For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಸಿದ್ಧಾಂತ್ ಕಪೂರ್‌ಗೆ ನೊಟೀಸ್ ನೀಡಿದ ಬೆಂಗಳೂರು ಪೊಲೀಸರು

  |

  ಜನಪ್ರಿಯ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ, ಸ್ವತಃ ನಟರಾಗಿರುವ ಸಿದ್ಧಾಂತ್ ಕಪೂರ್‌ಗೆ ಬೆಂಗಳೂರಿನ ಪೊಲೀಸರು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

  ಕಳೆದ ತಿಂಗಳು, ನಟ ಸಿದ್ಧಾಂತ್ ಕಪೂರ್ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದರು. ಸಿದ್ಧಾಂತ್ ಅನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪ್ರಾಥಮಿಕ ವಿಚಾರಣೆ ಬಳಿಕ ಠಾಣಾ ಜಾಮೀನಿನ ಮೇಲೆ ಬಿಟ್ಟಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

  ಬೆಂಗಳೂರು ಪೊಲೀಸರು ನೀಡಿರುವ ಸಮನ್ಸ್‌ ಪ್ರಕಾರ ಮುಂದಿನ ಏಳು ದಿನಗಳ ಒಳಗಾಗಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಪ್ರಕರಣದ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗಬೇಕಿದೆ. ತಪ್ಪಿದಲ್ಲಿ ಪೊಲೀಸರು ಸಿದ್ಧಾಂತ್ ಅನ್ನು ಬಂಧಿಸಬಹುದಾಗಿದೆ.

  ಜೂನ್ 12 ರಂದು ಬಂಧಿಸಲಾಗಿತ್ತು

  ಜೂನ್ 12 ರಂದು ಬಂಧಿಸಲಾಗಿತ್ತು

  ಕಳೆದ ಜೂನ್ 12 ರಂದು ಬೆಂಗಳೂರಿನ ಎಂಜಿ ರಸ್ತೆಯ ಪಬ್‌ ಒಂದಕ್ಕೆ ಬಂದಿದ್ದ ಸಿದ್ಧಾಂತ್ ಕಪೂರ್ ಅಲ್ಲಿ ಕೆಲವು ಸ್ನೇಹಿತರೊಡನೆ ಡ್ರಗ್ಸ್ ಸೇವಿಸಿದ್ದರು. ತಡವಾಗಿ ಪಬ್ ನಡೆಸುತ್ತಿದ್ದ ಕಾರಣಕ್ಕೆ ರೇಡ್ ಮಾಡಿದ ಪೊಲೀಸರಿಗೆ ಡ್ರಗ್ಸ್ ದೊರಕಿತ್ತು. ಸಿದ್ಧಾಂತ್ ಹಾಗೂ ಇನ್ನೂ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದು ಅವರ ರಕ್ತದ ಮಾದರಿ ತಪಾಸಣೆಗೆ ಕಳಿಸಿದ್ದರು. ಎಲ್ಲ ನಾಲ್ಕು ಮಂದಿಯೂ ಡ್ರಗ್ಸ್ ಸೇವಿಸಿದ್ದಾಗಿ ಪರೀಕ್ಷೆಯಲ್ಲಿ ಸಾಬೀತಾಗಿತ್ತು.

