»   » ಹಾಟ್ ಅಂಡ್ ಬೋಲ್ಡ್ ಸೀನ್ ನಲ್ಲಿ ಶ್ರುತಿ ಹಾಸನ್

ಹಾಟ್ ಅಂಡ್ ಬೋಲ್ಡ್ ಸೀನ್ ನಲ್ಲಿ ಶ್ರುತಿ ಹಾಸನ್

Posted By: ರವಿಕಿಶೋರ್
Subscribe to Filmibeat Kannada
ನಟಿ ಶ್ರುತಿ ಹಾಸನ್ ಹಾಟ್ ಅಂಡ್ ಬೋಲ್ಡ್ ಸೀನ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಚಿತ್ರದ ಹಾಟ್ ಸನ್ನಿವೇಶಗಳು ಶ್ರುತಿ ಅಭಿಮಾನಿಗಳ ನಿದ್ದೆಗೆಡಿಸಿವೆ. ಬಾಲಿವುಡ್ 'ಡಿ-ಡೇ' ಚಿತ್ರದ ಹಾಟ್ ಸನ್ನಿವೇಶಗಳಿವು. ಚಿತ್ರದಲ್ಲಿ ಶ್ರುತಿ ಅವರದು ವೇಶ್ಯಯ ಪಾತ್ರವಂತೆ. ಹಾಗಾಗಿ ಈ ಬೋಲ್ಡ್ ಅಭಿನಯ ಎನ್ನುತ್ತಾರೆ.

ರಾ ಏಜೆಂಟ್ ಆಗಿ ಅರ್ಜುನ್ ರಾಂಪಾಲ್, ಕರಾಚಿಯ ವೇಶ್ಯೆಯಾಗಿ ಶ್ರುತಿ ಹಾಸನ್ ಕಾಣಿಸಲಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿವ ರಾ ಏಜೆಂಟ್ ಕರಾಚಿಯ ವೇಶ್ಯೆಯ ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಅಲ್ಲಿಂದ ಕಥೆ ಹೊಸ ತಿರುವು ಪಡೆಯುತ್ತಾ ಸಾಗುತ್ತದೆ.

ಇಷ್ಟಕ್ಕೂ ರಾ ಏಜೆಂಟ್ ಪಾಕಿಸ್ತಾನಕ್ಕೆ ಯಾಕೆ ಭೇಟಿ ಕೊಟ್ಟ. ಕರಾಚಿ ಚೆಲುವೆ ಜೊತೆ ಚಕ್ಕಂದ ಆಡಲು, ಹಾಸಿಗೆ ಮೇಲೆ ಉರುಳಾಡಲಂತೂ ಅಲ್ಲ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನನ್ನು ಭಾರತಕ್ಕೆ ಕರೆತರಲು ಆತ ಅಲ್ಲಿಗೆ ಹೋಗಿರುತ್ತಾನೆ. ಅಲ್ಲಿಂದ ವಾಪಸ್ ಬರುತ್ತಾನಾ ಎಂಬುದೇ ಕಥೆ.

ನಿಕಿಲ್ ಅದ್ವಾನಿ ನಿರ್ದೇಶನದ ಈ ಚಿತ್ರದ ಪಾತ್ರವರ್ಗದಲ್ಲಿ ರಿಷಿ ಕಪೂರ್, ಇರ್ಫಾನ್ ಖಾನ್ ಸಹ ಇದ್ದಾರೆ. DAR ಮೋಷನ್ ಪಿಕ್ಚರ್ಸ್ ಹಾಗೂ Emmay Entertainment ಪ್ರೈ ಲಿ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಈ ಚಿತ್ರಕಥೆಗೆ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅವರ ಹತ್ಯೆಯೇ ಸ್ಪೂರ್ತಿ ಎನ್ನುತ್ತಾರೆ ನಿರ್ದೇಶಕರು. ಆಕ್ಷನ್, ಥ್ರಿಲ್ಲಿಂಗ್ ಸನ್ನಿವೇಶಗಳೊಂದಿಗೆ ಚಿತ್ರ ಕುತೂಹಲಭರಿತವಾಗಿ ಸಾಗುತ್ತದಂತೆ. ಆಕ್ಷನ್ ಪ್ರಧಾನ ಚಿತ್ರ ಅನ್ನಿಸಿದರೂ ಮನರಂಜನೆಗೆ ಒತ್ತು ನೀಡಲಾಗಿದಂತೆ.

English summary
Actress Shruti Haasan appears hot and bold in bollywoo film D-day. She plays a prostitute from Napier Road, Karachi. Nikhil Advani directed film starring Arjun Rampal, Rishi Kapoor, Irrfan Khan, Shruti Haasan and Huma Qureshi in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada