For Quick Alerts
  ALLOW NOTIFICATIONS  
  For Daily Alerts

  ಐದೇ ದಿನದಲ್ಲೇ ಭರ್ಜರಿ ದಾಖಲೆ ಬರೆದ 'ಸಿಂಗಂ'

  By * ಜೇಮ್ಸ್ ಮಾರ್ಟಿನ್
  |

  ಅಜಯ್ ದೇವಗನ್ ಗೆ ಹೆಸರು, ಹಣ ಎಲ್ಲವನ್ನು ತಂದುಕೊಟ್ಟ 'ಸಿಂಗಂ' ಚಿತ್ರ ಮತ್ತೊಮ್ಮೆ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಸಿಂಗಂ ರಿಟರ್ನ್ಸ್ ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದ್ದರೂ ಬಾಕ್ಸಾಫೀಸ್ ನಲ್ಲಿ ಮಾತ್ರ ಭರ್ಜರಿ ವ್ಯಾಪಾರ ಮಾಡಿದೆ. ಬಿಡುಗಡೆಯಾದ ಐದೇ ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿ ದಾಖಲೆ ನಿರ್ಮಿಸಿದೆ.

  ಅಜಯ್ ದೇವಗನ್ ಅವರ ಚಿತ್ರಗಳ ಪೈಕಿ ಸಿಂಗಂ ರಿಟರ್ನ್ಸ್ ಎಲ್ಲಾ ದಾಖಲೆ ಮುರಿಯುವ ಕುರುಹು ತೋರಿದೆ. ಅಜಯ್ ಅವರ ಚಿತ್ರವೊಂದು ಇಷ್ಟು ತ್ವರಿತವಾಗಿ 100 ಕೋಟಿ ಕ್ಲಬ್ ಸೇರಿದ್ದು ಇದೇ ಮೊದಲು. ಚಿತ್ರಗಳಿಗೆ ಹಣ ಹೂಡಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುವ ಅಜಯ್ ಅವರಿಗೆ ಈಗ ನಟ, ನಿರ್ಮಾಪಕನಾಗಿ ಬೇಡಿಕೆ ಕುದುರುತ್ತಿದೆ.

  ಹೈದರಾಬಾದ್ ಹಾಗೂ ಮುಂಬೈಯಲ್ಲದೆ ಗೋವಾದಲ್ಲೂ ಚಿತ್ರೀಕರಿಸಲ್ಪಟ್ಟಿರುವ ಸಿಂಗಂ ರಿಟರ್ನ್ಸ್ ಚಿತ್ರದಲ್ಲಿ ಅಜಯ್ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ನಾಯಕಿಯಾಗಿದ್ದು, ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರವಾಗಿದೆ. ಹಿಂದೂ ಸಂತನಿಗೆ ಅಪಮಾನ ಮಾಡಿದ ದೃಶ್ಯಗಳಿವೆ ಎಂದು ಹಿಂದೂ ಸಂಘಟನೆಗಳು ಚಿತ್ರದ ವಿರುದ್ಧ ಕಿಡಿಕಾರಿದ್ದವು, ಇದು ಬಿಟ್ಟರೆ ಸಿಂಗಂ ಘರ್ಜನೆ ಎಲ್ಲೆಡೆ ಸಾಂಗವಾಗಿ ಸಾಗಿದೆ. [ಸಿಂಗಂ ರಿಟರ್ನ್ಸ್ ವಿರುದ್ಧ ಕಿಡಿ]

  ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಸಿಂಗಂ 'ಚಿತ್ರ ಬಾಕ್ಸ್ ಆಫೀಸಲ್ಲಿ ರು.140 ಕೋಟಿ ಬಾಚುವ ಮೂಲಕ ಘರ್ಜಿಸಿತ್ತು. ಇದೀಗ ಸಿಂಗಂ 2 ಬಗ್ಗೆಯೂ ಅದೇ ನಿರೀಕ್ಷೆಗಳಿವೆ. ಸಿಂಗಂ ರಿಟರ್ನ್ಸ್ ಗಳಿಕೆ ವಿವರ ಮುಂದೆ ಓದಿ...

  ಸಲ್ಮಾನ್ ಕಿಕ್ ಗೆ ಕಿಕ್ ನೀಡಲು ಸಜ್ಜು

  ಸಲ್ಮಾನ್ ಕಿಕ್ ಗೆ ಕಿಕ್ ನೀಡಲು ಸಜ್ಜು

  ಸಾಜಿದ್ ನಾಡಿಯಾಡ್ ವಾಲ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ನ ಕಿಕ್ ಚಿತ್ರ ಒಂದು ವಾರದಲ್ಲಿ 163 ಕೋಟಿ ರು ಗಳಿಸಿದ್ದು, ಒಟ್ಟಾರೆ ಭಾರತದ ಮಾರುಕಟ್ಟೆಯಲ್ಲಿ 220 ಕೋಟಿ ರು ಹಾಗೂ ಒಟ್ಟಾರೆ 300 ಕೋಟಿ ರು ಗೂ ಅಧಿಕ ದುಡ್ಡು ಮಾಡಿದೆ.