  ಅಲ್ಲಗಳೆದಿದ್ದ ನಟ ಸಿದ್ಧಾಂತ್ ಕಪೂರ್

  ಅಲ್ಲಗಳೆದಿದ್ದ ನಟ ಸಿದ್ಧಾಂತ್ ಕಪೂರ್

  ಸಿದ್ಧಾಂತ್ ಕಪೂರ್ ಕೊಕೇನ್ ಮತ್ತು ಗಾಂಜಾ ಸೇವಿಸಿರುವುದು ಪರೀಕ್ಷೆಯಲ್ಲಿ ಖಾತ್ರಿಯಾಗಿತ್ತು. ಆದರೆ ಈ ಬಗ್ಗೆ ಮುಂಬೈನಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಸಿದ್ಧಾಂತ್ ಕಪೂರ್, ನಾನು ಪ್ರತಿಬಾರಿ ಹೋಗುವ ಪಬ್ ಅದಾಗಿದ್ದು, ಯಾರೋ ಬೇಕೆಂದೇ ಹೀಗೆ ಮಾಡಿದ್ದಾರೆ. ನನ್ನ ಡ್ರಿಂಕ್ಸ್‌ಗೆ ಯಾರೋ ಮಾದಕ ಪದಾರ್ಥ ಬೆರೆಸಿದ್ದಾರೆ. ನನಗೆ ಸಿಗರೇಟನ್ನು ಸಹ ಬೇರೆ ಯಾರೊ ಕೊಟ್ಟಿದ್ದು, ಅದರಲ್ಲಿ ಗಾಂಜಾ ಇರುವುದು ನನಗೆ ಗೊತ್ತಿರಲಿಲ್ಲ'' ಎಂದಿದ್ದರು. ಜೊತೆಗೆ ಬೆಂಗಳೂರು ಪೊಲೀಸರ ಬಗ್ಗೆ ಉತ್ತಮ ಮಾತುಗಳನ್ನೇ ಆಡಿದ್ದರು. ಪೊಲೀಸರು ಗೌರವದಿಂದ ನಡೆದುಕೊಂಡರು ಎಂದಿದ್ದರು ಸಿದ್ಧಾಂತ್ ಕಪೂರ್.

  ಸಾಕ್ಷಿ ಸಂಗ್ರಹಿಸಿರುವ ಬೆಂಗಳೂರು ಪೊಲೀಸರು

  ಸಾಕ್ಷಿ ಸಂಗ್ರಹಿಸಿರುವ ಬೆಂಗಳೂರು ಪೊಲೀಸರು

  ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಮುಗಿಸಿದ್ದು ಸಿಸಿಟಿವಿ ಫುಟೇಜ್, ಮೊಬೈಲ್ ಚಾಟ್, ದೂರವಾಣಿ ಕರೆ ದಾಖಲೆಗಳು ಸೇರಿ ಇನ್ನೂ ಕೆಲವು ಸಾಕ್ಷಿಗಳನ್ನು ಒಟ್ಟು ಮಾಡಿಕೊಂಡಿದ್ದಾರೆ. ಸಂಗ್ರಹಿಸಿರುವ ಸಾಕ್ಷಿಗಳ ಆಧಾರದ ಮೇಲೆ ಈಗ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಆ ನಂತರ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು.

  ಶ್ರದ್ಧಾ ಕಪೂರ್‌ ಹೆಸರು ಕೇಳಿ ಬಂದಿತ್ತು

  ಶ್ರದ್ಧಾ ಕಪೂರ್‌ ಹೆಸರು ಕೇಳಿ ಬಂದಿತ್ತು

  ಖ್ಯಾತ ನಟ ಶಕ್ತಿ ಕಪೂರ್ ಪುತ್ರ, ನಟಿ ಶ್ರದ್ಧಾ ಕಪೂರ್ ಸಹೋದರನಾಗಿರುವ ಸಿದ್ದಾಂತ್ ಕಪೂರ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಳ್ಳುವುದು ಪಕ್ಕಾ ಎನ್ನಲಾಗುತ್ತಿದೆ. ನಟಿ ಶ್ರದ್ಧಾ ಕಪೂರ್ ಹೆಸರು ಸಹ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿತ್ತು. ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ಶ್ರದ್ಧಾ ಕಪೂರ್ ಅನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು.

  English summary
  Bollywood actor Sidhanth Kapoor summoned by Bengaluru police in Drugs case. He was arrested in Drugs case last month in Bengaluru.
  Saturday, July 23, 2022, 9:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X