»   » 'ಸಿಲ್ಕ್' ಖ್ಯಾತಿಯ ವೀಣಾ ಮಲಿಕ್ ಗೆ ಗಂಡು ಮಗು

'ಸಿಲ್ಕ್' ಖ್ಯಾತಿಯ ವೀಣಾ ಮಲಿಕ್ ಗೆ ಗಂಡು ಮಗು

Posted By:
Subscribe to Filmibeat Kannada

ಕನ್ನಡದ ಸಿಲ್ಕ್ ಸಖತ್ ಹಾಟ್ ಚಿತ್ರದಲ್ಲಿ ತಮ್ಮ ಮೈಮಾಟ ಮೆರೆದಿದ್ದ ಪಾಕಿಸ್ತಾನಿ ಬೆಡಗಿ ವೀಣಾ ಮಲಿಕ್ ಇದೀಗ ಅಮ್ಮನಾಗಿದ್ದಾರೆ. ಯುಎಸ್ ನಲ್ಲಿ ಗಂಡು ಮಗುವಿನ ಜನ್ಮ ನೀಡಿದ್ದಾರೆ ವೀಣಾ ಎಂದು ಅವರ ಪತಿ ಅಸದ್ ಬಷೀರ್ ಖಾನ್ ಟ್ವೀಟಿಸಿದ್ದಾರೆ.

ಅಸದ್ ಬಷೀರ್ ಖಾನ್ ಅವರ ಟ್ವೀಟ್ ಹೀಗಿದೆ, "Thank you Allah Pak 4 blessing us wth a lovely son Abram Khan Khattak. @iVeenaKhan thx 4 giving me biggest happiness." [ಸಿಲ್ಕ್ ಸಖತ್ ಹಾಟ್ ಚಿತ್ರ ವಿಮರ್ಶೆ]


ತಮ್ಮ ಮಗುವಿನ ಅಬ್ರಹಾಂ ಖಾನ್ ಖತ್ತಕ್ ಎಂದು ಹೆಸರಿಟ್ಟಿದ್ದಾರೆ ದಂಪತಿಗಳು. ಕಳೆದ ಡಿಸೆಂಬರ್ ತಿಂಗಳಲ್ಲಿ ಇವರಿಬ್ಬರೂ ಮದುವೆಯಾಗಿದ್ದರು. ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಬಷೀರ್ ಹೇಳಿಕೊಂಡಿದ್ದಾರೆ.

ವೀಣಾ ಮಲಿಕ್ ಅಭಿನಯದ ಸಿಲ್ಕ್ ಸಖತ್ ಹಾಟ್ ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು. ಈ ಚಿತ್ರದಲ್ಲಿ ಅವರದು ವೇಶ್ಯೆಯ ಪಾತ್ರ. ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ ನೂರು ದಿನಗಳನ್ನು ಪೂರೈಸಿತ್ತು ಸಿಲ್ಕ್ ಸಖತ್ ಹಾಟ್.

ಒಂದಷ್ಟು ಮನರಂಜನೆ, ಇನ್ನೊಂದಿಷ್ಟು ಮನಕಲುಕುವ ಸನ್ನಿವೇಶಗಳನ್ನು ಬೆರೆಸಿ ನಿರ್ದೇಶಕ ತ್ರಿಶೂಲ್ ಅವರು ತೆರೆಗೆ ತಂದಿದ್ದರು. ಆರ್ ವಿ ವೆಂಕಟಪ್ಪ ಚಿತ್ರಕ್ಕೆ ಭರ್ಜರಿ ಖರ್ಚು ಮಾಡಿ ತಮ್ಮ ಪುತ್ರ ಅಕ್ಷಯ್ ಅವರನ್ನು ಹೀರೋ ಮಾಡಿದ್ದರು. (ಫಿಲ್ಮಿಬೀಟ್ ಕನ್ನಡ)

English summary
Kannada movie 'Silk Sakkat Hot' fame actress Veena Malik gave birth to a baby boy on Tuesday in the US. Her husband Asad Bashir Khan took to Twitter to share the image of the newborn.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada