶ್ರಿಯಾ ನಾಯಕಿಯಾಗಿ ಮಿಂಚಿದ್ದಾರೆ.

  English summary
  Actress Shriya Saran reveals she is blessed with a baby girl, shares vedeo her baby.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X