  ಈಗ ರೋಹಿತ್ ಶೆಟ್ಟಿ ಹಾಗೂ ಅಜಯ್ ದೇವಗನ್ ಅವರ ಸಿಂಗಂ ರಿಟರ್ನ್ಸ್ ಚಿತ್ರ ಐದೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದು, ಸಲ್ಮಾನ್ ಅವರ ಕಿಕ್ ಚಿತ್ರಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.

  ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್

  ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್

  * 100 ಕೋಟಿ ರು ಕ್ಲಬ್ ಸೇರಿದ ಅಜಯ್ ದೇವಗನ್ ಅವರ 5ನೇ ಚಿತ್ರ ಇದಾಗಿದೆ.

  * 100 ಕೋಟಿ ರು ಕ್ಲಬ್ ಸೇರಿದ ರೋಹಿತ್ ಶೆಟ್ಟಿ ಅವರ ಐದನೇ ಚಿತ್ರವಾಗಿದೆ [ನಾಲ್ಕು 100 ಕೋಟಿ ಹಾಗೂ 1 ಚಿತ್ರ 200 ಕೋಟಿ ಗಳಿಸಿದೆ]

  * ರಿಲಯನ್ಸ್ ಸಂಸ್ಥೆಯ ಒಟ್ಟಾರೆ 6ನೇ ಚಿತ್ರ ಈ ಕ್ಲಬ್ ಸೇರಿದೆ

  ಗಳಿಕೆಯ ಬಗ್ಗೆ ತರಣ್ ಆದರ್ಶ್ ಟ್ವೀಟ್

  100 ಕೋಟಿ ರು ಗಳಿಕೆ ಯಾವ ದಿನ ಎಷ್ಟು ದುಡ್ಡು?

  * ಶುಕ್ರವಾರ : 32.09 ಕೋಟಿ ರು

  * ಶನಿವಾರ : 21.05 ಕೋಟಿ ರು

  * ಭಾನುವಾರ : 24.55 ಕೋಟಿ ರು

  * ಸೋಮವಾರ : 14.78 ಕೋಟಿ ರು

  * ಮಂಗಳವಾರ : 8.21 ಕೋಟಿ ರು

  ಭಾರತದಲ್ಲಿ ಒಟ್ಟಾರೆ 5 ದಿನಕ್ಕೆ 100.68 ಕೋಟಿ ರು

  ವಿದೇಶದಲ್ಲಿ ಮೊದಲ ವಾರಾಂತ್ಯದ ಗಳಿಕೆ

  ವಿದೇಶದಲ್ಲಿ ಮೊದಲ ವಾರಾಂತ್ಯದ ಗಳಿಕೆ ಎಷ್ಟು ಬಂದಿತ್ತು .. ತರಣ್ ಟ್ವೀಟ್

  ತ್ವರಿತವಾಗಿ 100 ಕೋಟಿ ರು ಗಳಿಸಿದ ಚಿತ್ರ

  ತ್ವರಿತವಾಗಿ 100 ಕೋಟಿ ರು ಗಳಿಸಿದ ಚಿತ್ರ

  ತ್ವರಿತವಾಗಿ 100 ಕೋಟಿ ರು ಗಳಿಸಿದ ಚಿತ್ರಗಳ ಪೈಕಿ ಅಮೀರ್ ಖಾನ್ ಅವರ ಧೂಮ್ 3 ಮೊದಲ ಸ್ಥಾನದಲ್ಲಿದೆ. 3 ದಿನದಲ್ಲೇ 100 ಕೋಟಿ ರು ಕ್ಲಬ್ ಸೇರಿತ್ತು.

  ರೋಹಿತ್ ಶೆಟ್ಟಿ ಅವರ ಶಾರುಖ್ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಹಾಗೂ ಹೃತಿಕ್ ರೋಷನ್ ಅಭಿನಯದ ಕ್ರಿಶ್ 3 ಚಿತ್ರಗಳು 4 ದಿನಗಳಲ್ಲಿ 100 ಕೋಟಿ ಗಳಿಸಿ ನಂತರದ ಸ್ಥಾನದಲ್ಲಿವೆ.

  ಅಜಯ್ ದೇವಗನ್ ಬಂಪರ್ ಗಳಿಕೆ

  ಅಜಯ್ ದೇವಗನ್ ಚಿತ್ರ ಮೊದಲ ಮೂರು ದಿನಗಳ ಬಂಪರ್ ಗಳಿಕೆ ವಿವರ

  English summary
  Singham Returns which was released on August 15 has made the roaring entry into the 100 Cr club. This is one of Ajay Devgn's film to earn 100 Cr very fast.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X